ಮೂರನೇ ಬಾರಿ ಯುಎಸ್ ಓಪನ್ ಟೆನಿಸ್ ಪ್ರಶಸ್ತಿ ಗೆದ್ದ ರಾಫೆಲ್ ನಡಾಲ್

ವಿಶ್ವದ ಆಗ್ರಗಣ್ಯ ಆಟಗಾರ ಸ್ಪೇನಿನ ರಾಫೆಲ್ ನಡಾಲ್ ಮೂರನೇ ಬಾರಿಗೆ ಯುಎಸ್ ಓಪನ್ ಟೆನಿಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಜೂನ್ ತಿಂಗಳಿನಲ್ಲಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದ ಬಳಿಕ ಈ ವರ್ಷದಲ್ಲಿ ಎರಡನೇ ಗ್ರಾನ್ ಸ್ಲಾಮ್ ಗೆದ್ದಿರುವ ನಡಾಲ್ ಗೆ ಇದು 16ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯಾಗಿದೆ. ಪ್ರಶಸ್ತಿ ಸುತ್ತಿನಲ್ಲಿ ನಡಾಲ್ ಚೊಚ್ಚಲ ಬಾರಿಗೆ ಯುಎಸ್ ಓಪನ್ ಫೈನಲ್ ಗೇರಿದ್ದ ಕೆವಿನ್ ಆಂಡರ್ಸನ್ ರನ್ನು 6-3, 6-3, 6-4 ನೇರ ಸೆಟ್​ಗಳಿಂದ ಸೋಲಿಸಿದರು.

0

Leave a Reply

Your email address will not be published. Required fields are marked *