ಈಗ ಶುರುವಾಗಿದೆ ಕ್ವಿಲ್ಲಿಂಗ್ ಟ್ರೆಂಡ್​​​​..

ದಿನಕ್ಕೊಂದು ಫ್ಯಾಷನ್, ದಿನಕ್ಕೊಂದು ಟ್ರೆಂಡ್ ಅಂತ ಬದಲಾಗ್ತಾನೇ ಇರುತ್ತೆ ಸಿಲಿಕಾನ್ ಸಿಟಿಯ ರಂಗಬೀರಂಗಿ ದುನಿಯಾ. ಈ ನಡುವೆ ಸದ್ದು ಮಾಡ್ತಿದೆ ಕ್ವಿಲ್ಲಿಂಗ್ ಗೃಹಾಲಂಕಾರಿಕ ವಸ್ತುಗಳು.

ನಮ್ಮ ಮನೆ ಚೆನ್ನಾಗಿ ಕಾಣಬೇಕು ಅನ್ನೋ ಆಸೆ ಯಾರಿಗ್​​ ಇರಲ್ಲ ಹೇಳಿ, ಎಲ್ಲರಿಗೂ ಇರುತ್ತೆ. ಅದಕ್ಕಾಗಿ ಸಖತ್ ಟ್ರೇಂಡಿ ವಸ್ತುಗಳನ್ನು ನಾವು ಅಲ್ಲಿ ಇಲ್ಲಿ ಅಂತ ಹುಡುಕ್ತಾನೇ ಇರ್ತೀವಿ. ಅದೆಷ್ಟೋ ಸಾವಿರಗಳನ್ನು ತೆತ್ತು ವಸ್ತುಗಳನ್ನು ತಂದು ಮನೆಯಲ್ಲಿಟ್ಟು ಖುಷಿ ಪಡ್ತೀವಿ. ಆದರೆ ನಿಮಗೆ ಗೊತ್ತಾ? ನಿಮ್ಮ ಮನೆಯ ಅಂದವನ್ನು ಹೆಚ್ಚಿಸುವ ವಸ್ತುಗಳನ್ನು ನೀವೇ ತಯಾರಿಸಬಹುದು.

ಹೌದು ಸದ್ಯ ಮಾರುಕಟ್ಟೆಯಲ್ಲಿ ಎವರ್ ಗ್ರೀನ್ ಟ್ರೆಂಡ್ ಕ್ರಿಯೇಟ್ ಮಾಡಿರೋದು ಕ್ವಿಲ್ಲಿಂಗ್ ಇಯರ್ ರಿಂಗ್ಸ್. ಇದೀಗ ಕ್ವಿಲ್ಲಿಂಗ್ ಟೆಕ್ನಿಕ್ ಬಳಸಿ, ನಿಮ್ಮ ಮನೆಯಲ್ಲಿಡಬಹುದಾದ ಟ್ರೆಂಡಿ ಗೃಹಾಲಂಕಾರಿಕ ವಸ್ತುಗಳನ್ನು ತಯಾರಿಸಬಹುದು. ಈ ಹೊಸ ಟೆಕ್ನಿಕ್ ಬಳಸಿ, ವಿವಿಧ ಪ್ರಯೋಗ ಮಾಡಿ ಸಕ್ಸಸ್ ಆಗಿದ್ದಾರೆ ಜೆ.ಪಿ.ನಗರದ ನಿವಾಸಿ ಐಶ್ವರ್ಯ. ಕ್ವಿಲ್ಲಿಂಗ್ ಗಣೇಶನಿಂದ ಆರಂಭವಾದ ಇವರ ಈ ಹೊಸ ಪ್ರಯೋಗ ದೇಶ ವಿದೇಶಗಳಲ್ಲೂ ಡಿಮ್ಯಾಂಡ್ ಕ್ರಿಯೇಟ್ ಮಾಡಿದೆ.

ಅತೀ ಕಡಿಮೆ ವೆಚ್ಚದಲ್ಲಿ ಸುಂದರ ಕಲಾಕೃತಿಗಳನ್ನು ಕ್ವಿಲ್ಲಿಂಗ್ ನಿಂದ ತಯಾರಿ ಮಾಡಬಹುದು. ಇದನ್ನು ಸ್ವಂತಕ್ಕೆ ಬಳಸುವ ಜೊತೆಗೆ ವಿವಿಧ ಕಾರ್ಯಕ್ರಮಗಳಲ್ಲಿ ಗಿಫ್ಟ್ ರೂಪದಲ್ಲಿ ಕೂಡ ನೀಡಬಹುದು. ಗಿಫ್ಟ್ ಗಳಿಗಾಗಿಯೇ ಕ್ವಿಲ್ಲಿಂಗ್ ಐಟಮ್ಸ್ ಫೇಮಸ್ ಆಗ್ತಿದೆ. ಕ್ವಿಲ್ಲಿಂಗ್ ಕುಸುರಿ ಕೆಲಸದಲ್ಲಿ ಸಕ್ರೀಯರಾಗಿರುವ ಐಶ್ವರ್ಯ, ಇದರ ತಯಾರಿ ಕುರಿತಂತೆ ಕಾರ್ಯಾಗಾರಗಳನ್ನು ಕೂಡ ಮಾಡ್ತಾರೆ. ಅವರ ಕ್ವಿಲಿಕ್ ಫೇಸ್ ಬುಕ್ ಫೇಜ್ ನಲ್ಲಿ ಇದರ ಬಗ್ಗೆ ನೀವು ಮಾಹಿತಿ ಪಡೆಯಬಹುದು.

ಒಟ್ನಲ್ಲಿ ಸಿಲಿಕಾನ್ ಸಿಟಿಯಲ್ಲಿ ದಿನಕ್ಕೊಂದು ವಿಧದ ಟ್ರೆಂಡಿ ಐಟಂಗಳು ಮಾರುಕಟ್ಟೆಗೆ ಲಗ್ಗೆ ಇಡ್ತಾನೆ ಇರುತ್ವೆ. ಈ ನಡುವೆ ಕ್ವಿಲ್ಲಿಂಗ್ ಗೃಹಾಲಂಕಾರಿಕ ವಸ್ತುಗಳು ತಮ್ಮದೇ ವಿಶೇಷತೆಯಿಂದ ಗ್ರಾಹಕರನ್ನು ಆಕರ್ಷಿಸುತ್ತಿವೆ ಅನ್ನೋದಂತು ಸುಳ್ಳಲ್ಲ.

ಪವಿತ್ರ ಬಿದ್ಕಲ್ ಕಟ್ಟೆ, ಮೆಟ್ರೋ ಬ್ಯುರೋ, ಸುದ್ದಿ ಟಿವಿ.

0

Leave a Reply

Your email address will not be published. Required fields are marked *