ಡಬ್ಬಿಂಗ್​ ವಿಚಾರವಾಗಿ ನಟ ಪುನೀತ್​ ರಾಜ್​ಕುಮಾರ್ ಹೇಳಿಕೆ…..

ಕನ್ನಡದಲ್ಲಿ ಡಬ್ಬಿಂಗ್​ ವಿಚಾರವಾಗಿ ವಾದ ವಿವಾದಗಳು ನಡೀತಾನೇ ಇವೆ. ಇದ್ರ ಬೆನ್ನೆಲೆ  ನಿರ್ದೇಶಕ ಎಸ್.ಎಸ್. ರಾಜಮೌಳಿ ಡಬ್ಬಿಂಗ್​ ಬೇಕು, ಡಬ್ಬಿಂಗ್​ ಇದ್ರೆ ಒಳ್ಳೇಯದು ಎಂದು ಹೇಳಿದ್ರು. ರಾಜಮೌಳಿಯ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ನಟ ಪುನೀತ್​ ರಾಜ್​ಕುಮಾರ್, ”ಡಬ್ಬಿಂಗ್ ಬೇಕು ಎನ್ನುವುದು ನಿರ್ದೇಶಕ ರಾಜಮೌಳಿ ಅವರ ವೈಯಕ್ತಿಕ ಅಭಿಪ್ರಾಯ”. ಆದ್ರೇ ‘ಕನ್ನಡದಲ್ಲಿ ಡಬ್ಬಿಂಗ್ ಸಿನಿಮಾಗಳು ಖಂಡಿತ ಬೇಡ… ಇದು ಇಡೀ ಕನ್ನಡ ಚಿತ್ರರಂಗದ ಅಭಿಪ್ರಾಯ’ ಎಂದು ಹೇಳಿದ್ರು. ಇದೀಗ ಪುನೀತ್​ ರ ಈ ಮಾತಿಗೆ ಡಬ್ಬಿಂಗ್​ ಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದು, ಡಬ್ಬಿಂಗ್ ವಿಚಾರದಲ್ಲಿ ಆರು ಕೋಟಿ ಕನ್ನಡಿಗರ ನಿರ್ಧಾರವನ್ನ ತೆಗೆದುಕೊಳುವುದಕ್ಕೆ ಪುನೀತ್ ರಾಜ್ ಕುಮಾರ್ ಯಾರು? ಅಂತ ಡಬ್ಬಿಂಗ್ ಪರ ಹೋರಾಟಗಾರ ಗಣೇಶ್ ಚೇತನ್ ಎಂಬುವರು ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಬರೆದಿದ್ದಾರೆ.

0

Leave a Reply

Your email address will not be published. Required fields are marked *