ದೇವಸ್ಥಾನದ ಆಸ್ತಿ ಪರಬಾರೆ ವಿಚಾರ ಪಿಡಿಒ ವಿರುದ್ದ ಪ್ರತಿಭಟನೆ

ಹಾವೇರಿ: ದೇವಸ್ಥಾನದ ಆಸ್ತಿ ಪರಬಾರೆ ಮಾಡಿರುವ ಪಿಡಿಓ ವಿರುದ್ಧ ಅಹೋರಾತ್ರಿ ಪ್ರತಿಭಟನೆ ಮಾಡುತ್ತಿರು ಪ್ರತಿಭಟನಾಕಾರರೊಬ್ಬರು ಪ್ರತಿಭಟನಾ ಸ್ಥಳದಲ್ಲಿ ಕುಸಿದು ಬಿದ್ದಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್​​ನಲ್ಲಿ ನಡೆದಿದೆ. ಕುಸಿದು ಬಿದ್ದ ಪ್ರವೀಣ್ ಮಾಸನಕಟ್ಟಿಯನ್ನು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದೆರಡು ದಿನದಿಂದ ಪಿಡಿಓ ಅಮಾನತ್ತು ಮಾಡುವಂತೆ ಒತ್ತಾಯಿಸಿ ದಲಿತ ಸಂಘಟನೆಯ ಕಾರ್ಯಕರ್ತರು ತಹಶೀಲ್ದಾರರ ಕಚೇರಿ ಎದುರು ತಮಟೆ ಬಾರಿಸುವ ಮೂಲಕ ಅಹೋರಾತ್ರಿ ಧರಣಿ ಕುಳಿತಿದ್ದಾರೆ. ಸೌಜನ್ಯಕ್ಕೂ ತಹಶೀಲ್ದಾರ್​​ ಶಕುಂತಲಾ ಚೌಗಲಾ ಪ್ರತಿಭಟನಾ ನಿರತರ ಸಮಸ್ಯೆ ಕೇಳದ ಹಿನ್ನೆಲೆ ತಶೀಲ್ದಾರರನ್ನು ರಾತ್ರಿ 9.30 ರವರಗೆ ಮನೆಗೆ ಬಿಡದಂತೆ ತಡೆಹಿಡಿದಿದ್ದರು.

0

Leave a Reply

Your email address will not be published. Required fields are marked *