ಜಪಾನ್ ಪ್ರಧಾನಿ 2 ದಿನಗಳ ಅಧಿಕೃತ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ… ಗುಜರಾತ್ನ ಅಹಮಾದಾಬಾದ್ಗೆ ಆಗಮಿಸಿದ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರನ್ನ ಪಿಎಂ ಮೋದಿ ಆಲಿಂಗಿಸಿ ಬರಮಾಡಿಕೊಂಡ್ರು.. ಈ ವೇಳೆ ಉಭಯ ನಾಯಕರು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಸಾಬರಮತಿ ಆಶ್ರಮದವರೆಗೆ 8 ಕಿ.ಮೀ ರೋಡ್ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ..ಇದೇ ಮೊದಲ ಬಾರಿಗೆ ನಮ್ಮ ದೇಶದ ಪ್ರಧಾನಿ ಬೇರೆ ದೇಶದ ಪ್ರಧಾನಿಯೊಂದಿಗೆ ರೋಡ್ ಶೋನಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ..ಅಬೆ ಗಾಂಧೀಜಿಯ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದು,ಇಂದು ಸಂಜೆವರೆಗೂ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ..ಇನ್ನು ನಾಳೆ ಭಾರತ ಜಪಾನ್ 12 ನೇ ವಾರ್ಷಿಕ ಸಮ್ಮೇಳನ ನಡೆಯಲಿದ್ದು, ದೇಶದ ಬಹುಮಹತ್ವಾಕಾಂಕ್ಷೆಯ ಬುಲೆಟ್ ಟ್ರೇನ್ ಯೋಜನೆಗೆ ಉಭಯ ನಾಯಕರು ಚಾಲನೆ ನೀಡಲಿದ್ಧಾರೆ..ಹಲವು ಕಾರ್ಯಕ್ರಮಗಳಲ್ಲಿ ಉಭಯ ನಾಯಕರೂ ಭಾಗವಹಿಸಲಿದ್ದಾರೆ..