ಕಜಕಿಸ್ಥಾನ ಭೇಟಿಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ / ಅಸ್ತಾನ: ಶಾಂಘೈ ಸಹಕಾರ ಸಂಸ್ಥೆ ಸಭೆಯಲ್ಲಿ ಭಾಗಿಯಾಗುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಕಜಿಕಿಸ್ತಾನಕ್ಕೆ ತೆರಳಿದ್ದಾರೆ. ಎರಡು ದಿನಗಳ ಕಾಲ ಕಜಕಿಸ್ತಾನದ ಅಸ್ತಾನದಲ್ಲಿ ಸಭೆ ನಡೆಯಲಿದೆ. ಇನ್ನು ಭಾರತ ಶಾಂಘೈ ಸಹಕಾರ ಸಂಸ್ಥೆಯ ಪೂರ್ಣ ಪ್ರಮಾಣದ ಸದಸ್ಯ ರಾಷ್ಟ್ರವಾಗುವ ಕುರಿತು ಈ ವೇಳೆ ಸಹಿ ಹಾಕಲು ವೇದಿಕೆ ಸಿದ್ಧವಾಗಿದೆ. ಈ ವೇಳೆ ಕಜಕಿಸ್ತಾನದ ಅಧ್ಯಕ್ಷ ನೂರ್​​ ಸುಲ್ತಾನ ನಜರ್​​ಬಯೇವ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ವ್ಯಾಪಾರ, ವಾಣಿಜ್ಯ, ಶಿಕ್ಷಣ, ಪ್ರವಾಸೋದ್ಯಮ ಮತ್ತು ಇತರ ಕ್ಷೇತ್ರಗಳ ಕುರಿತು ಚರ್ಚೆ ನಡೆಯಲಿದೆ.

ಭಾರತ ವ್ಯಾಪಾರ ಮತ್ತು ಆರ್ಥೀಕ ಚಟುವಟಿಕೆ ನಡೆಸಲು ಅನುಕೂಲವಾಗುವಂತೆ ಶಾಂಘೈ ಸಹಕಾರ ಸಂಸ್ಥೆಯ ಪೂರ್ಣ ಪ್ರಮಾಣದ ಸದಸ್ಯ ರಾಷ್ಟ್ರವಾಗಲಿದೆ ಎಂಬ ವಿಶ್ವಾಸವನ್ನು ಭಾರತೀಯ ವಿದೇಶಾಂಗ ಇಲಾಖೆಯ ವಕ್ತಾರ ಗೋಪಾಲ್ ಬಗ್ಲಾಯ್ ವ್ಯಕ್ತಪಡಿಸಿದ್ದಾರೆ. ವ್ಯಾಪಾರ, ಸಂಪರ್ಕ, ಇಂಧನ, ಬ್ಯಾಂಕಿಂಗ್ ಮತ್ತು ಭಯೋತ್ಪಾದನೆ ವಿರುದ್ಧದ ಹೋರಾಟ ವಿಷಯಗಳಲ್ಲಿ ಸಹಕಾರ ವಿಷಯದಲ್ಲಿ ಇದರಿಂದ ಅನುಕೂಲವಾಗಲಿದೆ ಎಂದರು.

ಭಾರತ ಶಾಂಘೈ ಸಹಕಾರ ಸಂಸ್ಥೆಯ ಸದಸ್ಯ ರಾಷ್ಟ್ರವಾಗಲಿದೆ. ಶಾಂಘೈ ಸಹಕಾರ ಸಂಸ್ಥೆ ರಾಜಕೀಯ, ವ್ಯಾಪಾರ, ಆರ್ಥಿಕ, ಸಂಶೋಧನೆ, ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ವಿಷಯಗಳನ್ನು ಗುರಿಯಾಗಿರಿಸಿಕೊಂಡಿದೆ ಎಂದು ಜಂಟಿ ಕಾರ್ಯದರ್ಶಿ ಜಿ ವಿ ಶ್ರೀನಿವಾಸ್ ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನಗಳು ಜೂನ್ 24, 2016ರಂದು ತಾಷ್ಕೆಂಟ್​​ನಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿವೆ. ಶಾಂಘೈ ಸಹಕಾರ ಸಂಸ್ಥೆಯ ಪೂರ್ಣ ಪ್ರಮಾಣದ ಸದಸ್ಯ ರಾಷ್ಟ್ರವಾಗುವ ನಿಟ್ಟಿನಲ್ಲಿ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗುವುದು ಎಂದು ಕೂಡ ಅವರು ತಿಳಿಸಿದ್ದಾರೆ. ಭಾರತದ ಕಡೆಯಿಂದ ಎಲ್ಲ ಪ್ರಕ್ರಿಯೆಗಳನ್ನು ಪೂರೈಸಲಾಗುವುದು. ಅಲ್ಲದೇ, ಇದಕ್ಕೆ ಪೂರಕವಾಗಿ ನಡೆಯಬೇಕಾದ ಎಲ್ಲ ಪ್ರಕ್ರಿಯೆಗಳನ್ನು ಭಾರತ ಪೂರ್ಣಗೊಳಿಸಿದೆ ಎಂದು ಚೀನಾ ಹೇಳಿದೆ ಎಂದು ಕೂಡ ಅವರು ಮಾಹಿತಿ ನೀಡಿದರು. ಇನ್ನು ಈ ಸಂಬಂಧ ಪೂರ್ಣ ಪ್ರಕ್ರಿಯೆ ಕಜಿಕಿಸ್ತಾನದ ಅಸ್ತಾನದಲ್ಲಿ ಪೂರ್ಣಗೊಳ್ಳಲಿದೆ ಎಂದು ಕೂಡ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮಧ್ಯ ಏಷ್ಯಾದಲ್ಲಿ ಕಜಕಿಸ್ತಾನ – ಭಾರತದೊಂದಿಗೆ ವ್ಯಾಪಾರ ಕ್ಷೇತ್ರದಲ್ಲಿ 120 ಮಿಲಿಯನ್ ಡಾಲರ್ ವಹಿವಾಟು ನಡೆಯುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ 900 ಮಿಲಿಯನ್ ಡಾಲರ್ ವಹಿವಾಟು ಉಭಯ ರಾಷ್ಟ್ರಗಳ ನಡುವೆ ನಡೆದಿದೆ. ಔಷಧಿ, ಚಹಾ, ತಂಬಾಕು, ದೂರವಾಣಿ ಉಪಕರಣಗಳು ಮತ್ತು ಕಟ್ಟಡ ನಿರ್ಮಾಣ ಉಪಕರಣಗಳನ್ನು ಭಾರತ ಕಜಕಿಸ್ತಾನದಿಂದ ಆಮದು ಮಾಡಿಕೊಳ್ಳುತ್ತಿದೆ. ಇಂಧನ, ಯುರೇನಿಯಂ, ಟೈಟಾನಿಯಂ, ಉಕ್ಕು, ತಾಮ್ರವನ್ನೂ ಕಜಿಕಿಸ್ತಾನ ಭಾರತಕ್ಕೆ ರಫ್ತು ಮಾಡುತ್ತಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *