ಕಾಶ್ಮೀರಕ್ಕೆ ಒಂದು ಲಕ್ಷ ಕೋಟಿ ರೂ. ಪ್ರಧಾನಿ ಅಭಿವೈದ್ಧಿ ಪ್ಯಾಕೇಜ್: ರಾಜನಾಥ್ ಸಿಂಗ್

ಶ್ರೀನಗರ: ಪ್ರಧಾನಮಂತ್ರಿ ಅಭಿವೃದ್ಧಿ ಪ್ಯಾಕೇಜ್ ಅಡಿಯಲ್ಲಿ ಜಮ್ಮು ಕಾಶ್ಮೀರಕ್ಕೆ ₹ 1 ಲಕ್ಷ ಕೋಟಿಗೂ ಹೆಚ್ಚಿನ ನೆರವು ನೀಡುವುದಾಗಿ ಗೃಹಸಚಿವ ರಾಜನಾಥ್ ಸಿಂಗ್ ಭರವಸೆ ನೀಡಿದ್ದಾರೆ. ಕಳೆದ ಶನಿವಾರದಿಂದ 4 ದಿನಗಳ ಕಾಶ್ಮೀರ ಪ್ರವಾಸದಲ್ಲಿರುವ ಅವರು, ಈ ಮೂಲಕ ಕೇಂದ್ರ ಸರ್ಕಾರ ಪಿಡಿಪಿಯೊಂದಿಗೆ ಮೈತ್ರಿಕೂಟ ಅಧಿಕಾರ ನಡೆಸುತ್ತಿರುವ ಕಾಶ್ಮೀರಕ್ಕೆ ಭರ್ಜರಿ ಕೊಡುಗೆ ನೀಡಿದಂತಾಗಿದೆ. ಅಲ್ಲದೇ, ಕೇಂದ್ರ ಸರ್ಕಾರ ಈಗಾಗಲೇ ₹62,599 ಕೋಟಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ವರ್ಷದಲ್ಲಿ ಕೇವಲ 5 ಬಾರಿಯಲ್ಲ, ಅಗತ್ಯಬಿದ್ದಲ್ಲಿ 50 ಬಾರಿಯಾದರೂ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡುವುದಾಗಿ ಅವರು ರಾಜನಾಥ್ ಸಿಂಗ್ ಇದೇ ವೇಳೆ ಭರವಸೆ ನೀಡಿದರು. ಕಾಶ್ಮೀರದಲ್ಲಿ ಅಸ್ತಿತ್ವದಲ್ಲಿರುವ ಸಮಸ್ಯೆಯನ್ನು ಪರಿಹರಿಸುವುದೇ ನಮ್ಮ ಉದ್ದೇಶ ಎಂದು ಅಭಿಪ್ರಾಯಪಟ್ಟರು. ಪ್ರಧಾನಿ ನರೇಂದ್ರ ಮೋದಿವಯರ ಗುಂಡು ಮತ್ತು ಬೈಗುಳ (ಗೋಲಿ ಮತ್ತು ಗಾಲಿ) ವಿವಾದ ಕುರಿತು ಸ್ಪಷ್ಟೀಕರಣ ನೀಡಿದ ಅವರು, ಪ್ರಧಾನಿ ಕಾಶ್ಮೀರಿಗರನ್ನು ಅಪ್ಪಿಕೊಂಡಿದ್ದಾರೆಯೇ ಹೊರತು, ಅವರ ಅಭಿಪ್ರಾಯ ಕಾಶ್ಮೀರಿಗರ ಕುರಿತ ಬೈಗುಳವಲ್ಲ ಎಂದರು. ಇದೇ ಉದ್ದೇಶದಿಂದಲೇ, ಪ್ರಧಾನಿಯವರು ಕಾಶ್ಮೀರ ಸಮಸ್ಯೆಗೆ ಗುಂಡಿನ ದಾಳಿ ಮತ್ತು ಬೈಗುಳ ಪರಿಹಾರವಲ್ಲ ಎಂದಿದ್ದರು ಎಂದರು.

ಇದಕ್ಕೂ ಮುನ್ನ ಪ್ರಧಾನಮಂತ್ರಿ ಅಭಿವೃದ್ಧಿ ಪ್ಯಾಕೇಜ್​​ನಡಿ ಬಿಡುಗಡೆಯಾಗಿರುವ ಹಣವನ್ನು ವಿನಿಯೋಗಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಿದರು. ಈ ವೇಳೆ, ಪಿಡಿಪಿಯ ಸಿಎಂ ಮೆಹಬೂಬ ಮುಫ್ತಿ, ಬಿಜೆಪಿಯ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಬಿ ಬಿ ವ್ಯಾಸ್ ಮತ್ತಿತರ ಅಧಿಕಾರಿಗಳು ಹಾಗೂ ಶ್ರೀನಗರದ ಸಚಿವರು ಹಾಜರಿದ್ದರು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *