ಕನ್ನಡ ಮೂಲದ ನಾಯಕಿಯರನ್ನು ಪರಿಚಯಿಸಿದ ಪಾರ್ವತಮ್ಮ ರಾಜ್​​ಕುಮಾರ್​​

ಬೆಂಗಳೂರು: ಕನ್ನಡ ಚಿತ್ರ ರಂಗದ ಹಿರಿಯ ನಿರ್ಮಾಪಕಿ 16 ದಿನಗಳ ಕಾಲ ಸಾವು ಬದುಕಿನ ಮಧ್ಯೆ ಹೋರಾಡಿ ಇಂದು ಮುಂಜಾನೆ 4:30ರ ಸುಮಾರಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಪಾರ್ವತಮ್ಮ ರಾಜ್ ಕುಮಾರ್ ಬೆಳಿಗ್ಗೆ ನಿಧನರಾದರೆಂದು ಎಂ ಎಸ್ ರಾಮಯ್ಯ ಆಸ್ಪತ್ರೆಯ ವೈದ್ಯರಾದ ಡಾ. ಸಂಜಯ್ ಕುಲಕರ್ಣಿ ತಿಳಿಸಿದ್ದಾರೆ. ಅವರು ಕಳೆದ 16 ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪಾರ್ವತಮ್ಮ ರಾಜ್ ಕುಮಾರ್ ಅವರ ಪಾರ್ಥಿವ ಶರೀರವನ್ನು ರಾಘವೇಂದ್ರ ರಾಜ್ ಕುಮಾರ್ ಅವರ ಸದಾಶಿವ ನಗರದ ನಿವಾಸಕ್ಕೆ ತರಲಾಗಿದೆ. ಸದಾಶಿವ ನಗರದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿದೆ. ಕಂಠೀರವ ಸ್ಟುಡಿಯೋದಲ್ಲಿ ಸಂಜೆ ಅಂತಿಮ ಸಂಸ್ಕಾರ ನಡೆಯಲಿದೆ.

ಡಿಸೆಂಬರ್ 6, 1939ರಲ್ಲಿ ಮೈಸೂರು ಜಿಲ್ಲೆಯ ಸಾಲಿಗ್ರಾಮದಲ್ಲಿ ಅವರು ಜನಿಸಿದ್ದರು. ವರನಟ ಡಾ. ರಾಜ್ ಕುಮಾರ್ ಅವರೊಂದಿಗೆ 1953 ಜೂ.25 ರಂದು ವಿವಾಹ ನಡೆದಿತ್ತು. ರಾಜ್ ಚಿತ್ರಗಳ ನಿರ್ಮಾಣದ ಮೂಲಕ ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕಿಯಾಗಿ ಬೆಳೆದರು. ಡಾ. ರಾಜ್​​ಕುಮಾರ್​, ಪುತ್ರರಾದ ಶಿವರಾಜ್ ಕುಮಾರ್​, ರಾಘವೇಂದ್ರ ರಾಜ್​ಕುಮಾರ್​, ಪುನೀತ್ ರಾಜ್​​ಕುಮಾರ್​​ ಅವರ ಜನಪ್ರಿಯ ಚಿತ್ರಗಳನ್ನು ಅವರು ನಿರ್ಮಿಸಿದ್ದರು. ರಥಸಪ್ತಮಿ, ಆನಂದ್, ನಂಜುಂಡಿ ಕಲ್ಯಾಣ, ಗಜಪತಿ ಗರ್ವಭಂಗ ಸೇರಿದಂತೆ 80 ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ.

ಪಾರ್ವತಮ್ಮ ರಾಜ್ ಕುಮಾರ್ ಜೀವನದ ಪ್ರಮುಖ ಘಟ್ಟಗಳು

6 ಡಿಸೆಂಬರ್ 1939ರಲ್ಲಿ ಜನನ
1953 ಜೂನ್ 25 ರಂದು ಡಾ. ರಾಜ್​ಕುಮಾರ್ ಜೊತೆ ವಿವಾಹ
ಮೈಸೂರು ಜಿಲ್ಲೆಯ ಸಾಲಿಗ್ರಾಮದಲ್ಲಿ ಜನನ
ಕೆ. ಆರ್. ನಗರ ತಾಲೂಕಿನ ಸಾಲಿಗ್ರಾಮ
ನಿರ್ಮಾಪಕರಾಗಿ, ವಿತರಕರಾಗಿ ಕನ್ನಡ ಚಿತ್ರರಂಗದಲ್ಲಿ ಮಹತ್ವದ ಪಾತ್ರ ನಿರ್ವಹಣೆ
ರಾಜ್​ಕುಮಾರ್, ಶಿವರಾಜ್​ ಕುಮಾರ್, ರಾಘವೇಂದ್ರ ರಾಜ್​ಕುಮಾರ್​, ಪುನೀತ್ ರಾಜ್​ಕುಮಾರ್​ ಸಿನಿಮಾಗಳ ನಿರ್ಮಾಣ
ಪೂರ್ಣಿಮಾ ಎಂಟರ್​ಪ್ರೈಸೆಸ್ ನಿರ್ಮಾಣ ಸಂಸ್ಥೆ ಹೆಸರಲ್ಲಿ ಚಿತ್ರ ನಿರ್ಮಾಣ
ವಜ್ರೇಶ್ವರಿ ಕಂಬೈನ್ಸ್​ ನಿರ್ಮಾಣ ಸಂಸ್ಥೆ ಆರಂಭ
80ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿದ ಪಾರ್ವತಮ್ಮ
ತ್ರಿಮೂರ್ತಿ, ಪಾರ್ವತಮ್ಮ ರಾಜ್​ಕುಮಾರ್ ನಿರ್ಮಾಣದ ಮೊದಲ ಸಿನಿಮಾ
ಡಾ.ರಾಜ್ ಕುಮಾರ್ ಅಭಿನಯದ ತ್ರಿಮೂರ್ತಿ
ಹಾಲು ಜೇನು, ಕವಿರತ್ನ ಕಾಳಿದಾಸ, ಜೀವನ ಚೈತ್ರ, ಒಡಹುಟ್ಟಿದವರು, ಶಬ್ದವೇಧಿ,ರಥಸಪ್ತಮಿ, ಆನಂದ, ಓಂ, ಜನುಮದ ಜೋಡಿ, ನಂಜುಂಡಿ ಕಲ್ಯಾಣ, ಸ್ವಸ್ತಿಕ್,
ಅಪ್ಪು, ಅಭಿ, ಹುಡುಗರು ಸೇರಿದಂತೆ ಹಲವು ಚಿತ್ರಗಳ ನಿರ್ಮಾಣ
ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್
13ನೇ ವಯಸ್ಸಿಗೆ ವಿವಾಹವಾಗಿದ್ದ ಪಾರ್ವತಮ್ಮ
ಶಿವ ರಾಜ್​ಕುಮಾರ್​​, ರಾಘವೇಂದ್ರ ರಾಜ್​ಕುಮಾರ್​​, ಪುನೀತ್ ರಾಜ್​ಕುಮಾರ್​​, ಲಕ್ಷ್ಮಿ ಮತ್ತು ಪೂರ್ಣಿಮ ಐವರು ಮಕ್ಕಳು
ಬೆಳ್ಳಿತೆರೆಯಲ್ಲಿ ಮಿಂಚಿದ ಮೂವರು ಗಂಡು ಮಕ್ಕಳು
ಇಬ್ಬರು ಮೊಮ್ಮಕ್ಕಳು ಕೂಡ ಚಿತ್ರದಲ್ಲಿ ನಟನೆ

ಪಾರ್ವತಮ್ಮ ರಾಜ್​​ಕುಮಾರ್ ನಿರ್ಮಿಸಿದ ಕೆಲವು ಚಿತ್ರಗಳು

ಸಿದ್ಧಾರ್ಥ – 2015 ( ಕನ್ನಡ )
ಯಾರೇ ಕೂಗಾಡಲಿ – 2012 ( ಕನ್ನಡ )
ಹುಡುಗರು – 2011 ( ಕನ್ನಡ )
ವಂಶಿ – 2008 ( ಕನ್ನಡ )
ಆಕಾಶ್ – 2005 ( ಕನ್ನಡ )
ಅಭಿ – 2003 ( ಕನ್ನಡ )
ಅಪ್ಪು – 2002 ( ಕನ್ನಡ )
ಜೀವನ ಚೈತ್ರ – 1992 ( ಕನ್ನಡ )
ಪರಶುರಾಮ್ – 1989 ( ಕನ್ನಡ )
ಗಜಪತಿ ಗರ್ವಭಂಗ – 1989 ( ಕನ್ನಡ )
ದೇವತಾ ಮನುಷ್ಯ – 1988 ( ಕನ್ನಡ )
ಚಲಿಸುವ ಮೋಡಗಳು – 1982 ( ಕನ್ನಡ )

ಪ್ರಶಸ್ತಿಗಳು
ಕನ್ನಡ ರಾಜ್ಯೋತ್ಸವ ಪ್ರಶಸ್ತಿ
ಸುವರ್ಣ ವಾಹಿನಿ ಪ್ರಶಸ್ತಿ

ಪಾರ್ವತಮ್ಮ ರಾಜ್ ಕುಮಾರ್ ಅವರು ಜನಿಸಿದ್ದು 6 ಡಿಸೆಂಬರ್ 1939 ನಂಜನಗೂಡಿನಲ್ಲಿ. ಇವರು ಬಾಲ್ಯದಲ್ಲೇ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ನಿಲ್ಲಿಸಿದರು. ಕರ್ನಾಟಕ ಚಿತ್ರರಂಗ ಕಂಡ ವರನಟ, ಗಾಯಕ ಪದ್ಮ ವಿಭೂಷಣ ಡಾ. ರಾಜ್ ಕುಮಾರ್ ಅವರನ್ನು 13ನೇ ವಯಸಿನಲ್ಲಿ ವಿವಾಹವಾಗಿದ್ದರು.

ನಿರ್ಮಾಪಕಿಯಾಗಿ 1975ರಲ್ಲಿ ರಾಜ್​ಕುಮಾರ್ ಅವರ 160ನೇ ಚಿತ್ರ ತ್ರಿಮೂರ್ತಿ ಮೂಲಕ ಚಲನಚಿತ್ರ ಕ್ಷೇತ್ರಕ್ಕೆ ಪ್ರವೇಶ ಪಡೆದರು. ನಂತರ ರಾಜ್​ಕುಮಾರ್ ಅಭಿನಯದ ಬಹುತೇಕ ಚಿತ್ರಗಳನ್ನು ಅವರೇ ನಿರ್ಮಿಸಿದರು. ಅವರ ನಿರ್ಮಾಣದ ಬಹುತೇಕ ಚಿತ್ರಗಳಲ್ಲಿ ಹೊಸ ನಟಿಯರನ್ನು ಪರಿಚಯಿಸಿದ ಕೀರ್ತಿ ಅವರದು. ಇನ್ನು ಕನ್ನಡದ ನಟಿಯರಿಗೆ ಅವಕಾಶ ಕೊಟ್ಟಿರುವುದು ಅವರ ಹೆಗ್ಗಳಿಕೆ.

ಅವರ ಮಕ್ಕಳಾದ ಶಿವ ರಾಜ್​ಕುಮಾರ್, ರಾಘವೇಂದ್ರ ರಾಜ್​ಕುಮಾರ್ ಮತ್ತು ಪುನೀತ್ ರಾಜ್​​ಕುಮಾರ್ ಅವರ ಚಿತ್ರಗಳಲ್ಲಿ ಹೊಸ ನಟಿಯರನ್ನು ಪರಿಚಯಿಸುವ ಕೆಲಸವನ್ನು ಮುಂದುವರೆಸಿದರು. ಮಾಲಾಶ್ರೀ, ಆಶಾರಾಣಿ, ಸುಧಾರಾಣಿ, ಕಾವ್ಯ, ವೀಣಾ ರಕ್ಷಿತಾ, ರಮ್ಯಾ ಮೊದಲಾದ ನಾಯಕಿಯರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು.

ಪಾರ್ವತಮ್ಮ ರಾಜ್​ಕುಮಾರ್ ಅವರ ದೂರದೃಷ್ಟಿ ಅವರ ಕತೆಗಳ ಆಯ್ಕೆ, ನಟಿಯರ ಆಯ್ಕೆಯಲ್ಲೂ ಎದ್ದು ಕಾಣುತ್ತಿತ್ತು. ಅವರು ಪರಿಚಯಿಸಿದ ನಾಯಕಿಯರು ಅನೇಕ ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ನೆಲೆಯೂರಿದ ಅನೇಕ ಉದಾಹರಣೆಗಳಿವೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *