ಅಜ್ಞಾತ ಸ್ಥಳದಲ್ಲಿ ಪರಶುರಾಮ್​ನ ತನಿಖೆ..!

ಚಿಂತಕಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯ ಪ್ರಕರಣ ಸಂಬಂಧ ಆರೋಪಿ ಪರಶುರಾಮ್ ವಾಗ್ಮೋರೆಯನ್ನು ಇಂದು ಎಸ್ಐಟಿ ತೀವ್ರ ವಿಚಾರಣೆ ಮಾಡಿತು. ಅಲ್ಲದೆ ರಹಸ್ಯ ಸ್ಥಳದಲ್ಲಿ ವಾಗ್ಮೋರೆಯನ್ನು ತನಿಖೆ ನಡೆಸಿ, ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿದ್ರು.

ಬೆಂಗಳೂರಿನಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಪರುಶರಾಮ್ ವಾಗ್ಮೋರೆ ಬೆಳಗಾವಿಯಲ್ಲಿ ಎಸ್ ಐಟಿ ಪೊಲೀಸರು ತೀವ್ರ ವಿಚಾರಣೆ ಮಾಡಿದ್ರು. ನಿನ್ನೆ ರಾತ್ರಿಯೇ ಪರುಶರಾಮ್ ನನ್ನು ಬೆಳಗಾವಿಗೆ ಕರೆತಂದು ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿದ್ರು.ಅಲ್ಲದೆ ಇಂದು ಬೆಳಿಗ್ಗೆಯ ಅಜ್ಞಾತ ಸ್ಥಳದಲ್ಲಿ ತೀವ್ರ ತನಿಖೆಯನ್ನು ನಡೆಸಲಾಯಿತು. ಅಲ್ಲಿನ ಸ್ಥಳೀಯ ಪೊಲೀಸರಿಗೆ ಅಧಿಕಾರಿಗಳು ಪರುಶುರಾಮ್ ವಿಚಾರಣೆ ನಡೆಸಿದ ಬಗ್ಗೆ ಮಾಹಿತಿಯ ಗುಟ್ಟು ಬಿಟ್ಟುಕೊಟ್ಟಿಲ್ಲ ಎನ್ನಲಾಗಿದೆ.

ಪ್ರಮುಖವಾಗಿ ಗೌರಿ ಹತ್ಯೆ ವೇಳೆಯಲ್ಲಿ ವಾಗ್ಮೋರೆ ಬೆಳಗಾವಿಯಲ್ಲಿಯೇ ಬಂದೂಕು ತರಬೇತಿ ಪಡೆದಿರೋ ಬಗ್ಗೆ ಮಾಹಿತಿ ಇತ್ತು. ಖಾನಾಪುರ ಕಾಡಿನಲ್ಲಿ ಈ ಬಂದೂಕು ತರಬೇತಿ ನಡೆದಿತ್ತು. ಅಲ್ಲಿಗೆ ಪರಶುರಾಮ್ ವಾಗ್ಮೋರೆಯನ್ನು ಕರೆದುಕೊಂಡು ಹೋಗಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇನ್ನೂ ವಾಗ್ಮೋರೆ ಸಹಕಾರ ನೀಡಿದ ಹಲವರನ್ನು ಎಸ್​ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿರೋ ಸಾಧ್ಯತೆ ಇದೆ.

ಇನ್ನೂ ವಾಗ್ಮೋರೆಯಿಂದ ಕೂಲಂಕುಷವಾಗಿ ಮಾಹಿತಿ ಪಡೆಯುವ ಸಲುವಾಗಿ ಬೆಳಗಾವಿಯಿಂದ ಹುಬ್ಬಳ್ಳಿಗೆ ಎಸ್ ಐಟಿ ಅಧಿಕಾರಿಗಳು ಕರೆದುಕೊಂಡು ಹೋಗಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಆದರೇ ಹುಬ್ಬಳ್ಳಿಗು ಪತ್ರಕರ್ತೆ ಗೌರಿ ಲಂಕೇಶ ಹತ್ಯೆಗೆ ಏನು ಸಂಬಂಧ ಎಂಬುದರ ಬಗ್ಗೆ ಮಾತ್ರ ಇನ್ನೂ ನಿಗೂಢವಾಗಿದೆ.ವಿಚಾರಣೆಯಲ್ಲಿ ಕೆಲ ಮಹತ್ವ ವಿಚಾರಗಳ ಬಗ್ಗೆ ಪರುಶರಾಮ್ ಬಾಯ್ಬಿಟ್ಟಿದ್ದಾನೆ. ಮತ್ತಷ್ಟು ವಿಚಾರಗಳ ಬಗ್ಗೆ ಮಾಹಿತಿ ಕಲೆಹಾಕಲು ಹುಬ್ಬಳಿಗೆ ಕರೆದೊಯ್ಯಲಾಗಿದೆ.

0

Leave a Reply

Your email address will not be published. Required fields are marked *