ಮಾಜಿ ಪ್ರಧಾನಿ ನೆಹರೂ 128ನೇ ಜಯಂತಿ

ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಹುಟ್ಟುಹಬ್ಬದಂದು ಪಂಡಿತ್ ಜವಾಹರ್​​ಲಾಲ್ ನೆಹರೂ ಅವರಿಗೆ ಗೌರವ ಎಂದು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮೂಲಕ ನಮನ ಸಲ್ಲಿಸಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ನೆಹರು ಅವರ ಸ್ಮಾರಕ ಶಾಂತಿವನಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು.

ದೇಶದಲ್ಲಿ 128ನೇ ನೆಹರೂ ಜಯಂತಿಯನ್ನು ಆಚರಿಸಲಾಗುತ್ತಿದೆ. ನೆಹರೂ ಅವರು ಆಗಸ್ಟ್ 15, 1947ರಂದು ದೇಶದ ಮೊದಲ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ನವೆಂಬರ್ 14, 1889ರಂದು ಜನಿಸಿದ್ದ ಅವರು, ಉತ್ತರಪ್ರದೇಶದ ಅಲಹಾಬಾದ್​​ನಲ್ಲಿ ಮೇ 27, 1964ರಂದು ಇಹಲೋಕವನ್ನು ತ್ಯಜಿಸಿದ್ದರು. ಪಂಡಿತ್ ಜವಾಹರ್​​ಲಾಲ್ ನೆಹರೂ ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ.

1919ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೆಹರೂ ಪಾದಾರ್ಪಣೆ ಮಾಡಿದ್ದರು. 1923ರಲ್ಲಿ ಅವರು ಕಾಂಗ್ರೆಸ್​​ನ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅವರು ದೇಶವನ್ನು ಅತಿ ದೀರ್ಘಕಾಲ ಮುನ್ನಡೆಸಿದ ಪ್ರಧಾನಿ ಕೂಡ ಹೌದು. ಅವರು ಒಟ್ಟು 17 ವರ್ಷಗಳ ಕಾಲ ಪ್ರಧಾನಿಯಾಗಿದ್ದರು.

0

Leave a Reply

Your email address will not be published. Required fields are marked *