8 ವರ್ಷದ ಬಳಿಕ ಪಾಕ್​​ನಲ್ಲಿ ಕ್ರಿಕೆಟ್​…

ಪಾಕ ತಂಡ ತವರಿನಲ್ಲಿ ವಿಶ್ವ ಇಲೆವೆನ್​ ತಂಡದ ವಿರುದ್ಧ ಶ್ರೇಷ್ಠ ಆಟದ ಪ್ರದರ್ಶನ ನೀಡಿ ಅಭಿಮಾನಿಗಳ ಮನ ಗೆದ್ದಿದೆ. ಸಂಘಟಿತ ಆಟದ ಪ್ರದರ್ಶನ ನೀಡಿದ ಸರ್ಫರಾಜ್​ ಅಹ್ಮದ್​ ತಂಡ, ಮೂರು ಟಿ-20 ಪಂದ್ಯಗಳ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಪಾಕಿಸ್ತಾನದಲ್ಲಿ ಮಾಯವಾಗಿದ್ದ ಕ್ರಿಕೆಟ್​ ಕ್ರೀಡೆ ಮಂಗಳವಾರದಿಂದ ಮತ್ತೆ ಆರಂಭವಾಗಿದೆ. ವಿಶ್ವ ಇಲೆವೆನ್​ ತಂಡದ ವಿರುದ್ಧ ಪಂದ್ಯವನ್ನು ಆಡಿದ ಪಾಕಿಸ್ತಾನ ಅಭಿಮಾನಿಗಳ ಮನ ಗೆದ್ದಿತು. ಟಾಸ್​ ಸೋತರೂ ಮೊದಲು ಬ್ಯಾಟ್ ಮಾಡಿದ ಪಾಕ್​ ಆರಂಭ ಕಳಪೆಯಾಗಿತ್ತು.

ಎರಡನೇ ವಿಕೆಟ್​​ ಅಹ್ಮದ್​ ಶೆಹಜಾದ್​ ಹಾಗೂ ಬಾಬರ್​ ಅಜಮ್​ ತಂಡಕ್ಕೆ ನೆರವಾದ್ರು. ಈ ಜೋಡಿ ತಂಡಕ್ಕೆ ಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಸರೆ ಆಯಿತು. ಅಹ್ಮದ್​​ 34 ರನ್​ ಬಾರಿಸಿದ್ರೆ, ಶೋಯಿಬ್​ ಮಲಿಕ್​ 38 ರನ್​ ಸಿಡಿಸಿ ತಂಡಕ್ಕೆ ನೆರವಾದ್ರು. ಮಧ್ಯಮ ಕ್ರಮಾಂಕದ ಬಾಬರ್​ ಅಜಮ್​ ಮತ್ತೊಮ್ಮೆ ಉತ್ತಮ ಆಟವನ್ನು ಆಡಿ ಗಮನ ಸೆಳೆದ್ರು. 52 ಎಸೆತಗಳಲ್ಲಿ 10 ಬೌಂಡರಿ ಸೇರಿದಂತೆ 2 ಸಿಕ್ಸರ್​ ಒಳಗೊಂಡಂತೆ 86 ರನ್​ ಬಾರಿಸಿ ಅಬ್ಬರಿಸಿದ್ರು. ವಿಶ್ವ ಇಲೆವೆನ್​ ತಂಡದ ಪರ ಸ್ಟಾರ್ ಆಟಗಾರರು ತಂಡಕ್ಕೆ ನೆರವಾಗಲಿಲ್ಲ. ಪಾಕ್​ ಬೌಲರ್​ಗಳ ಮೇಲೆ ಅಬ್ಬರದ ಬ್ಯಾಟಿಂಗ್ ನಡೆಸಬೇಕಿದ್ದ ತಮೀಮ್​ ಇಕ್ಬಾಲ್​ ಹಾಗೂ ಅನುಭವಿ ಹಾಶೀಮ್​ ಆಮ್ಲಾ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಯನ್ನು ಹುಸಿಗೊಳಿಸಿದ್ರು. ಮಧ್ಯಮ ಕ್ರಮಾಂಕದಲ್ಲಿ ಟೀಮ್​ ಪೈನ್​​ ಸಹ ಜವಾಬ್ದಾರಿಯನ್ನು ಮರೆತರು.

ಇನ್ನು ನಾಯಕ ಫಾಫ್​ ಡುಪ್ಲೇಸಿಸ್​ ತಂಡಕ್ಕೆ ಗೆಲುವಿನ ಮಾಲೆ ತೊಡಿಸುವಿದ್ರಲ್ಲಿ ಎಡವಿದ್ರು. 18 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್​ ಸಹಾಯದಿಂದ 29 ರನ್​​ ಬಾರಿಸಿ ಔಟಾದ್ರು. ಉಳಿದಂತೆ ಕೆಳ ಹಾಗೂ ಮಧ್ಯಮ ಕ್ರಮಾಂಕದ ಆಟಗಾರರು ರನ್​ ಬಾರಿಸದೆ ನಿರಾಸೆ ಅನುಭವಿಸಿದ್ರು. ಅಂತಿಮವಾಗಿ ವಿಶ್ವ ಇಲೆವೆನ್​ ತಂಡ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 177 ರನ್​ ಕಲೆ ಹಾಕಿ ಸೋಲು ಕಂಡಿತು. ಮೂರು ಟಿ-20 ಸರಣಿಯಲ್ಲಿ ಆತಿಥೇಯ ಪಾಕಿಸ್ತಾನ 1-0 ಮುನ್ನಡೆ ಸಾಧಿಸಿದೆ.
ಸ್ಪೋರ್ಟ್ಸ್​​​ ಬ್ಯೂರೋ, ಸುದ್ದಿ ಟಿವಿ

0

Leave a Reply

Your email address will not be published. Required fields are marked *