ಎರಡನೇ ಪಂದ್ಯದಲ್ಲಿ ಪಾಕ್​ಗೆ ನಿರಾಸೆ…

ವಿಶ್ವ ಇಲೆವೆನ್​ ತಂಡದ ಸ್ಟಾರ್​ ಆಟಗಾರ ತಿಸಾರ್​ ಪೆರೆರಾ ಕೊನೆಯ ಓವರ್​ನಲ್ಲಿ ಮಾಡಿದ ಮೋಡಿಯ ಆಟದ ನೆರವಿನಿಂದ ಪಾಕ್​ ಮೂರು ಟಿ-20 ಸರಣಿಯಲ್ಲಿ ಮೊದಲ ಸೋಲು ಕಂಡಿದೆ. ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದಿದ್ದರಿಂದ ಟೂರ್ನಿ ರೋಚಕತೆ ಹೆಚ್ಚಿಸಿದೆ.ಗಡಾಫಿ ಅಂಗಳದಲ್ಲಿ ನಡೆದ ಎರಡನೇ ಚುಟಕು ಪಂದ್ಯದಲ್ಲಿ ಟಾಸ್​ ಪಾಕ್​ ಪಾಲಾಯಿತು. ಮೊದಲು ಬ್ಯಾಟ್ ಮಾಡಿದ ಪಾಕ್​ ತಂಡಕ್ಕೆ ಆರಂಭಿಕರು ಉತ್ತಮ ಆರಂಭ ನೀಡಿದ್ರು. ಫಖಾರ್​ ಖಾನ್​ ಹಾಗೂ ಅಹ್ಮದ್​ ಶೆಹಜಾದ್​ ಎದುರಾಳಿ ಬೌಲರ್​ಗಳನ್ನು ಕಾಡಿದ್ರು. ಆದ್ರೆ ಈ ಆಟಗಾರರು ವಿಶ್ವ ಇಲೆವೆನ್​ ತಂಡದ ಸ್ಪಿನ್​ ಮೋಡಿಗೆ ಬಲಿಯಾದ್ರು.

ಮಧ್ಯಮ ಕ್ರಮಾಂಕದ ಬಾಬರ್​ ಅಜಮ್​ ಎರಡನೇ ಪಂದ್ಯದಲ್ಲಿ ಕ್ಲಾಸಿಕ್​ ಆಟ ಆಡಿದ್ರು. ಎದುರಾಳಿಗಳ ಮೈ ಚಳಿ ಬಿಡಿಸಿದ ಬಾಬರ್​ 38 ಎಸೆತಗಳಲ್ಲಿ 45 ರನ್​ ಬಾರಿಸಿ, ಬದ್ರಿಗೆ ಔಟಾದ್ರು. ಶೆಹಜಾದ್​ ಹಾಗೂ ಬಾಬರ್​ ಎರಡನೇ ವಿಕೆಟ್​ಗೆ ಅರ್ಧಶತಕದ ಜೊತೆಯಾಟ ನೀಡಿ ತಂಡದ ಮೊತ್ತ ಹಿಗ್ಗಿಸಿದ್ರು. ಅನುಭವಿ ಬ್ಯಾಟ್ಸ್​​ಮನ್​ ಶೋಯಿಬ್​ ಮಲಿಕ್​ 39 ರನ್​ ಬಾರಿಸಿ ತಂಡ 170 ರನ್​​ಗಳ ಗಡಿ ದಾಟುವಲ್ಲಿ ಶ್ರಮಿಸಿದ್ರು. ಅಂತಿಮವಾಗಿ ಪಾಕ್​ 20 ಓವರ್​ಗಳಲ್ಲಿ 6 ವಿಕೆಟ್​ಗೆ 174 ರನ್​ ಕಲೆ ಹಾಕಿತು.

ಸ್ಪರ್ಧಾತ್ಮಕ ಗುರಿಯನ್ನು ಹಿಂಬಾಲಿಸಿದ ವಿಶ್ವ ಇಲೆವೆನ್​ ತಂಡದ ಆರಂಭಿಕರಾದ ತಮೀಮ್​ ಇಕ್ಬಾಲ್​ ಹಾಗೂ ಹಾಶೀಮ್​ ಆಮ್ಲಾ ತಂಡಕ್ಕೆ 47 ರನ್​ಗಳ ಜೊತೆಯಾಟ ನೀಡಿದ್ರು. ತಮೀಮ್​ 23 ರನ್​ಗಳಿಸಿ ಮುನ್ನುಗುತ್ತಿದ್ದಾಗ ಸೋಹಿಲ್ ಖಾನ್​ಗೆ ವಿಕೆಟ್​ ಒಪ್ಪಿಸಿದ್ರು. ಮೂರನೇ ವಿಕೆಟ್​ಗೆ ಫಾಫ್​ ಡುಪ್ಲೇಸಿಸ್​ ಹಾಗೂ ಆಮ್ಲಾ ಕೊಂಚ ಎದುರಾಳಿ ಬೌಲರ್​ಗಳನ್ನು ಕಾಡಿದ್ರು. ಈ ಜೋಡಿ ತಂಡದ ಗೆಲುವಿನ ಆಸೆಗೆ ಪುಷ್ಠಿ ನೀಡಿತು. ಆದ್ರೆ ಫಾಫ್​ ಔಟ್​ ಆದಾಗ ಮತ್ತೆ ವಿಶ್ವ ಇಲೆವೆನ್​ ತಂಡದಲ್ಲಿ ಆತಂಕ ಮನೆ ಮಾಡಿತ್ತು.

ಆದ್ರೆ ಈ ಒತ್ತಡವನ್ನು ಮೆಟ್ಟಿ ನಿಂತು ಬ್ಯಾಟ್ ಮಾಡಿದ ತಿಸಾರ ಪೆರೆರಾ ಹಾಗೂ ಆಮ್ಲಾ ತಂಡಕ್ಕೆ ಉತ್ತಮ ಜೊತೆಯಾಟ ನೀಡಿದ್ರು. ಈ ಜೋಡಿ ಗೆಲುವಿನ ಮಾಲೆಯನ್ನು ತಂಡಕ್ಕೆ ತೊಡಿಸುವಲ್ಲಿ ಸಫಲವಾಯಿತು. ಆಮ್ಲಾ 5 ಬೌಂಡರಿ, 2 ಸಿಕ್ಸರ್​ ಸಹಾಯದಿಂದ 72 ರನ್​​ ಬಾರಿಸಿದ್ರು. ಕೊನೆಯ ಓವರ್​ನಲ್ಲಿ ಅಬ್ಬರದ ಆಟವನ್ನು ಆಡಿದ ತಿಸಾರ್​ ಪೆರೆರಾ ಅಗತ್ಯ ರನ್​ ಕಲೆ ಹಾಕಿ ಮಿಂಚಿದ್ರು. ಇವರ ಇನಿಂಗ್ಸ್​​ನಲ್ಲಿ 5 ಬೌಂಡರಿ ಸೇರಿವೆ. ಈ ಗೆಲುವಿನೊಂದಿಗೆ ವಿಶ್ವ ಇಲೆವೆನ್​ ಸರಣಿಯಲ್ಲಿ ಸಮಬಲ ಸಾಧಿಸಿದೆ.
ಸ್ಪೋರ್ಟ್ಸ್​ ಬ್ಯೂರೋ, ಸುದ್ದಿ ಟಿವಿ.

0

Leave a Reply

Your email address will not be published. Required fields are marked *