ಪದ್ಮಾವತ್​ ಸಿನಿಮಾಗೆ ಮುಗಿಯದ ಸಂಕಷ್ಟ…

ನಾಳೆ ದೇಶಾದ್ಯಂತ ಪದ್ಮಾವತ್​ ಸಿನಿಮಾ ತೆರೆಕಾಣಲಿದ್ದು,ಸಿನಿಮಾ ಎಳ್ಳಷ್ಟೂ ವಿರೋಧ,ಪ್ರತಿಭಟನೆ ಮಾತ್ರ ಕಡಿಮೆಯಾಗಿಲ್ಲ..ಕರ್ಣಿ ಸೇನಾ ಕಾರ್ಯಕರ್ತರು ಮಾಲ್​ಗಳಿಗೆ ಪೆಟ್ರೋಲ್​ ಬಾಂಬ್​ ಹಾಕುವ ಮೂಲಕ ಅತಿರೇಕ ಮೆರೆದಿದ್ದಾರೆ.ಇನ್ನೊಂದೆಡೆ ಗುರ್​ಗಾಂವ್​ನಲ್ಲಿ ಶಾಲಾ ಮಕ್ಕಳ ವಾಹನ ಗುರಿಯಾಗಿಸಿ ಕಿಡಿಗೇಡಿಗಳು ದಾಳಿ ನಡೆಸಿದ್ರ.ಇನ್ನೂ ಒಂದೇ ದಿನ ಬಾಕಿ..ನಾಳೆ ದೇಶಾದ್ಯಂತ ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್​ ಸಿನಿಮಾ ರಿಲೀಸ್​ ಆಗಲಿದೆ..ಆದ್ರೆ ಪದ್ಮಾವತ್​ಗೆ ಪ್ರತಿಭಟನೆಯ ಪರದಾಟ ಮಾತ್ರ ತಪ್ಪಿಲ್ಲ..

ಇಷ್ಟು ದಿನ ಶಾಂತವಾಗಿದ್ದ ಹರಿಯಾಣದ ಗುರ್​ಗಾಂವ್​ ಇಂದು ಭಾಗಶಃ ರಣರಂಗವೇ ಆಗಿತ್ತು..144 ಸೆಕ್ಷನ್​ ಜಾರಿಯಾಗಿದ್ರೂ ಕೂಡ ಇಂದು ಬೆಳಿಗ್ಗೆಯಿಂದಲೇ ಪ್ರತಿಭಟನಾಕಾರರ ಹೋರಾಟ ಎಲ್ಲೆ ಮೀರಿ ಹೋಗಿತ್ತು..ಕಂಡ ಕಂಡಲ್ಲಿ ಬಸ್​ಗಳಿಗೆ ಬೆಂಕಿ ಹಚ್ಚಿದ್ದಷ್ಟೇ ಅಲ್ಲದೆ,ಶಾಲಾ ಮಕ್ಕಳ ವಾಹನವನ್ನೇ ಗುರಿಯಾಗಿಸಿ ಶಸ್ತ್ರಸಜ್ಜಿತ ವ್ಯಕ್ತಿಗಳು ದಾಳಿ ನಡೆಸಿದ್ದಾರೆ.ಹಾಡಹಗಲೇ ಈ ರೀತಿ ದಾಂದಲೆ ನಡೆಯುತ್ತಿದ್ರೂ ಹರಿಯಾಣ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ.ಹರಿಯಾಣ ರಾಜ್ಯ ಹೊತ್ತಿ ಉರಿಯುತ್ತಿದ್ರೂ ಸಚಿವ ಅನಿಲ್​ ವಿಜ್​ ಮಾತ್ರ ಆಘಾತಕರ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ..ಸಿನಿಮಾ ನಮ್ಮ ಇತಿಹಾಸವನ್ನು ನಾಶಮಾಡಿದೆ..ಸಿನಿಮಾವನ್ನು ನೋಡಬೇಡಿ,ಬಹಿಷ್ಕರಿಸಿ ಎಂದು ಉದ್ಧಟತನದ ಹೇಳಿಕೆ ನೀಡಿದ್ದಾರೆ.

ಇದೀಗ ಸಿನಿಮಾ ರಿಲೀಸ್​ ದಿನಾಂಕ ಸಮೀಪಿಸುತ್ತಿದ್ದ ಹಾಗೆ ಕರ್ಣಿ ಸಮುದಾಯ,ಪ್ರತಿಭಟನಾಕಾರರ ಪ್ರತಿಭಟನೆ ಹಿಂಸಾರೂಪ ಪಡೆದಿದೆ..ನಿನ್ನೆ ರಾತ್ರಿಯಿಂದಲೇ ರಾಜಸ್ಥಾನ,ಹರಿಯಾಣ,ಗುಜರಾತ್​ ಹಾಗೂ ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ವಿಕೋಪ ರೂಪಕ್ಕೆ ತಿರುಗಿದೆ.. ಉತ್ತರ ಪ್ರದೇಶದ ಮೀರತ್​ನಲ್ಲಿ ಕಿಡಿಗೇಡಿಗಳು ಮಾಲ್​ ಒಳಗೆ ನುಗ್ಗಿ ಮನ ಬಂದಂತೆ ದಾಂದಲೆ ನಡೆಸಿದ್ದಾರೆ.ಗುಜರಾತ್​ನ ಅಹಮದಾಬಾದ್​ ಮಾಲ್​ನಲ್ಲಿ ಪ್ರತಿಭಟನಾಕಾರರು ಪೆಟ್ರೋಲ್​ ಬಾಂಬ್​ ಸಿಡಿಸಿ ತಮ್ಮ ಅತಿರೇಕ ಪ್ರದರ್ಶಿಸಿದ್ದಾರೆ.

ಹಿಮಾಚಲ ಪ್ರದೇಶದ ಮಾಲ್​ಗಳಿಗೆ ನುಗ್ಗಿದ ಪ್ರತಿಭಟನಾಕಾರರು ಗಾಜು ಪುಡಿ ಪುಡಿ ಮಾಡಿದ್ರು.ಇನ್ನೊಂದೆಡೆ ಹರಿಯಾಣದಲ್ಲಿ ಕರ್ಣಿ ಸೇನಾ ಬೆದರಿಕೆ ಹಾಕಿದ್ದ ಹಿನ್ನೆಲೆ ಚಿತ್ರಮಂದಿರದ ಮಾಲೀಕರು ಸಿನಿಮಾ ಬಿಡುಗಡೆ ಮಾಡುವುದರಿಂದ ಹಿಂದೆ ಸರಿದಿದ್ದಾರೆ..ಶೇ.80 ರಷ್ಟು ಸಿನಿಮಾ ಮಂದಿರಗಳಲ್ಲಿ ಚಿತ್ರ ಬಿಡುಗಡೆ ಭಾಗ್ಯವಿಲ್ಲ.100 ಕ್ಕೂ ಹೆಚ್ಚು ಬೈಕ್​ಗಳಿಗೆ​ ಬೆಂಕಿ ಹಚ್ಚಿದ್ದು,ದೆಹಲಿ-ಜೈಪುರ ರಾಷ್ಟ್ರೀಯ ಹೆದ್ದಾರಿಯನ್ನು ಕರ್ಣಿ ಸೇನಾ ಬಂದ್​ ಮಾಡಿದೆ. ಕೆಲ ದಿನಗಳ ಹಿಂದೆ ಪದ್ಮಾವತ್​ ಸಿನಿಮಾ ಬಿಡುಗಡೆ ವಿರೋಧಿಸಿ ಪ್ರತಿಭಟಿಸಿದ್ದ ರಾಜಸ್ಥಾನದ ರಜಪೂತ ಮಹಿಳೆಯರು ಇಂದೂ ಕೂಡ ಟೊಂಕ ಕಟ್ಟಿ ನಿಂತಿದ್ದರು.ರಾಜಸ್ಥಾನದ ಚಿತ್ತೋರ್​ಗರ್​ ಕೋಟೆಯಲ್ಲಿ ಪದ್ಮಿನಿ ದೇವಸ್ಥಾನದ ಬಳಿ ಪ್ರತಿಭಟನೆ ನಡೆಸಿದ್ರು.ಅಷ್ಟೇ ಅಲ್ಲ,ನಾಳೆಯೆನಾದ್ರೂ ಪದ್ಮಾವತ್​ ಸಿನಿಮಾ ಬಿಡುಗಡೆಯಾಗಿದ್ದೇ ಆದಲ್ಲಿ,ನಾವು ಸಾಮೂಹಿಕವಾಗಿ ಚಿತೆಗೆ ಹಾರುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.

ಈ ನಡುವೆ ಕರ್ಣಿ ಸೇನಾ ಮುಖಂಡ ಲೋಕೇಂದ್ರ ಸಿಂಗ್​ ಕಲ್ವಿ,ಯಾವುದೇ ಕಾರಣಕ್ಕೂ ದೇಶಾದ್ಯಂತ ಸಿನಿಮಾ ಬಿಡುಗಡೆಗೆ ಅವಕಾಶ ನೀಡುವುದಿಲ್ಲ..ನಮ್ಮ ರಾಣಿಯ ಘನತೆ ಉಳಿಸಿಕೊಳ್ಳಲು ನಾವು ಸದಾ ಸಿದ್ಧ..ಪದ್ಮಾವತ್​ ವಿರುದ್ಧ ಜನತಾ ಕರ್ಪ್ಯೂ ವಿಧಿಸುತ್ತೇವೆ ಎಂದು ಲೋಕೇಂದ್ರ ಸಿಂಗ್​ ಹೇಳಿದ್ದಾರೆ.ಕರ್ನಾಟಕದ ಬಳ್ಳಾರಿಯಲ್ಲೂ ಪದ್ಮಾವತ್​ ಸಿನಿಮಾ ವಿರೋಧಿಸಿ ಪ್ರತಿಭಟನೆ ನಡೆಸಲಾಯ್ತು..ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಡಿಸಿ ಕಚೇರಿಯವರೆಗೆ ಮೆರವಣಿಗೆ ಮಾಡಿ, ಚಿತ್ರ ಬಿಡುಗಡೆ ಮಾಡದಂತೆ ಒತ್ತಾಯಿಸಿದ್ರು.ದೇಶಾದ್ಯಂತ ಆಗುತ್ತಿರುವ ಪ್ರತಿಭಟನೆ ನೋಡುತ್ತಿರುವ ಕೇಂದ್ರ ಗೃಹ ಸಚಿವಾಲಯ ಪ್ರತಿಭಟನಾಕಾರರ ಮೇಲೆ ನಿಗಾ ಇಟ್ಟಿದೆ..ಎಲ್ಲ ರಾಜ್ಯಗಳಿಗೂ ನೆರವು ನೀಡುವುದಾಗಿ ಭರವಸೆ ನೀಡಿದ್ದು,ಕಾನೂನು ಸುವ್ಯವಸ್ಥೆ ಕಾಪಾಡಲು ಸುಪ್ರೀಂಕೋರ್ಟ್​ ಆದೇಶಿಸಿದೆ.ನಾಳೆ ಸಿನಿಮಾ ಬಿಡುಗಡೆಯಾಗಲಿದ್ದು,ಇನ್ನ್ಯಾವ ರೀತಿ ಪ್ರತಿಭಟನೆ ನಡೆಯಲಿದೆಯೋ ಎಂಬ ಪ್ರಶ್ನೆ ಮೂಡಿದೆ.

ಬ್ಯುರೋ ರಿಪೋರ್ಟ್​ ಸುದ್ದಿ ಟಿವಿ

0

Leave a Reply

Your email address will not be published. Required fields are marked *