ಲಂಡನ್ ಭಯೋತ್ಪಾದಕ ದಾಳಿ: ಇಸ್ಲಾಂ ಮೂಲಭೂತವಾದಿಯ ಕೈವಾಡದ ಶಂಕೆ

ಲಂಡನ್: ಕಳೆದ ವಾರ ಲಂಡನ್​​ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಮುಸ್ಲಿಂ ಮೂಲಭೂತವಾದಿಗಳ ಕೈವಾಡವಿರುವ ಶಂಕೆಯನ್ನು ಲಂಡನ್ ಪೊಲೀಸರು ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಮೂಲದ ಬ್ರಿಟನ್ ಪ್ರಜೆ ಖುರಂ ಶಹಜಾದ್ ಭಟ್​​​​ ದಾಳಿ ನಡೆಸಲು ಯೋಜನೆ ರೂಪಿಸುವುದಕ್ಕೆ ಸಾಕ್ಷ್ಯಗಳು ಸಿಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಈತ ದಿ ಜಿಹಾದೀಸ್ ನೆಕ್ಟ್​​ ಡೋರ್ ಸಾಕ್ಷ್ಯಚಿತ್ರದಲ್ಲಿ ಕೂಡ ನಟಿಸಿದ್ದ. ಪ್ರಿಯ ಸೋದರರೇ ಇದು ನಿಜವಾದ ಜೀವನವಲ್ಲ. ಕೇವಲ ಕಾಲಯಾಪನೆ ಎಂದು ಅವನು ಹೇಳಿರುವ ಸಾಕ್ಷಿ ಕೂಡ ಸಿಕ್ಕಿದೆ. ಇನ್ನು ಎರಡನೇ ಆರೋಪಿಯನ್ನು ರಾಚಿದ್ ರೆಡೌನೆ ಎಂದು ಗುರುತಿಸಲಾಗಿದೆ. ಈ ಮೂಲಕ ಲಂಡನ್ ದಾಳಿಯಲ್ಲಿ ಇಸ್ಲಾಂ ಮೂಲಭೂತವಾದಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.

0

Leave a Reply

Your email address will not be published. Required fields are marked *