ಭಯೋತ್ಪಾದಕರ ದಾಳಿ: ಕಾಶ್ಮೀರದಲ್ಲಿ ಬೆಂಗಾವಲು ಸೈನಿಕ ಸಾವು

ಶ್ರೀನಗರ: ಜಮ್ಮು ಕಾಶ್ಮೀರದ ಖಾಜಿಗಂದ್​ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಗೆ ಸೇನಾ ಬೆಂಗಾವಲು ಪಡೆಯ ಇಬ್ಬ ಸೈನಿಕ ಬಲಿಯಾಗಿ, 5 ಸೈನಿಕರು ಗಾಯಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಬಳಿಯ ಹಿಲ್ಲಾರ್ ಗ್ರಾಮದಲ್ಲಿ ಭಯೋತ್ಪಾದಕರು ದಾಳಿ ನಡೆಸಿದ್ದಾರೆ ಎಂದು ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ದಕ್ಷಿಣ ಕಾಶ್ಮೀರದಲ್ಲಿ ಈ ಘಟನೆ ನಡೆದಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ದಾಳಿಯ ನಂತರ ಭಯೋತ್ಪಾದಕರ ಪತ್ತೆಗೆ ಶೋಧಕಾರ್ಯ ಆರಂಭಿಸಲಾಗಿದೆ. ಜಮ್ಮು ಕಾಶ್ಮೀರದ ಪ್ರಸ್ತುತ ಪರಿಸ್ಥಿತಿ ಮತ್ತು ಶಾಂತಿ ಸ್ಥಾಪನೆ ಕುರಿತು ನಿನ್ನೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಹಿರಿಯ ಸೇನಾ ಕಮ್ಯಾಂಡರ್​ಗಳೊಂದಿಗೆ ಸಭೆ ನಡೆಸಿದ್ದರು. ಇದರ ಬೆನ್ನಲ್ಲೇ ಇಂದು ಭಯೋತ್ಪಾದಕರು ದಾಳಿ ನಡೆಸಿ, ಒಬ್ಬ ಯೋಧನನ್ನು ಬಲಿ ತೆಗೆದುಕೊಂಡಿದ್ದಾರೆ.

0

Leave a Reply

Your email address will not be published. Required fields are marked *