ಅಮೆರಿಕಕ್ಕೆ ಎಚ್ಚರಿಕೆ ನೀಡಿದ ಉತ್ತರ ಕೊರಿಯಾ

ಸಿಯೋಲ್ (ಉತ್ತರ ಕೊರಿಯಾ): ಅಮೆರಿಕ ವಿರುದ್ಧ ಏಕಾಂಗಿಯಾಗಿ ಬಲಿಷ್ಠ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದಾಗಿ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹೇಳಿದ್ದಾರೆ. ಇತ್ತೀಚೆಗೆ ತಮ್ಮ ನೇತೃತ್ವದಲ್ಲಿ ನಡೆದ ಬ್ಯಾಲಿಸ್ಟಿಕ್ ಕ್ಷಿಪಣಿ ನಿಯಂತ್ರಕಗಳ ಪರೀಕ್ಷೆಯ ನಂತರ ಮತ್ತಷ್ಟು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲು ಅವರು ನಿರ್ದೇಶನ ನೀಡಿದ್ದಾರೆ. ಅಲ್ಲದೇ, ನಿಗದಿತ ಅವಧಿಯಲ್ಲಿ ಅವಶ್ಯಕ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಕೂಡ ಅಭಿವೃದ್ಧಿಪಡಿಸುವುದಾಗಿ ಉನ್ ಹೇಳಿದ್ದಾರೆ.

ನಿನ್ನೆ ಸ್ಕಡ್ ಕ್ಲಾಸ್ ಮಿಸೆಲ್ಸ್ ಹೆಸರಿನಲ್ಲಿ ನಡೆಸಿದ್ದ ಪ್ರಯೋಗದ ನಂತರ ಕಿಮ್ ಜಾಂಗ್ ಉನ್ ಉತ್ತೇಜಿತರಾಗಿದ್ದಾರೆ. ಈ ಸಮೀಪಗಾಮಿ ಕ್ಷಿಪಣಿಯನ್ನು ಸಮುದ್ರದಲ್ಲಿ ಇಳಿಸುವ ಮೂಲಕ ಪ್ರಯೋಗ ನಡೆಸಲಾಗಿದೆ. ಅಂತರರಾಷ್ಟ್ರೀಯ ಮಟ್ಟದ ಒತ್ತಡದ ನಡುವೆ ಕೂಡ ಉತ್ತರ ಕೊರಿಯಾ ಶಸ್ತ್ರಾಸ್ತ್ರ ಅಭಿವೃದ್ಧಿ ವಿಷಯದಲ್ಲಿ ಮುಂದಡಿ ಇಡುತ್ತಿದೆ.

ಅಮೆರಿಕದ ವಿರುದ್ಧ ಪ್ರತೀಕಾರ ಕ್ರಮವಾಗಿ, ಅಮೆರಿಕನ್ನರಿಗೆ ಕೊಡುಗೆಯನ್ನು ನೀಡುವುದಾಗಿ ಕಿಮ್ ಘೋಷಿಸಿದ್ದಾರೆ. ದಕ್ಷಿಣ ಕೊರಿಯಾ ಮತ್ತು ಅಮೆರಿಕ ದೇಶದ ಸೇನೆಗಳು ನಿನ್ನೆ ಸೂಪರ್​ಸೊನಿಕ್ ಬಿ-1ಬಿ ಕವಾಯತು ನಡೆಸಿದ್ದವು. ಉತ್ತರ ಕೊರಿಯಾದ ಮಾಧ್ಯಮಗಳು ಉತ್ತರ ಕೊರಿಯಾ ಒಡೆತನದ ಪೆನಿನ್​ಸುಲಾದಲ್ಲಿ ಪರಮಾಣು ಬಾಂಬ್​ಗಳ ದಾಳಿ ನಡೆಸಿರುವುದಾಗಿ ವರದಿ ಮಾಡಿವೆ.

ಅಮೆರಿಕ ನೌಕಾ ಸೇನೆ ಇನ್ನಷ್ಟು ಕವಾಯತು ನಡೆಸಲು ಸನ್ನದ್ಧವಾಗಿದೆ. ಆದರೆ, ಈ ಕವಾಯತನ್ನು ಉತ್ತರ ಕೊರಿಯಾ ಯುದ್ಧದ ಸಿದ್ಧತೆ ಎಂದು ವ್ಯಾಖ್ಯಾನಿಸಿದೆ. ನಿನ್ನೆ ನಡೆಸಿರುವ ಖಂಡಾಂತರ ಕ್ಷಿಪಣಿ ಪರೀಕ್ಷೆಯಲ್ಲಿ ಸಫಲವಾಗಿದ್ದಲ್ಲಿ, ಉತ್ತರ ಕೊರಿಯಾದಿಂದ ನೇರವಾಗಿ ಅಮೆರಿಕ ಮೇಲೆ ದಾಳಿ ಮಾಡುವುದಕ್ಕೆ ಸಾಧ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಉತ್ತರ ಕೊರಿಯಾ ನಡುವಿನ ಸಂಘರ್ಷ ತಾರಕಕ್ಕೇರಿದೆ.

ಈಗಾಗಲೇ 2016ರಿಂದ ಉತ್ತರ ಕೊರಿಯಾ ನಿರಂತರವಾಗಿ ಶಸ್ತ್ರಾಸ್ತ್ರಗಳ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದ್ದು, ಎರಡು ಪರಮಾಣು ಪರೀಕ್ಷೆಗಳನ್ನು ಕೂಡ ನಡೆಸಿದೆ. ಇದರಿಂದಾಗಿ ಅಮೆರಿಕ ಉತ್ತರ ಕೊರಿಯಾದ ಮೇಲೆ ಕೆಂಗಣ್ಣು ಬೀರಿದೆ. ಇನ್ನು ದಕ್ಷಿಣ ಕೊರಿಯಾ ಮತ್ತು ಚೀನಾ ಸಲಹೆಗಳನ್ನು ತಿರಸ್ಕರಿಸಿ ಪರಮಾಣು ಬಾಂಬ್​ಗಳ ಅಭಿವೃದ್ಧಿಯಲ್ಲಿ ಉತ್ತರ ಕೊರಿಯಾ ತೊಡಗಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *