ಉರಿ ಬಿಸಿಲಿಗೆ ತತ್ತರಿಸುತ್ತಿರುವ ಉತ್ತರಭಾರತ

ನವದೆಹಲಿ: ಉತ್ತರಭಾರತದ ತಾಪಮಾನದಲ್ಲಿ ಏರಿಕೆಯಾಗಿ ಜನತೆ ತತ್ತರಿಸುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಉತ್ತರಪ್ರದೇಶ, ಮಧ್ಯಪ್ರದೇಶ, ಛತ್ತೀಸ್​​ಗಡ, ಒಡಿಶಾ, ಬಿಹಾರ, ನವದೆಹಲಿ ಮತ್ತು ಜಾರ್ಖಂಡ್​ಗಳಲ್ಲಿ ಉಷ್ಣಾಂಶ 44.6 ಡಿಗ್ರಿ ಸೆಲ್ಷಿಯಸ್​​ಗೆ ಏರಿಕೆಯಾಗಿದೆ. ಇದರಿಂದಾಗಿ ನಾಗರಿಕರು ಪೂರ್ವಯೋಜಿತ ಪ್ರವಾಸ ರದ್ದುಗೊಳಿಸುತ್ತಿದ್ದಾರೆ. ನವದೆಹಲಿಯಲ್ಲಿ ಕನಿಷ್ಠ ಉಷ್ಣಾಂಶ 30.4 ಡಿಗ್ರಿ ಸೆಲ್ಷಿಯಸ್ ಗರಿಷ್ಠ 44.6 ಡಿಗ್ರಿ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಧ್ಯಾಹ್ನದ ವೇಳೆಗೆ ರಸ್ತೆಗಳು ಮರುಭೂಮಿಯಾಗಿ ಪರಿವರ್ತನೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ಥವಾಗುತ್ತಿದೆ.

0

Leave a Reply

Your email address will not be published. Required fields are marked *