ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

ಬಿರುಸುಗೊಂಡ ವಿಧಾನಸಭಾ ಚುನಾವಣಾ ಚಟುವಟಿಕೆ. ಇಂದಿನಿಂದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಆರಂಭ. ಬೆಳಗ್ಗೆ 11 ಗಂಟೆಯಿಂದ ನಾಮಪತ್ರ ಸಲ್ಲಿಸುವ ಅವಕಾಶ. ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಅವಕಾಶ. ಅಭ್ಯರ್ಥಿಯೊಂದಿಗೆ ಐವರು ಬೆಂಬಲಿಗರು ಇರಲು ಅವಕಾಶ.ನಾಮಪತ್ರ ಸಲ್ಲಿಸುವ ಅಭ್ಯರ್ಥಿ ಕೇವಲ 3 ವಾಹನಗಳೊಂದಿಗೆ ಬರಬೇಕು. ಅಭ್ಯರ್ಥಿ ಬೇರೆ ಕ್ಷೇತ್ರದವರಾಗಿದ್ದರೇ 2 ರೀತಿಯ ಅಫಿಡವಿಟ್ ಸಲ್ಲಿಸಬೇಕು.ಅರ್ಜಿಯಲ್ಲಿ ಎಲ್ಲಾ ಮಾಹಿತಿ ನೀಡುವುದು ಕಡ್ಡಾಯ.ಎಲ್ಲಾ ಮಾಹಿತಿ ಭರ್ತಿಮಾಡದಿದ್ದರೇ ನಾಮಪತ್ರ ತಿರಸ್ಕೃತಗೊಳ್ಳಲಿದೆ. ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು 5 ಸಾವಿರ ರೂ. ಠೇವಣಿ ಇಡಬೇಕು.ಎಸ್.ಸಿ, ಎಸ್.ಟಿ ಅಭ್ಯರ್ಥಿಗಳು 5 ಸಾವಿರ ರೂ. ಠೇವಣಿ ಇಡಬೇಕು.ಇತರೆ ವರ್ಗದ ಅಭ್ಯರ್ಥಿಗಳಿಗೆ 10 ಸಾವಿರ ರೂ. ಡೆಪಾಸಿಟ್ ಮಾಡಬೇಕು. ಅಭ್ಯರ್ಥಿಗಳು ಹೊಸ ಬ್ಯಾಂಕ್ ಖಾತೆ ತೆರೆಯಬೇಕು.ಹೊಸ ಖಾತೆ ಮೂಲಕವೇ ಹಣಖರ್ಚು ಮಾಡಬೇಕು.

0

Leave a Reply

Your email address will not be published. Required fields are marked *