ಹೈ-ಕ ಅಭ್ಯರ್ಥಿಗಳಿಗೆ ಸಿಗ್ತಿಲ್ಲ ಪ್ರಾಧ್ಯಾಪಕರ ಹುದ್ದೆಗೆ ನೇಮಕಾತಿ….

ದೇವರು ವರ ಕೊಟ್ರೂ ಪೂಜಾರಿ ಕೊಡಲಿಲ್ಲ ಅನ್ನೋ ಮಾತಿಗೆ ಇದು ಸ್ಪಷ್ಟ ಉದಾಹರಣೆ. ಹಿಂದುಳಿದ ಪ್ರದೇಶ ಅಭಿವೃದ್ಧಿಗೋಸ್ಕರ ಸರ್ಕಾರಿ ನೇಮಕಾತಿಯಲ್ಲಿ ಸಂವಿಧಾನದಡಿ ವಿಶೇಷ ಮೀಸಲಾತಿ ಕಲ್ಪಿಸಲಾಗಿದೆ. ಆದ್ರೆ ಉನ್ನತ ಶಿಕ್ಷಣ ಇಲಾಖೆ ಮಾತ್ರ ಆ ಮೀಸಲಾತಿಯನ್ನೆ ತಪ್ಪಾಗಿ ಅರ್ಥೈಸಿದೆ. ಹೈದ್ರಾಬಾದ್ ಕರ್ನಾಟಕ ಅಭ್ಯರ್ಥಿಗಳು ರ್ಯಾಂಕ್ ಬಂದ್ರೂ ಪ್ರಾಧ್ಯಾಪಕರ ಹುದ್ದೆಗೆ ನೇಮಕಾತಿ ಆಗ್ತಿಲ್ಲ.ದೇವರು ವರ ಕೊಟ್ರೂ ಪೂಜಾರಿ ಕೊಡಲಿಲ್ಲ ಅನ್ನೋ ಮಾತಿಗೆ ಇದು ಸ್ಪಷ್ಟ ಉದಾಹರಣೆ. ಹಿಂದುಳಿದ ಪ್ರದೇಶ ಅಭಿವೃದ್ಧಿಗೋಸ್ಕರ ಸರ್ಕಾರಿ ನೇಮಕಾತಿಯಲ್ಲಿ ಸಂವಿಧಾನದಡಿ ವಿಶೇಷ ಮೀಸಲಾತಿ ಕಲ್ಪಿಸಲಾಗಿದೆ. ಆದ್ರೆ ಉನ್ನತ ಶಿಕ್ಷಣ ಇಲಾಖೆ ಮಾತ್ರ ಆ ಮೀಸಲಾತಿಯನ್ನೆ ತಪ್ಪಾಗಿ ಅರ್ಥೈಸಿದೆ. ಹೈದ್ರಾಬಾದ್ ಕರ್ನಾಟಕ ಅಭ್ಯರ್ಥಿಗಳು ರ್ಯಾಂಕ್ ಬಂದ್ರೂ ಪ್ರಾಧ್ಯಾಪಕರ ಹುದ್ದೆಗೆ ನೇಮಕಾತಿ ಆಗ್ತಿಲ್ಲ.

ಕಳೆದ 2015ರಲ್ಲಿ ರಾಜ್ಯದ ವಿವಿಧ ಸರ್ಕಾರಿ ಕಾಲೇಜಿನಲ್ಲಿ ಖಾಲಿ ಇದ್ದ 2034 ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಉನ್ನತ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಈ ಪೈಕಿ 174 ಹುದ್ದೆಗಳು ಹೈದ್ರಾಬಾದ್ ಕರ್ನಾಟಕ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿತ್ತು. ಇದೀಗ ಆಯ್ಕೆ ಪಟ್ಟಿ ಪ್ರಕಟವಾಗಿದ್ದು, ಹೈದ್ರಾಬಾದ್ ಕರ್ನಾಟಕ ಮೀಸಲು ಬಯಸಿ ಅರ್ಜಿ ಸಲ್ಲಿಸಿರೋ ಅಭ್ಯರ್ಥಿಗಳ ಪೈಕಿ 314 ಅಭ್ಯರ್ಥಿಗಳು ಅಂತಿಮ ಆಯ್ಕೆ ಪಟ್ಟಿಯಲ್ಲಿದ್ದಾರೆ. ಇದರಲ್ಲಿ 140 ಅಭ್ಯರ್ಥಿಗಳು ಜನರಲ್ ಮೆರಿಟ್ ನಲ್ಲಿ ಆಯ್ಕೆಯಾಗಿದ್ದಾರೆ. ನೇಮಕಾತಿ ಆದೇಶ ಕೊಡೋವಷ್ಟರಲ್ಲಿ ಹೈದ್ರಾಬಾದ್ ಕರ್ನಾಟಕೇತರ 28 ಅಭ್ಯರ್ಥಿಗಳು ಕೆಎಟಿ ಮೊರೆ ಹೋಗಿದ್ದು, ಹೈ-ಕ ಮೀಸಲಾತಿ ಕೋರಿ ಜನರಲ್ ಮೆರಿಟ್ ನಲ್ಲಿ ಆಯ್ಕೆ ಆಗಿರೋ ಅಭ್ಯರ್ಥಿಗಳ ಆದೇಶ ನೀಡದಂತೆ ವಿನಂತಿ ಮಾಡಿದ್ರು. ಇದರ ಬೆನ್ನಲ್ಲೇ ಸರ್ಕಾರ ಒಟ್ಟು 314 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿಲ್ಲ…

ಆದ್ರೆ ಕೆಎಟಿ ,ಅರ್ಜಿದಾರರ ಮನವಿ ನ್ಯಾಯಸಮ್ಮತವಲ್ಲ ಎಂದು ಹೇಳಿ ಅರ್ಜಿ ವಜಾಗೊಳಿಸಿದೆ. ಮೀಸಲಾತಿ ಕೋರಿರೋ ಅಭ್ಯರ್ಥಿ ಹೆಚ್ಚು ಅಂಕ ಪಡೆದರೆ ಜನರಲ್ ಮೆರಿಟ್ ನಲ್ಲಿ ಆಯ್ಕೆಯಾಗಬೇಕಾಗುತ್ತದೆ ಎಂದು ಕಾಲೇಜು ಶಿಕ್ಷಣ ಇಲಾಖೆಗೆ ತಿಳಿಸಿದೆ. ಆದಾಗ್ಯೂ ಮೊಂಡು ಹಟಕ್ಕೆ ಬಿದ್ದಿರೋ ಉನ್ನತ ಶಿಕ್ಷಣ ಇಲಾಖೆ ಹೈದ್ರಾಬಾದ್ ಕರ್ನಾಟಕ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡ್ತಿಲ್ಲ. ಹೈದ್ರಾಬಾದ್ ಕರ್ನಾಟಕ ಭಾಗದವರೆ ಆಗಿರೋ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಈ ಭಾಗದ ಅಭ್ಯರ್ಥಿಗಳಿಗೆ ಅನ್ಯಾಯ ಮಾಡ್ತಿದ್ದಾರೆ ಅಂತ ನೊಂದ ಅಭ್ಯರ್ಥಿಗಳು ಆರೋಪ ಮಾಡ್ತಿದ್ದಾರೆ. ಒಟ್ನಲ್ಲಿ ಹೈದ್ರಾಬಾದ್ ಕರ್ನಾಟಕ ಭಾಗದ ಅಭ್ಯರ್ಥಿಗಳು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಆದೇಶ ಪತ್ರಕ್ಕಾಗಿ ಜಾತಕ ಪಕ್ಷಿಯಂತೆ ಕಾಯ್ತಿದ್ದಾರೆ. ಇನ್ನಾದ್ರೂ ಅವ್ರಿಗೆ ನೇಮಕಾತಿ ಆದೇಶ ಪತ್ರ ನೀಡುವತ್ತ ಇಲಾಖೆ ಕ್ರಮವಹಿಸಬೇಕಿದೆ..
ರಾಚಪ್ಪ ಬನ್ನಿದಿನ್ನಿ ಸುದ್ದಿಟಿವಿ,ಕೊಪ್ಪಳಮಖ

0

Leave a Reply

Your email address will not be published. Required fields are marked *