ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದ ಆರ್​​ಬಿಐ

ನವದೆಹಲಿ: ಆರ್​ಬಿಐ ಕಳೆದ ಎರಡು ಅವಧಿಯ ರೆಪೋ ದರವನ್ನು ಮುಂದುವರಿಸಿದೆ. ಕಳೆದ ಫೆಬ್ರವರಿಯಲ್ಲಿ ಕೂಡ ಈ ಹಿಂದಿನ ಶೇ. 6.25ರ ರೆಪೋದರವನ್ನು ಮುಂದುವರಿಸಿತ್ತು. ಮುಂದಿನ ತ್ರೈಮಾಸಿಕ ಅವಧಿಗೆ ಶೇ. 6.25ರ ದರವನ್ನು ಮುಂದುವರಿಸಿದೆ. ಹಣದುಬ್ಬರ ನಿಯಂತ್ರಣ ಮತ್ತು ಅಭಿವೃದ್ಧಿ ದರದಲ್ಲಿ ಕುಂಠಿತವಾಗದಿರುವುದನ್ನು ತಡೆಯುವ ಸಲುವಾಗಿ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಆರ್​ಬಿಐ ನಿರ್ಧರಿಸಿದೆ. ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧ ನಂತರ ಆರ್​​ಬಿಐ ಎರಡನೇ ಬಾರಿ ಸತತವಾಗಿ ರೆಪೋ ದರದಲ್ಲಿ ಯಥಾಸ್ಥಿತಿ ಕಾಪಾಡಿಕೊಂಡಿದೆ. ಅಲ್ಲದೇ, 2018ನೇ ಆರ್ಥಿಕ ವರ್ಷದಲ್ಲಿ ಶೇ. 7.3%ರಷ್ಟು ಜಿಡಿಪಿ ಬೆಳವಣಿಗೆಯನ್ನು ದಾಖಲಿಸುವ ಗುರಿ ಹೊಂದಲಾಗಿದೆ.

0

Leave a Reply

Your email address will not be published. Required fields are marked *