ಇಂದಿನಿಂದ 2 ದಿನಗಳ ಕಾಲ ಜಪಾನ್​ ಪ್ರಧಾನಿ ಶಿಂಜೋ ಅಬೆ ಭಾರತ ಪ್ರವಾಸ..

ಇಂದಿನಿಂದ 2 ದಿನಗಳ ಕಾಲ ಜಪಾನ್​ ಪ್ರಧಾನಿ ಶಿಂಜೋ ಅಬೆ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ.ಭಾರತ-ಜಪಾನ್‌ 12 ನೇ ವಾರ್ಷಿಕ ಸಮಾವೇಶದಲ್ಲಿ ಪ್ರಧಾನಿ ಮೋದಿ,ಶಿಂಜೋ ಅಬೆ ಪಾಲ್ಗೊಳ್ಳಲಿದ್ದಾರೆ.. ಉಭಯ ನಾಯಕರೂ ಇಂದು ಅಹಮದಾಬಾದ್‌ ವಿಮಾನ ನಿಲ್ದಾಣದಿಂದ ಸಾಬರಮತಿ ಆಶ್ರಮಕ್ಕೆ ರೋಡ್‌ ಶೋ ಮೂಲಕ ತೆರಳಲಿದ್ದು,ವಿಶೇಷ ಅಂದ್ರೆ ಇದೇ ಮೊದಲ ಬಾರಿಗೆ ನಮ್ಮ ದೇಶದ ಪ್ರಧಾನ ಮಂತ್ರಿ ಹಾಗೂ ಬೇರೆ ದೇಶದ ಪ್ರಧಾನ ಮಂತ್ರಿ ರೋಡ್​ ಶೋನಲ್ಲಿ ಪಾಲ್ಗೊಳ್ಳುತ್ತಿರುವುದು..ಉಭಯ ನಾಯಕರಿಗೆ ಸ್ವಾಗತ ಕೋರಲು ಸಜ್ಜಾಗಿದ್ದೇವೆ ಎಂದು ಗುಜರಾತ್‌ ರಾಜ್ಯ ಘಟಕದ ಅಧ್ಯಕ್ಷ ಜಿತುಭಾಯಿ ವಘಾನಿ ತಿಳಿಸಿದ್ದಾರೆ.ಅಬೆ ಗಾಂಧೀಜಿಯ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದು,ಇಂದು ಸಂಜೆವರೆಗೂ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ..ಇನ್ನು ನಾಳೆ ದೇಶದ ಬಹುಮಹತ್ವಾಕಾಂಕ್ಷೆಯ ಬುಲೆಟ್‌ ಟ್ರೇನ್‌ ಯೋಜನೆಗೆ ಉಭಯ ನಾಯಕರು ಚಾಲನೆ ನೀಡಲಿದ್ದು,ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ..

0

Leave a Reply

Your email address will not be published. Required fields are marked *