ಪ್ಯಾರಿಸ್ ಒಪ್ಪಂದವನ್ನು ಹೊಗಳಿದ ಪ್ರಧಾನಿ ನರೇಂದ್ರ ಮೋದಿ

ಪ್ಯಾರಿಸ್: ಪ್ಯಾರಿಸ್ ಹವಾಮಾನ ವೈಪರೀತ್ಯ ಒಪ್ಪಂದದಿಂದಾಗಿ ಹವಾಮಾನದ ರಕ್ಷಣೆಯ ವಿಷಯದಲ್ಲಿ ಮಹತ್ವದ ಹೆಜ್ಜೆ ಇಟ್ಟಂತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಅಭಿಪ್ರಾಯಪಟ್ಟಿದ್ದಾರೆ. 4 ರಾಷ್ಟ್ರಗಳ 6 ದಿನಗಳ ವಿದೇಶ ಪ್ರವಾಸದ ಕಡೆಯ ಭೇಟಿಯಲ್ಲಿ ಅವರು ಫ್ರಾನ್ಸ್​ ಪ್ರವಾಸದಲ್ಲಿದ್ದಾರೆ. ಈ ವೇಳೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರಾನ್ ಅವರೊಂದಿಗೆ ಮಹತ್ವದ ಒಪ್ಪಂದಗಳ ಕುರಿತು ಚರ್ಚಿಸಲಿದ್ದಾರೆ. ಈ ವೇಳೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರಾನ್ ಅವರೊಂದಿಗೆ ಭಾರತದ ಎನ್​ಎಸ್​​ಜಿ ಸದಸ್ಯತ್ವ, ಹವಾಮಾನ ವೈಪರೀತ್ಯ ಮತ್ತು ಭಯೋತ್ಪಾದನೆ ನಿಯಂತ್ರಣ ಕುರಿತು ಮಹತ್ವದ ಮಾತುಕತೆ ನಡೆಯಲಿದೆ.

ಭವಿಷ್ಯದ ಜನಾಂಗಕ್ಕೆ ಹವಾಮಾನ ವೈಪರೀತ್ಯ ಒಪ್ಪಂದದಿಂದ ಮಹತ್ವದ ಪ್ರಯೋಜನಗಳಿವೆ ಎಂದು ಕೂಡ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗುಟೆರಸ್ ಅವರ ಎಚ್ಚರಿಕೆಯ ನಡುವೆ ಕೂಡ, ಎರಡು ದಿನಗಳ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಒಪ್ಪಂದದಿಂದ ಹಿಂದೆ ಸರಿದ ನಂತರ ಈ ಮಹತ್ವದ ಹೇಳಿಕೆಯನ್ನು ಮೋದಿ ನೀಡಿದ್ದಾರೆ.

ಪ್ಯಾರಿಸ್ ಒಪ್ಪಂದ ಹವಾಮಾನ ವೈಪರೀತ್ಯಗಳ ನಿಯಂತ್ರಣ ಮತ್ತು ಸ್ವಾಭಾವಿಕ ಸಂಪನ್ಮೂಲಗಳನ್ನು ರಕ್ಷಿಸುವ ಸಲುವಾಗಿ ನಾವು ಕೈಗೊಳ್ಳಬೇಕಾದ ಜವಾಬ್ದಾರಿಗಳನ್ನು ಪ್ರತಿಬಿಂಬಿಸುತ್ತದೆ. ಈ ಒಪ್ಪಂದ ಒಂದು ರೀತಿಯಲ್ಲಿ ನಮ್ಮೆಲ್ಲರ ಅದೃಷ್ಟ ಎಂದು ಕೂಡ ಅವರು ಹೇಳಿದ್ದಾರೆ. ನಮ್ಮ ಹಿರಿಯ ತಲೆಮಾರಿನ ಕಾರಣದಿಂದಾಗಿ ನಮಗೆ ಸ್ವಾಭಾವಿಕ ಸಂಪನ್ಮೂಲಗಳು ಕೊಡುಗೆಯಾಗಿ ಬಂದಿವೆ. ಅವುಗಳನ್ನು ನಾವು ಮುಂದಿನ ತಲೆಮಾರಿಗೆ ಸಾಗಿಸಬೇಕು ಎಂದು ಅವರು ಪ್ಯಾರಿಸ್​​ನಲ್ಲಿ ಹೇಳಿದರು.

ಉಭಯ ರಾಷ್ಟ್ರಗಳೊಂದಿಗೆ ಆಳವಾದ ಸಹಭಾಗಿತ್ವ ಇದೆ. ಉಭಯ ದೇಶಗಳು ಸಾಕಷ್ಟು ದೀರ್ಘ ಕಾಲದಿಂದ ಬಹುಪಕ್ಷೀಯ ವಿಷಯದಲ್ಲಿ ಒಟ್ಟಾಗಿ ಕೆಲಸ ಮಾಡಿವೆ ಎಂದು ಕೂಡ ಅಭಿಪ್ರಾಯಪಟ್ಟರು.
ಅಲ್ಲದೇ, ಉಭಯ ದೇಶಗಳ ನಡುವೆ ಸಾಂಸ್ಕೃತಿಕ ಸಂಬಂಧವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದರು. ಅನೇಕ ಭಾರತೀಯರು ಶಾಂತಿ ಸ್ಥಾಪನೆಗಾಗಿ ಮೊದಲ ಎರಡು ಮಹಾಯುದ್ಧಗಳಲ್ಲಿ ಹೋರಾಡಿದ್ದಾರೆ ಎಂದು ಕೂಡ ಅವರು ಇತಿಹಾಸವನ್ನು ಮೆಲುಕು ಹಾಕಿದರು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *