ಜಾಮಿಯ ಮಿಲಿಯ ಇಸ್ಲಾಮಿಯ ವಿವಿಗೆ ಮೊದಲ ಮಹಿಳಾ ಕುಲಾಧಿಪತಿ

ನವದೆಹಲಿ: ಮಣಿಪುರದ ರಾಜ್ಯಪಾಲೆ ನಜ್ಮಾ ಹೆಫ್ತುಲ್ಲಾ ಅವರನ್ನು ಜಾಮಿಯ ಮಿಲಿಯ ಇಸ್ಲಾಮಿಯ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿ ನೇಮಿಸಲಾಗಿದೆ. ಈ ಮೂಲಕ ಜಾಮಿಯ ಮಿಲಿಯ ವಿವಿಯ ಮೊಟ್ಟ ಮೊದಲ ಮಹಿಳಾ ಕುಲಪತಿಯಾದ ದಾಖಲೆಯನ್ನು ಅವರು ಬರೆದಿದ್ದಾರೆ. ಲೆಫ್ಟಿನೆಂಟ್ ಜನರಲ್ ಎಂ ಎ ಜಕಿ ಅವರ ಅವಧಿ ಮುಗಿದಿದೆ. ಈ ಸ್ಥಾನವನ್ನು ನಜ್ಮಾ ತುಂಬಲಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ವಿವಿಯ ಕುಲಪತಿ ತಲತ್ ಅಹಮದ್, 5 ವರ್ಷಗಳ ಅವಧಿಗೆ ನಜ್ಮಾ ಹೆಫ್ತುಲ್ಲಾ ಅವರನ್ನು ನೇಮಿಸಲಾಗಿದೆ ಎಂದಿದ್ದಾರೆ. ನಜ್ಮಾ ಅವರು 5 ಬಾರಿ ರಾಜ್ಯಸಭೆಯ ಸದಸ್ಯರಾಗಿದ್ದರು. ಅಲ್ಲದೇ, ಉಪ ಸಭಾಪತಿಯಾಗಿ, ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆ ಸಚಿವೆಯಾಗಿ ಕಾರ್ಯ ನಿರ್ವಹಿಸಿದ್ದಾರೆ. ನಂತರ ಅವರನ್ನು ಮಣಿಪುರದ ರಾಜ್ಯಪಾಲೆಯಾಗಿ ಕೇಂದ್ರ ಸರ್ಕಾರ ನೇಮಿಸಿತ್ತು.

0

Leave a Reply

Your email address will not be published. Required fields are marked *