ನಾಗಚೈತನ್ಯ- ಸಮಂತಾ ಜೋಡಿಯ ಆರತಕ್ಷತೆ..

ಒಂದು ತಿಂಗಳ ಹಿಂದೆ ಸಪ್ತಪದಿ ತುಳಿದಿದ್ದ ನಾಗಚೈತನ್ಯ ಮತ್ತು ಸಮಂತಾರ ಅದ್ಧೂರಿ ಆರತಕ್ಷತೆ ಹೈದ್ರಾಬಾದ್‌ನಲ್ಲಿ ನಡೆಯಿತು. ಚಿತ್ರರಂಗದ ನೂರಾರು ಗಣ್ಯರು ಆಗಮಿಸಿ ಈ ತಾರಾಜೋಡಿಗೆ ಶುಭ ಹಾರೈಸಿದರು.ಒಂದು ತಿಂಗಳ ಹಿಂದೆ ಹಿಂದೂ ಮತ್ತು ಕ್ರೈಸ್ತ ಸಂಪ್ರದಾಯದಂತೆ ಮದುವೆಯಾಗಿದ್ದ ಸ್ಟಾರ್ ಜೋಡಿ ನಾಗಚೈತನ್ಯ ಮತ್ತು ಸಮಂತಾ. ಈ ಜೋಡಿಯ ಅದ್ಧೂರಿ ಆರತಕ್ಷತೆ ನಿನ್ನೆ ಹೈದರಾಬಾದ್ನಲ್ಲಿ ನಡೆಯಿತು. ಅದ್ಧೂರಿ ಆರತಕ್ಷತೆಗೆ ಟಾಲಿವುಡ್ ಚಿತ್ರರಂಗವೇ ನೆರೆದಿತ್ತು.ಆರತಕ್ಷತೆಯಲ್ಲಿ ನಾಗಚೈತನ್ಯ ಕಪ್ಪು ಬಣ್ಣದ ಕೋಟ್ ಧರಿಸಿದ್ದರು. ಸಮಂತಾ ಬೆಳ್ಳಿ ಬಣ್ಣದ ಫುಲ್ ಸ್ಲೀವ್ ಉಡುಪಿನಲ್ಲಿ ಕಂಗೊಳಿಸುತ್ತಿದ್ದರು.

ಸಮಾರಂಭದಲ್ಲಿ ರಾಮ್ ಚರಣ್ ತೇಜಾ, ಎಸ್.ಎಸ್ ರಾಜಮೌಳಿ, ನಂದಮೂರಿ ಹರಿಕೃಷ್ಣ, ಹಿರಿಯ ನಟ ಕೃಷ್ಣ, ಚಿರಂಜೀವಿ, ಅಲ್ಲು ಅರ್ಜುನ್, ನಾನಿ, ಹಾಸ್ಯನಟ ಬ್ರಹ್ಮಾನಂದಂ, ವೆಂಕಟೇಶ್ ದಗ್ಗುಬಾಟಿ, ರಾಣಾ ದಗ್ಗುಬಾಟಿ ಸೇರಿದಂತೆ ಹಲವರು ಆಗಮಿಸಿ ಜೋಡಿಗೆ ಶುಭಕೋರಿದರು. ಇನ್ನು ಈ ನವಜೋಡಿಗೆ ಸ್ನೇಹಿತರು, ರಾಜಕಾರಣಿಗಳು, ಉದ್ಯಮಿಗಳು, ತೆಲುಗು ಸೇರಿದಂತೆ ಹಲವು ಚಿತ್ರರಂಗದ ತಾರೆಯರು ಆಗಮಿಸಿ ಶುಭಹಾರೈಸಿದರು.

ಬ್ಯೂರೋ ರಿಪೋರ್ಟ್ ಸುದ್ದಿಟಿವಿ

0

Leave a Reply

Your email address will not be published. Required fields are marked *