ಮಯನ್ಮಾರ್ ವಿಮಾನ ನಾಪತ್ತೆ

ಮೆಯಿಕ್: 116 ನಾಗರಿಕರನ್ನು ಹೊತ್ತೊಯ್ಯುತ್ತಿದ್ದ ಮಯನ್ಮಾರ್​​ನ ಸೇನಾ ವಿಮಾನ ನಾಪತ್ತೆಯಾಗಿದೆ ಎಂದು ಸೇನಾ ಮುಖ್ಯಸ್ಥರು ಹೇಳಿಕೆ ನೀಡಿದ್ದಾರೆ. 105 ಜನ ಪ್ರಯಾಣಿಕರು ಮತ್ತು 11 ಸಿಬ್ಬಂದಿ ಈ ವೇಳೆ ಪ್ರಯಾಣಿಸುತ್ತಿದ್ದರು. ಮೆಯಿಕ್ ಮತ್ತು ಯಾಂಗನ್​ ನಗರಗಳ ಮಧ್ಯ ವಿಮಾನ ನಾಪತ್ತೆಯಾಗಿದೆ. ದವೇಯಿ ನಗರದಿಂದ ಹಾರಿದ ವಿಮಾನ 20 ಮೈಲಿ ಕ್ರಮಿಸಿದ ನಂತರ ಮಧ್ಯಾಹ್ನ 1:35ರ ಸುಮಾರಿಗೆ ವಿಮಾನ ಸಂಪರ್ಕ ಕಡಿದುಕೊಂಡಿದೆ. ನಾಪತ್ತೆಯಾದ ವಿಮಾನದ ಹುಡುಕಾಟಕ್ಕೆ ಸೇನಾ ನೌಕೆಗಳು ಮತ್ತು ವಿಮಾನಗಳನ್ನು ನಿಯೋಜಿಸಲಾಗಿದೆ. ಸೇನೆ ಶೋಧಕಾರ್ಯದಲ್ಲಿ ನಿರತವಾಗಿದೆ. ತಾಂತ್ರಿಕ ದೋಷದಿಂದ ಈ ಘಟನೆ ನಡೆದಿದೆ. ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

0

Leave a Reply

Your email address will not be published. Required fields are marked *