ಕೇರಳ ಅತ್ಯಾಚಾರ ಪ್ರಕರಣ: ಬಿಷಪ್ ಹುದ್ದೆ ತೊರೆದ ಫ್ರಾಂಕ್ ಮುಳಕ್ಕಲ್

ತಿರುವಂತಪುರಂ: ಕೇರಳ ಕ್ರೈಸ್ತ ಸಂನ್ಯಾಸಿನಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ವಿಚಾರವನ್ನು ವ್ಯಾಟಿಕನ್​​ಗೆ ಮುಟ್ಟಿಸಲಾಗಿದೆ. ಈ ಕುರಿತು ಶೀಘ್ರದಲ್ಲೇ ಪ್ರಕಟಣೆಯ ಸಾಧ್ಯತೆ ಇದೆ. ಈ ನಡುವೆ ಬಿಷಪ್ ಫ್ರಾಂಕೋ ಮುಳಕ್ಕಲ್ ಕೇರಳದ ತಮ್ಮ ಹುದ್ದೆಯನ್ನು ತಾತ್ಕಾಲಿಕವಾಗಿ ಬಿಟ್ಟುಕೊಟ್ಟಿದ್ದಾರೆ. ನಂತರ ಮುಳಕ್ಕಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕೇರಳ ಕ್ರೈಸ್ತ ಸಂನ್ಯಾಸಿನಿಯ ಭಾವಚಿತ್ರವನ್ನು ಪ್ರಕಟಿಸಿದ ಘಟನೆ ನಡೆದಿದೆ. ನಿನ್ನೆ ಜೀಸಸ್ ಮಿಷನರಿಗಳು ಸಂತ್ರಸ್ತೆಯ ಫೋಟೋವನ್ನು ಪತ್ರದಲ್ಲಿ ಪ್ರಕಟಿಸಿವೆ. ಇದನ್ನು ನಾನು ಖಂಡಿಸುತ್ತೇನೆ ಎಂದು ಸಂತ್ರಸ್ತೆಯ ಸೋದರ ಹೇಳಿದ್ದಾರೆ. ಇದು ಅತ್ಯಂತ ನಾಚಿಕೆಯ ಸಂಗತಿ. ಈ ಸಭೆಗೆ ನೆರೆದ ಜನಸಮೂಯಕ್ಕೆ ನ್ಯಾಯಾಲಯದ ಆದೇಶದ ಕುರಿತು ತಿಳಿವಳಿಕೆ ಇಲ್ಲ. ಇಂತಹ ಮಾದರಿಯಲ್ಲಿ ನನ್ನ ಸೋದರಿಗೆ ಕಿರುಕುಳ ನೀಡಲು ಅವರು ಬಯಸಿದ್ದಾರೆ ಎಂದು ಅವರು ಹೇಳಿದರು.

ಇದುವರೆಗೆ ಅಂತಹ ಯಾವುದೇ ಪತ್ರ ನಮಗೆ ತಲುಪಿಲ್ಲ. ನನ್ನ ಪ್ರಕಾರ ಇದು ಸುಳ್ಳು ಸುದ್ದಿ ಇರಬಹುದು. ಇದು ಅಪರಾಧಿಗಳ ಕೈಕೆಲಸ ಇರಬೇಕು ಮತ್ತು ಅವರ ತಂಡ, ಕೇರಳ ಮತ್ತು ಪ್ರಪಂಚದ ಇತರ ಪ್ರದೇಶಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಬಲಹೀನಗೊಳಿಸಲು ಈ ತಂತ್ರ ನಡೆದಿರಬಹುದು ಎಂಬ ಶಂಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೊಟ್ಟಾಯಂನ ಎಸ್​​ಪಿ ಹರಿಶಂಕರ್, ಜಲಂಧರ್​ನ ಬಿಷಪ್ ಫ್ರಾಂಕೋ ಅವರಿಗೆ ಸೆಪ್ಟಂಬರ್ 19ರಂದು ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಲಾಗಿದೆ. ಪತ್ರದಲ್ಲಿ ಸಂತ್ರಸ್ತೆಯ ಭಾವಚಿತ್ರ ಮುದ್ರಿಸಿದ ಘಟನೆ ಸಂಬಂಧ ಕ್ರಿಮಿನಲ್ ದೂರನ್ನು ಮಿಶನರಿಗಳ ವಿರುದ್ಧ ದಾಖಲಿಸಲಾಗಿದೆ ಎಂದಿದ್ದಾರೆ.

ಕೇರಳದ ಕ್ರೈಸ್ತ ಸಂನ್ಯಾಸಿನಿ ಅತ್ಯಾಚಾರ ಪ್ರಕರಣದ ಆರೋಪಿ ಬಿಷಪ್ ಫ್ರಾಂಕೋ ಮುಳಕ್ಕಲ್ ಬಂಧಿಸುವಂತೆ ಆಗ್ರಹಿಸಿ, ಕೊಚ್ಚಿಯಲ್ಲಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ 8ನೇ ದಿನಕ್ಕೆ ಕಾಲಿಟ್ಟಿದೆ. ಜಂಟಿ ಕ್ರಿಶ್ಚಿಯನ್ ಸಮಿತಿಯ ಸ್ಟೀಫನ್ ಮ್ಯಾಥ್ಯೂ ಮುಷ್ಕರ ನಡೆಸುತ್ತಿದ್ದು, ಅವರಿಗೆ ಕ್ಯಾಥೋಲಿಕ್ ಸುಧಾರಣಾ ಚಳವಳಿಯ ಸದಸ್ಯೆ ಅಲೋಷಿ ಜೋಸೆಫ್ ಬೆಂಬಲ ವ್ಯಕ್ತಪಡಿಸಿದ್ದಾರೆ.

 

0

Leave a Reply

Your email address will not be published. Required fields are marked *