ಕುಲ್​ದೀಪ್ ಮೇಲೆ ಕೋಪಗೊಂಡಿದ್ದ ಧೋನಿ

ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್​ ಮಹೇಂದ್ರ ಸಿಂಗ್ ಧೋನಿ ಯಾರ ಮೇಲೂ ಸುಮ್​ ಸುಮ್ನೆ ಕೋಪಗೊಳ್ಳಲ್ಲ. ಒಂದು ವೇಳೆ ಕೋಪಗೊಂಡ್ರು ಅದಕ್ಕೊಂದು ಕಾರಣ ಇರುತ್ತೆ. ಈಗ ಟೀಮ್ ಇಂಡಿಯಾದ ಪ್ರಮುಖ ಆಟಗಾರರೊಬ್ರು ತಮ್ಮ ಮೇಲೆ ಧೋನಿ ಕೋಪಗೊಂಡಿದ್ದರು ಎಂದಿದ್ದಾರೆ. ಯಾರು ಅ ಆಟಗಾರ ಧೋನಿಗೆ ಯಾಕೆ ಅವರ ಮೇಲೆ ಕೋಪಿಸಿಕೊಂಡಿದ್ರು. ಧೋನಿ ಕೋಪದಲ್ಲಿ ಏನು ಹೇಳಿದ್ರು. ಅಂತ ತಿಳ್ಕೊಬೇಕಾ ಹಾಗಾದ್ರೆ ಈ ಸ್ಟೋರಿ ನೋಡಿ.

ಕ್ರಿಕೆಟ್​ನಲ್ಲಿ ಕೂಲ್​ ಕ್ಯಾಪ್ಟನ್ ಅಂದ ತಕ್ಷಣ ನೆನಪಿಗೆ ಬರೋ ಮೊದಲ ಹೆಸರು ಮಹೇಂದ್ರ ಸಿಂಗ್​ ಧೋನಿ. ಟೀಮ್ ಇಂಡಿಯಾದ ನಾಯಕರಾಗಿದ್ದಾಗ ತಮ್ಮ ಚಾಣಾಕ್ಷ ತಂತ್ರಗಾರಿಕೆ, ಶಾಂತ ಸ್ವಭಾವದಿಂದಲೇ ರಣನೀತಿಗಳನ್ನು ರೂಪಿಸಿ ತಂಡದ ಗೆಲುವಿಗೆ ಕಾರಣರಾದವರು. ನಾಯಕತ್ವದಿಂದ ಕೆಳಗಿಳಿದ ಮೇಲೂ ಧೋನಿ, ಕೊಹ್ಲಿಗೆ ಅಗತ್ಯ ಸಲಹೆ ಸೂಚನೆಗಳನ್ನ ನೀಡುತ್ತಿದ್ದಾರೆ.

ಧೋನಿ ಪಂದ್ಯದ ಸಮಯದಲ್ಲಿ ಎಂದಿಗೂ ಒತ್ತಡವಕ್ಕೆ ಒಳಗಾದವರು ಅಲ್ಲವೆ ಅಲ್ಲ. ಪಂದ್ಯ ತಮ್ಮಿಂದ ಕೈ ಜಾರುತ್ತಿದ್ದರೂ ಕೂಲ್​ ಆಗಿಯೇ, ಬಿಗಿ ಹಿಡಿತ ಸಾಧಿಸುವುದರ ಬಗ್ಗೆ ಯೋಚಿಸ್ತಾರೆ. ವಿಕೆಟ್​ ಹಿಂದೆ ನಿಂತು ಬೌಲರ್​ಗಳಿಗೆ ಸೂಚನೆಗಳನ್ನು ನೀಡಿ, ಬ್ಯಾಟ್ಸ್​ಮನ್​ಗಳಿಗೆ ಖೆಡ್ಡಾಕ್ಕೆ ಕೆಡವುತ್ತಾರೆ.ಆದ್ರೆ ಸದಾ ಕೂಲ್ ಆಗಿರೋ ಮಾಹಿ, ಮೈದಾನದಲ್ಲಿ ಕೆಲವೊಮ್ಮೆ ಕೋಪಗೊಂಡಿದ್ದು ಇದೆ. ಸಹ ಆಟಗಾರರು ತಾವು ಹೇಳಿದಂತೆ ಕೇಳದೆ ಇದ್ದಾಗ, ತಮ್ಮ ಗಮನವನ್ನ ಬೇರೆಡೆ ಹರಿಸಿದಾಗ ಅಟಗಾರರಿಗೆ ಧೋನಿಯಿಂದ ಬೈಗುಳ ಫಿಕ್ಸ್​​.

ಟೀಮ್ ಇಂಡಿಯಾದ ಪ್ರಮುಖ ರಿಸ್ಟ್​ ಸ್ಪಿನ್ನರ್​ ಕುಲ್​ದೀಪ್​ ಯಾದವ್​ ಧೋನಿ ತಮ್ಮ ಮೇಲೆ ಕೋಪಿಸಿಕೊಂಡಿದ್ದ ಸಂಗತಿಯನ್ನ ಹೊರಹಾಕಿದ್ದಾರೆ. ಕಳೆದ ವರ್ಷ ಇಂದೋರ್​ನಲ್ಲಿ ಟೀಮ್ ಇಂಡಿಯಾ ಹಾಗೂ ಶ್ರೀಲಂಕಾ ನಡುವೆ ಟಿ-20 ಪಂದ್ಯ ನಡೀತಾ ಇತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ 260 ರನ್ ದಾಖಲಿಸಿತ್ತು. ಈ ಮೊತ್ತ ಬೆನ್ನಟ್ಟಿದ್ದ ಶ್ರೀಲಂಕಾ ಕೂಡ ವೇಗವಾಗಿ ರನ್​ ಕಲೆಹಾಕ್ತಾ ಇತ್ತು.

ಅ ವೇಳೆ ಧೋನಿ ವಿಕೆಟ್​ ಹಿಂದು ಗಡೆಯಿಂದ ಸ್ಪಿನ್ನರ್ ಕುಲ್​ದೀಪ್​ಗೆ ಫೀಲ್ಡ್​ ಸೆಟ್​ ಚೇಂಜ್​ ಮಾಡುವಂತೆ ಸೂಚಿಸಿದ್ರು. ಕವರ್​ನಲ್ಲಿದ್ದ ಫೀಲ್ಡರ್​ ತೆಗೆದು, ಪಾಯಿಂಟ್​ನಲ್ಲಿ ನಿಲ್ಲಿಸಿಕೊಳ್ಳುವಂತೆ ಹೇಳಿದ್ರು. ಆಗ ಧೋನಿ ಮಾತಿಗೆ ಒಪ್ಪದ ಕುಲ್​ದೀಪ್​ ಬೇಡ ಈಗಿರೋದು ಸರಿಯಾಗಿದೆ ಎಂದಾಗ, ಧೋನಿ ನನಗೆ ಹುಚ್ಚಾ ನಿನಗೆ ಹೇಳಕೆ ನಾನು 300 ಮ್ಯಾಚ್​ ಆಡಿದೀನಿ ನಾನು ಹೇಳಿದಂತೆ ಕೇಳು ಎಂದ್ರು.

ಧೋನಿ ಮಾತು ಕೇಳಿ ಕ್ಷೇತ್ರ ರಕ್ಷಣೆ ಬದಲಿಸಿದ ಕುಲ್ದೀಪ್​​ ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾದೆ ಎಂದು ರಿಸ್ಟ್​ ಸ್ಪಿನ್ನರ್​​ ಹೇಳಿಕೊಂಡಿದ್ದಾರೆ.ಅದೇನೆ ಇರಲಿ, ಮೈಂಡ್​ಗೇಮ್​ಗೆ ಹೆಸರಾಗಿರೋ ಧೋನಿ ಲೆಕ್ಕಾಚಾರ ಯಾವತ್ತು ತಪ್ಪಾಗಲ್ಲ ಕುಲ್​ದೀಪ್​ರ ಈ ಮಾತುಗಳಿಂದ ಸಾಬೀತಾಗಿದೆ.

0

Leave a Reply

Your email address will not be published. Required fields are marked *