ಕೂಲ್ ಕ್ಯಾಪ್ಟನ್​ನ ಹೊಸ ಅವತಾರ…

ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್​, ಐಪಿಎಲ್​ ಚೆನ್ನೈ ಸೂಪರ್​ ಕಿಂಗ್ಸ್​​ ಹಾಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೊಸ ಅವತಾರ ಎತ್ತಿದ್ದಾರೆ. ಬ್ಯಾಟ್ ಹಿಡಿಯೋ ಕೈಯಲ್ಲಿ ಗನ್​ ಹಿಡಿದು ಗುರಿ ಹಿಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಏನ್ ಹೇಳ್ತಾ ಇದಾರೆ.ಭಾರತೀಯ ಕ್ರಿಕೆಟ್​ನ ಶ್ರೇಷ್ಠ ನಾಯಕ ಮಹೇಂದ್ರ ಸಿಂಗ್ ಧೋನಿ, ಟೀಮ್ ಇಂಡಿಯಾದ ನಾಯಕನ ಸ್ಥಾನದಿಂದ ಕೆಳಗಿಳಿದು 2 ವರ್ಷ ಕಳೆದಿದೆ.ಅಲ್ಲದೆ ಧೋನಿ ಮೊದಲ ಬ್ಯಾಟ್​ನಿಂದ ಮೊದಲಿನಂತೆ ಸಿಡಿತಿಲ್ಲ. ಮತ್ತೊಂದೆಡೆ ಧೋನಿ ಆಟ ಮುಗೀತು, ಅವ್ರಿನ್ನು ನಿವೃತ್ತಿಯಾಗಬೇಕು ಅನ್ನುವ ಮಾತುಗಳೂ ಕೇಳಿ ಬರ್ತಿವೆ. ಆದ್ರೆ ಧೋನಿ ಬ್ಯಾಟಿಂಗ್​ನಲ್ಲಿ ಮಿಂಚದೇ ಹೋದ್ರು, ಭಾರತದ ಪಂದ್ಯದ ವೇಳೆ ನಾಯಕ ವಿರಾಟ್​ಗೆ ಅಗತ್ಯ ಸಲಹೆ ನೀಡ್ತಾರೆ. ಈ ಮೂಲಕ ತಂಡದ ಗೆಲುವುಗಳಲ್ಲಿ ಮಹತ್ತರ ಪಾತ್ರವಹಿಸ್ತಿದಾರೆ.

ಆದ್ರೆ ಯಾರೇ ಏನೇ ಹೇಳಿದ್ರು ಅಭಿಮಾನಿಗಳಲ್ಲಿ ತಲೈವಾ ಧೋನಿ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಬರೀ ಅಭಿಮಾನಿಗಳಲ್ಲಿ ಮಾತ್ರ ಅಲ್ಲ ಕಾರ್ಪೋರೇಟ್​ ವಲಯದಲ್ಲೂ, ಧೋನಿ ಇನ್ನು ತಮ್ಮ ಮಾರ್ಕೆಟ್ ಉಳಿಸಿಕೊಂಡಿದ್ದಾರೆ. ತಮ್ಮ ಖದರ್​ ಕಡಿಮೆಯಾಗಿದ್ರು ಧೋನಿ ಈಗಲೂ ಹಲವು ಬ್ರ್ಯಾಂಡ್​ಗಳ ರಾಯಭಾರಿಯಾಗಿದ್ದಾರೆ.ಧೋನಿ ಈಗಾಗಲೇ ಹಲವು ಆ್ಯಡ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ ಈ ಬಾರಿ ಧೋನಿ ಆ್ಯಡ್​ ಶೂಟಿಂಗ್​​ನಲ್ಲಿ ಭಾಗವಹಿಸಿಲ್ಲ. ಬದಲಾಗಿ ಕೈಯಲ್ಲಿ ಗನ್​ ಹಿಡಿದು ​ಶೂಟಿಂಗ್​ ರೇಂಜ್ ಬ್ಯುಸಿಯಾಗಿದ್ದಾರೆ. ಥೇಟ್​ ಶೂಟರ್​ ರೀತಿಯಲ್ಲೆ ಗುರಿ ಇಟ್ಟು ಶೂಟ್​ ಮಾಡಿದ ವಿಡಿಯೋ, ಸಖತ್​ ವೈರಲ್​ ಆಗಿದೆ. ಈ ಪೋಟೋಗಳನ್ನು ಧೋನಿ ಸ್ವತಃ ತಮ್ಮ ಇನ್ಸಟ್ರಗ್ರಾಮ್​ನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅಲ್ಲದೆ ಆ್ಯಡ್​ ಶೂಟಿಂಗ್​ಗಿಂತ ಗನ್​ ಶೂಟಿಂಗ್​ ಹೆಚ್ಚು ಮಜಾ ಕೊಡುತ್ತೆ ಎಂದು ಬರೆದುಕೊಂಡಿದ್ದಾರೆ.

ಧೋನಿಗೆ ಸೇನೆ ಹಾಗೂ ಗನ್​ಗಳ ಮೇಲಿನ ಪ್ರೀತಿ ಹೊಸದೇನಲ್ಲ. ಇತ್ತೀಚೆಗೆ ಧೋನಿ ಭಾರತದ ಅತ್ಯುನ್ನತ ಪುರಸ್ಕಾರಗಳಲ್ಲಿ ಒಂದಾದ ಪದ್ಮಭೂಷಣ ಪುರಸ್ಕಾರಕ್ಕೆ ಭಾಜನರಾದ್ರು. ಅ ವೇಳೆ ಧೋನಿ ಸೈನಿಕನ ರೂಪದಲ್ಲಿ, ಮಾರ್ಚ್​ಫಾಸ್ಟ್​ ನಡಿಗೆ ಮೂಲಕ ಆಗಮಿಸಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದ್ರು. ಇನ್ಸ್​ಟ್ರಗ್ರಾಮ್​​ನಲ್ಲಿ ಇದಕ್ಕೆ ಸಂಬಂಧಿಸಿದ ಫೋಟವನ್ನೂ, ಅಪ್​ಲೋಡ್ ಮಾಡಿರುವ ಧೋನಿ, ಪದ್ಮ ಭೂಷಣ ಪುರಸ್ಕಾರ ಸ್ವೀಕರಿಸುವುದು ದೊಡ್ಡ ಗೌರವ, ದೇಶಕ್ಕಾಗಿ ತಮ್ಮ ಜೀವನವನ್ನೇ ಪಣಕ್ಕಿಟ್ಟಿರುವ ಎಲ್ಲಾ ಸೈನಿಕರಿಗೆ ನನ್ನ ಧನ್ಯವಾದಗಳು, ನಿಮ್ಮಿಂದಲೇ ನಾವು ಸಂತೋಷದ ಜೀವನ ನಡೆಸುತ್ತಿದ್ದೇವೆ ಸೈನಿಕರನ್ನ ಕಾರ್ಯವನ್ನ ಶ್ಲಾಘಿಸಿದ್ದಾರೆ.ಅದೇನೆ ಇರಲಿ ಧೋನಿ ಕ್ರಿಕೆಟ್​ ಹೊರತಾಗಿಯೂ ವಿವಿಧ ಹವ್ಯಾಸಗಳ ಮೂಲಕ ಲೈಫ್ ಎಂಜಾಯ್​ ಮಾಡುತ್ತಿದ್ದಾರೆ. ಇತ್ತ ಐಪಿಎಲ್​ನಲ್ಲಿ ಧೋನಿ ನಾಯಕರಾಗಿರುವ ಸಿಎಸ್​ಕೆ ತಂಡ ಆಡಿದ ಎರಡು ಪಂದ್ಯ ಗೆದಿದ್ದು, ಮೂರನೇ ಬಾರಿ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದೆ.

ಮಹೇಶ್​ ಗುರಣ್ಣವರ್​, ಸ್ಪೋರ್ಟ್ಸ್​​ ಬ್ಯೂರೋ, ಸುದ್ದಿಟಿವಿ

0

Leave a Reply

Your email address will not be published. Required fields are marked *