ಪ್ರಧಾನಿ ನರೇಂದ್ರ ಮೋದಿಯವರ ಹಿಂಬಾಲಕರೇ ಫೇಕ್​​: ವಿರೋಧಿಗಳಿಗೆ ಮತ್ತೊಂದು ಅಸ್ತ್ರ

ನವದೆಹಲಿ: ಪ್ರಧಾನಿ ಮೋದಿ ವಿರುದ್ಧ ಅವರ ಟೀಕಾಕಾರರು ಫೇಕ್, ಫೇಕು ಅಂಥಾ ಕಾಲೆಳೆಯೋ ಸಂಗತಿ ಸಾಮಾನ್ಯ. ಆದರೆ, ಇದೀಗ ಅವರ ಸಾಮಾಜಿಕ ಜಾಲತಾಣವಾದ ಟ್ವೀಟರ್​​ನಲ್ಲಿ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಸುದ್ದಿ ದೊಡ್ಡ ಸದ್ದು ಮಾಡ್ತಿದೆ. ಜಗತ್ತಿನ ವಿಶ್ವದ ರಾಜಕೀಯ ಮುಖಂಡರ ಪೈಕಿ ಪ್ರಧಾನಿ ನರೇಂದ್ರ ಮೋದಿ ಪ್ರಮುಖರ ಸಾಲಿನಲ್ಲಿ ನಿಂತಿದ್ದರು. ಇನ್ನು ಫೇಸ್​ಬುಕ್, ಟ್ವೀಟರ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಅವರು ಅತ್ಯಂತ ಜನಪ್ರಿಯರಾಗಿದ್ದಾರೆ. ಇದನ್ನೇ ಬಿಜೆಪಿ ಮತ್ತು ಸಂಘಪರಿವಾರ ಹಾಗೂ ಅವರ ಬೆಂಬಲಿಗರು ಅತಿ ದೊಡ್ಡ ಸಾಧನೆ ಎಂದೇ ಹೇಳ್ಕೊಂಡಿದ್ದರು. ಆದರೆ, ಇದರ ಸತ್ಯಾಸತ್ಯತೆ ಇದೀಗ ಬಹಿರಂಗವಾಗಿದೆ. ಸಿಕ್ಕಿರುವ ಮಾಹಿತಿಯ ಪ್ರಕಾರ ಅವರ ಹಿಂಬಾಲಕರಲ್ಲಿ ನಕಲಿ ಖಾತೆದಾರರ ಸಂಖ್ಯೆಯೇ ಹೆಚ್ಚು.

ಟ್ವಿಪ್ಲೊಮೆಸಿ ಹೆಸರಿನ ಸಂಶೋಧನಾ ಸಂಸ್ಥೆಯೊಂದು ಇತ್ತೀಚೆಗೆ ಒಂದು ಅಧ್ಯಯನ ನಡೆಸಿದೆ. ಇದರ ಅಧ್ಯಯನ ಪ್ರಕಾರ, ಪ್ರಧಾನಿ ನರೇಂದ್ರ ಮೋದಿಯವರ ಟ್ವೀಟರ್ ಖಾತೆಯಲ್ಲಿ ಇರುವ ಅವರ ಹಿಂಬಾಲಕರ ಪೈಕಿ ಶೇ. 60ರಷ್ಟು ಅನುಯಾಯಿಗಳು ನಕಲಿ ಅನ್ನೋ ಸಂಗತಿ ಅಚ್ಚರಿಯ ಸಂಗತಿ ಬಹಿರಂಗವಾಗಿದೆ. ಡಿಜಿಟಲ್ ಪ್ಲಾಟ್​​​ಫಾರ್ಮ್ ಆಗಿರುವ ಟ್ವಿಪ್ಲೊಮೆಸಿ, ಅಂತಾರಾಷ್ಟ್ರೀಯ ಸಂಘಟನೆಗಳು ಹಾಗೂ ಸರ್ಕಾರಗಳಿಗೆ ಡಿಜಿಟಲ್ ಕಾರ್ಯತಂತ್ರಗಳನ್ನು ಸುಧಾರಿಸಲು ನೆರವು ನೀಡುತ್ತದೆ. ಇದರ ಅಧ್ಯಯನದ ಪ್ರಕಾರ, ನರೇಂದ್ರ ಮೋದಿಯವರ 4,09,93,053 ಅನುಯಾಯಿಗಳ ಪೈಕಿ 1,61,91,426 ಅನುಯಾಯಿಗಳ ಖಾತೆ ನೈಜ. ಉಳಿದ 2,47,99,527 ಅನುಯಾಯಿಗಳು ನಕಲಿ ಎಂಬ ಸಂಗತಿ ಬಹಿರಂಗವಾಗಿದೆ. ಈ ಮೂಲಕ ಪ್ರಧಾನಿ ವಿರೋಧಿಗಳಿಗೆ ಮತ್ತೊಮ್ಮೆ ಸುಗ್ರಾಸ ಭೋಜನ ಸಿಕ್ಕಂತಾಗಿದೆ.

ಟ್ವೀಟರ್​​​ ಲೆಕ್ಕಪತ್ರ ಅಲ್ಗೊರಿದಮ್ ನೆರವಿನಿಂದ ಪ್ರಧಾನಿಯವರ ಹಿಂಬಾಲಕರ ಸಂಖ್ಯೆಯನ್ನು ದೃಢೀಕರಿಸಲಾಗಿದೆ. ಇನ್ನೊಂದು ಅಚ್ಚರಿ ಸಂಗತಿ ಎಂದರೆ, ಈ ನಕಲಿ ಹಿಂಬಾಲಕರ ಕಾಟ ಕೇವಲ ನಮ್ಮ ಪ್ರಧಾನಿಗೆ ಮಾತ್ರ ಸೀಮಿತವಾಗಿಲ್ಲ. ಜಗತ್ತಿನ ಮುಖ್ಯ ರಾಜಕೀಯ ನಾಯಕರಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪೋಪ್ ಫ್ರಾನ್ಸಿಸ್, ಕಿಂಗ್ ಸಲ್ಮಾನ್ ಅವರಿಗೆ ಕೂಡ ನಕಲಿ ಹಿಂಬಾಲಕರ ದೊಡ್ಡ ಪಡೆಯೇ ಸೃಷ್ಟಿಯಾಗಿದೆ. ಅಧ್ಯಯನ ವರದಿಯ ದಾಖಲೆಗಳ ಪ್ರಕಾರ, ಡೊನಾಲ್ಡ್ ಟ್ರಂಪ್ ಅವರ 4,89,39,948 ಅನುಯಾಯಿಗ ಪೈಕಿ, 1,24,45,604 ಅನುಯಾಯಿಗಳು ಮಾತ್ರ ನೈಜವಾಗಿದ್ದು, 3,59,80,870 ನಕಲಿ ಎಂಬ ಅಂಶ ಪತ್ತೆಯಾಗಿದೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಟ್ವೀಟ್ ಹಿಂಬಾಲಕರ ಸಂಖ್ಯೆಯ ಪೈಕಿ 36,96,460 ನಕಲಿ ಅನುಯಾಯಿಗಳು ಮತ್ತು 17,15,634 ನೈಜ ಖಾತೆದಾರರು ಹಿಂಬಾಲಕರಿದ್ದಾರೆ. ಇನ್ನು ಪೋಪ್ ಫ್ರಾನ್ಸಿಸ್ ಅವರನ್ನು ಟ್ವೀಟರ್​​ನಲ್ಲಿ ಹಿಂಬಾಲಿಸುತ್ತಿರುವವರ ಪೈಕಿ ಶೇಕಡಾ 59ರಷ್ಟು ಖಾತೆದಾರರು ನಕಲಿಗಳು ಎಂಬ ಅಂಶ ಬಹಿರಂಗವಾಗಿದೆ.

ಪ್ರದೀಪ್ ಮಾಲ್ಗುಡಿ ಸುದ್ದಿ ಟಿವಿ 

0

Leave a Reply

Your email address will not be published. Required fields are marked *