ಜರ್ಮನಿಯೊಂದಿಗೆ 8 ಒಪ್ಪಂದಗಳಿಗೆ ಭಾರತ ಸಹಿ

ಜರ್ಮನಿ: ಜರ್ಮನಿ, ಸ್ಪೇನ್​, ರಷ್ಯಾ, ಫ್ರಾನ್ಸ್​ ಸೇರಿದಂತೆ 4 ರಾಷ್ಟ್ರಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಇಂದು ಜರ್ಮನಿ ಪ್ರವಾಸದಲ್ಲಿದ್ದಾರೆ. ಭಾರತ – ಜರ್ಮನಿ ಉಭಯ ದೇಶಗಳೂ 8 ಒಪ್ಪಂದಗಳಿಗೆ ಸಹಿ ಹಾಕಿವೆ. ವಿದ್ಯುತ್, ಮೂಲಭೂತ ಸೌಕರ್ಯಗಳು ಈ ಒಪ್ಪಂದದ ಪ್ರಮುಖ ಅಜೆಂಡಾವಾಗಿದ್ದು, ಪ್ರಧಾನಿ ಮೋದಿ, ಜರ್ಮನಿಯ ಚಾನ್ಸೆ​ಲರ್​ ಎಂಜೆಲಾ ಮಾರ್ಕೆಲ್ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.

ಭಾರತದಲ್ಲಿ  ಹೂಡಿಕೆ ಮಾಡಲು ಜರ್ಮನಿಗೆ ಆಹ್ವಾನ ನೀಡಿದ ಪ್ರಧಾನಿ ನರೇಂದ್ರ ಮೋದಿ, ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಜರ್ಮನಿಯ ಪಾತ್ರ ದೊಡ್ಡದು ಎಂದಿದ್ದಾರೆ. 100 ಸ್ಮಾರ್ಟ್​ ಸಿಟಿಗಳನ್ನು ನಿರ್ಮಾಣ ಮಾಡುವುದು ನಮ್ಮ ಗುರಿ ಎಂದು ಮೋದಿ ಹೇಳಿದ್ದಾರೆ. ಭಾರತದ ಜೊತೆಗಿನ ಬಾಂಧವ್ಯ ಪುರಾತನವಾಗಿದ್ದು, ಭಾರತ ನಮ್ಮ ಉತ್ತಮ ಪಾಲುದಾರ ಎಂದು ಎಂಜೆಲಾ ಮಾರ್ಕೆಲ್ ಅಭಿಪ್ರಾಯಪಟ್ಟಿದ್ದಾರೆ.

0

Leave a Reply

Your email address will not be published. Required fields are marked *