ಫ್ರಾನ್ಸ್​​ ತಲುಪಿದ ಪ್ರಧಾನಿ: ಎನ್​ಎಸ್​​ಜಿ ಸದಸ್ಯತ್ವದ ಕುರಿತು ಮಹತ್ವದ ಚರ್ಚೆ

ಪ್ಯಾರಿಸ್: 6 ದಿನಗಳ 4 ರಾಷ್ಟ್ರಗಳ ಪ್ರಧಾನಿ ನರೇಂದ್ರ ಮೋದಿಯವರ ಪ್ರವಾಸ ಅಂತಿಮ ಘಟ್ಟ ತಲುಪಿದೆ. ಇಂದು ಫ್ರಾನ್ಸ್​​ನ ಪ್ಯಾರಿಸ್ ತಲುಪಿರುವುದಾಗಿ ಪ್ರಧಾನಿ ಟ್ವೀಟ್ ಮೂಲಕ ತಿಳಿಸಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರಾನ್ ಅವರೊಂದಿಗೆ ಭಾರತದ ಎನ್​ಎಸ್​​ಜಿ ಸದಸ್ಯತ್ವ, ಹವಾಮಾನ ವೈಪರೀತ್ಯ ಮತ್ತು ಭಯೋತ್ಪಾದನೆ ನಿಯಂತ್ರಣ ಕುರಿತು ಮಹತ್ವದ ಮಾತುಕತೆ ನಡೆಯಲಿದೆ.

ಅಲ್ಲದೇ, ಭಾರತದಲ್ಲಿ ಹೂಡಿಕೆ ಕುರಿತು ಭಾರತೀಯ ಮತ್ತು ವಿದೇಶದ ಉದ್ಯಮಿಗಳು ಭಾಗವಹಿಸಲಿದ್ದಾರೆ. ಫ್ರಾನ್ಸ್​​ ನಮ್ಮ ಮಹತ್ವದ ಪಾಲುದಾರ ದೇಶ. ಅಧ್ಯಕ್ಷ ಮ್ಯಾಕ್ರಾನ್ ಅವರನ್ನು ಭೇಟಿಯಾಗಲಿದ್ದೇನೆ. ಈ ವೇಳೆ ಅನೇಕ ವಿಷಯಗಳ ಕುರಿತು ಪರಸ್ಪರ ಸಹಕಾರ ಕುರಿತು ಚರ್ಚಿಸಲಾಗುವುದು ಎಂದು ಮೋದಿ ಹೇಳಿದ್ದಾರೆ.

0

Leave a Reply

Your email address will not be published. Required fields are marked *