ಪೊರಕೆಯಿಂದ ಕಸ ಗುಡಿಸಲು ಹೆಣಗಾಡಿದ ಪ್ರಧಾನಿ ನರೇಂದ್ರ ಮೋದಿ

ದೆಹಲಿ: ಸ್ವಚ್ಛತೆಯೇ ಸೇವೆ ಚಳವಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ ದೆಹಲಿಯ ಅಂಬೇಡ್ಕರ್ ಶಾಲೆಯಲ್ಲಿ ಕಸ ಗುಡಿಸಿದರು. ಈ ವೇಳೆ ಪೊರಕೆಯಿಂದ ಕಸ ಗುಡಿಸಲು ವಿಫಲವಾದ ಅವರು ಕೈಯಿಂದಲೇ ಕಸ ತೆಗೆದು ಹಾಕಿದರು. ದೆಹಲಿಯ ಪಹಲ್ ಗಂಜ್​ನ ಡಾ.ಬಿ.ಆರ್.ಅಂಬೇಡ್ಕರ್ ಶಾಲೆಯ ಆವರಣದಲ್ಲಿ ಕಸ ಗುಡಿಸಿದ ಅವರು, ಈ ವೇಳೆ ಅಂಬೇಡ್ಕರ್ ಮೂರ್ತಿ ಇದ್ದ ಕಡೆ ಕಸ ಗುಡಿಸಿ ನಗೆಪಾಟಲಿಗೆ ಈಡಾದರು. ಜೊತೆಗೆ, ಸ್ಥಳದಲ್ಲಿದ್ದ ವಿದ್ಯಾರ್ಥಿಗಳೊಂದಿಗೆ ಕೆಲಕಾಲ ಮಾತನಾಡಿದರು. ಇದಕ್ಕೂ ಮುನ್ನ ಭದ್ರತಾ ಸೌಲಭ್ಯವನ್ನು ಕೈಬಿಟ್ಟು, ಸ್ಥಳಕ್ಕೆ ಆಗಮಿಸಿದರು. ಈ ವೇಳೆ ಕೆಲಕಾಲ ಸಂಚಾರ ದಟ್ಟಣೆಯಲ್ಲಿ ಪ್ರಧಾನಿ ಮೋದಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.

1+

Leave a Reply

Your email address will not be published. Required fields are marked *