ಸಚಿವ ಡಿ.ವಿ. ಸದಾನಂದಗೌಡ ಮಾಜಿ ಪ್ರಧಾನಿ ದೇವೇಗೌಡರ ಕುರಿತು ಮೆಚ್ಚಿಗೆ ವ್ಯಕ್ತಪಡಿಸಿದ್ರು…

ದೇವೇಗೌಡರು ನಾಡು ಕಂಡ ಅಪ್ರತಿಮ ರಾಜಕಾರಣಿ. ಅವರ ರಾಜಕೀಯ ಇಚ್ಚಾಶಕ್ತಿ ದೊಡ್ಡದು. ನಾನೇನೂ ದೇವೇಗೌಡರ ಪಕ್ಷದವನಲ್ಲ. ಆದರೆ ಗುಣಕ್ಕೆ ಮತ್ಸರ ಇರಬಾರದು ಅಂತ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಮಾಜಿ ಪ್ರಧಾನಿ ದೇವೇಗೌಡರ ಕುರಿತು ಮೆಚ್ಚಿಗೆ ವ್ಯಕ್ತಪಡಿಸಿದ್ರು.

ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ದೇವೇಗೌಡ 85ನೇ ಹುಟ್ಟುಹಬ್ಬದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ನಾನು ಅವ್ರ ಅಭಿಮಾನಿ, ರಾಜಕೀಯ ಪ್ರವಾಹದಲ್ಲಿ ಸಾಕಷ್ಟು ಮಂದಿ ಕೊಚ್ಚಿ ಹೋಗಿದ್ದಾರೆ. ಆದ್ರೆ ದೇವೇಗೌಡರಿಗೆ ಎಲ್ಲವನ್ನೂ ಎದುರಿಸುವ ಎದೆಗಾರಿಕೆ ಇದೆ. ಕಬ್ಬಡಿ ಅಟದಲ್ಲಿ ಇರುವಂತೆ ರಾಜಕೀಯ ದಲ್ಲೂ ಕಾಲೆಳೆಯೋ ಮಂದಿ ಇದ್ದಾರೆ. ಆದರೆ ದೇವೇಗೌಡರು ರಾಜಕೀಯ ಪಟ್ಟುಗಳನ್ನು ಹಾಕುವುದರಲ್ಲಿ ಪರಿಣಿತರು. ಗೌಡರ ರಾಜಕೀಯ ಬದುಕು ಮುಗಿದೇ ಹೋಯಿತು ಅನ್ನುವ ಸಂದರ್ಭದಲ್ಲಿ ಫೀನಿಕ್ಸ್ ನಂತೆ ದೂಳಿನಿಂದ ಎದ್ದು ಬಂದವರು ಗೌಡರು ಅಂತ ಪ್ರಶಂಸಿದ್ರು.

ಇದೇ ಸಂದರ್ಭದಲ್ಲಿ ಹಲವು ಸಾಧಕರಿಗೆ ರೈತರತ್ನ ಎಚ್.ಡಿ ದೇವೇಗೌಡ್ರು ಪ್ರಶಸ್ತಿ ಪ್ರದಾನ ಮಾಡಿದ್ರು. ಮೇಯರ್ ಜಿ. ಪದ್ಮಾವತಿ, ಉಪ ಮೇಯರ್ ಆನಂದ್, ಕೇಂದ್ರ ಸಚಿವ ಸದಾನಂದ ಗೌಡ, ಶಾಸಕ ವೈ.ಎ.ನಾರಾಯಣ ಸ್ವಾಮಿ, ಮೇಲ್ಮನೆ ಸದಸ್ಯ ರಮೇಶ್‌ ಬಾಬು ಮತ್ತಿತರರು ಭಾಗವಹಿಸಿದ್ರು. ಈ ವೇಳೆ ಮಾತನಾಡಿದ ದೇವೇಗೌಡ ನಾನು ರೈತನ ಮಗ.. ಯಾರಿಗೂ ಮೋಸ ಮಾಡಿಲ್ಲ.. ರೈತರಿಗೆ ನೋವಾದ್ರೆ ತಡೆದುಕೊಳ್ಳಲ್ಲ ಅಂದ್ರು.. ಇನ್ನು ಇದೆ ವೇಳೆ ಕೇಂದ್ರ ಸಚಿವ ಡಿವಿಎಸ್​ ಹಾಗೂ ಮೇಯರ್​ ಪದ್ಮಾವತಿ ಬಗ್ಗೆ ಗೌಡರು ಮೆಚ್ಚುಗೆ ವ್ಯಕ್ತಪಡಿಸಿದ್ರು..

0

Leave a Reply

Your email address will not be published. Required fields are marked *