ಸಿದ್ದಗಂಗಾ ಶ್ರೀಗಳು ಲಿಂಗಾಯತ ಪ್ರತ್ಯೇಕ ಧರ್ಮವಾಗಲಿ ಎಂದದ್ದು ಸತ್ಯ : ಎಂ ಬಿ ಪಾಟೀಲ್ ಹೇಳಿಕೆ

ಸಿದ್ದಗಂಗಾ ಶ್ರೀಗಳು ಲಿಂಗಾಯತ ಪ್ರತ್ಯೇಕ ಧರ್ಮವಾಗಲಿ ಎಂದದ್ದು ಸತ್ಯ. ಅದು ಸುಳ್ಳು ಎಂತಾದರೇ ನಮ್ಮ ಕುಟುಂಬವೇ ಸರ್ವನಾಶವಾಗಲಿ ಎಂದು ಸಚಿವ ಎಂ ಬಿ  ಪಾಟೀಲ್ ಹೇಳಿದ್ದಾರೆ. ವಿಜಯಪುರದ ತಮ್ಮ ನಿವಾಸದಲ್ಲಿ ಮಾತನಾಡಿದ ಎಂ ಬಿ ಪಾಟೀಲ್, ಶ್ರೀಗಳು ಸ್ಪಷ್ಟವಾಗಿ ಹೇಳಿದ್ದಾರೆ. ನಾನು ಸ್ಪಷ್ಟವಾಗಿ ಅರ್ಥೈಸಿಕೊಂಡಿದ್ದೇನೆ. ಶ್ರೀಗಳು ನನಗೆ ಹೇಳಿದ್ದು ನೂರಕ್ಕೆ ನೂರರಷ್ಟು ಸ್ಪಷ್ಟ. ಈ ಕುರಿತು ಸಿದ್ದಗಂಗಾ ಕ್ಷೇತ್ರಕ್ಕೆ ತೆರಳಿ ಆಣೆ ಪ್ರಮಾಣ ಮಾಡಲು ಸಿದ್ಧ. ಸುಳ್ಳು ಎಂತಾದಲ್ಲಿ ನಾನು, ನನ್ನ ಪತ್ನಿ, ಮಕ್ಕಳ ಸಮೇತ ಸಿದ್ದಗಂಗಾ ಕ್ಷೇತ್ರದಲ್ಲಿ ಎಲ್ಲರ ಎದುರು ತಲೆ ಬಗ್ಗಿಸಿ ನಿಲ್ಲುತ್ತೇನೆ. ಆ ಶಾಪ ನನಗೆ ತಟ್ಟಲಿ. ಆದ್ರೆ ತುಮಕೂರು ಮಾಜಿ ಸಂಸದ ಬಸವರಾಜ್, ಮಾಜಿ ಸಿಎಂ ಯಡಿಯೂರಪ್ಪ, ವಿ ಸೋಮಣ್ಣ ತಪ್ಪು ಅರ್ಥ ಕಲ್ಪಿಸುತ್ತಿದ್ದಾರೆ. ಯಡಿಯೂರಪ್ಪ ಜೈಲಿಗೆ ಹೋದಾಗ ವಿ ಸೋಮಣ್ಣ ಸಿದ್ದಗಂಗಾ ಶ್ರೀಗಳನ್ನ ಜೈಲು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಭೇಟಿ ಮಾಡಿಸಿ ಶ್ರೀಗಳನ್ನ ಸಣ್ಣವರನ್ನಾಗಿ ಮಾಡಿದ್ದರು. ಈಗಲೂ ಅದೇ ಕೆಲಸವನ್ನ ಮಾಡಲಾಗ್ತಿದೆ. ಶ್ರೀಗಳ ಹೇಳಿದನ್ನ ತಿರುಚಿ ಈಗಲೂ ಸಣ್ಣವರನ್ನಾಗಿ ಮಾಡಲು ಯತ್ನಿಸುತ್ತಿದ್ದಾರೆ. ಹೀಗೆನಾದ್ರು ಮಾಡಿದ್ರೇ ಶ್ರೀಗಳ ಘನತೆ ಕುಂದಿಸಿದಂತಾಗುತ್ತೆ. ಮಠದ ಮರ್ಯಾದೆಯನ್ನ ಮಣ್ಣು ಪಾಲು ಮಾಡಿದಂತಾಗುತ್ತೆ ಎಂದು ಎಂ ಬಿ  ಪಾಟೀಲ್ , ಯಡಿಯೂರಪ್ಪ, ಸೋಮಣ್ಣ, ಬಸವರಾಜ್ ವಿರುದ್ಧ ಕಿಡಿಕಾರಿದರು.

0

Leave a Reply

Your email address will not be published. Required fields are marked *