ಟೋಲ್ ಪ್ಲಾಜಾದಲ್ಲಿ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಗುರುಗ್ರಾಮ: ಹರಿಯಾಣದ ಗುರುಗ್ರಾಮದಲ್ಲಿ ಟೋಲ್ ಸಂಗ್ರಹಿಸುತ್ತಿದ್ದ ಮಹಿಳಾ ಸಿಬ್ಬಂದಿಯ ಮೇಲೆ ಪುರುಷನೊಬ್ಬ ಹಲ್ಲೆಗೈಯಲು ಯತ್ನಿಸಿದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಾನು ಸ್ಥಳೀಯ, ಆದ್ದರಿಂದ ಟೋಲ್ ಫೀ ಕೊಡುವುದಿಲ್ಲ ಎಂದು ತಕರಾರು ತೆಗೆದ ಗ್ರಾಹಕನಿಂದ ಹಣ ಕೇಳಿದ ಸಿಬ್ಬಂದಿ ಮೇಲೆ ಹಲ್ಲೆ ಯತ್ನ ನಡೆದಿದೆ. ಸ್ಥಳೀಯ ಎಂಬ ದಾಖಲೆ ತೋರಿಸಿ ಎಂದದ್ದಕ್ಕೆ ನನ್ನ ಮೇಲೆ ಹಲ್ಲೆಗೈಯಲು ಯತ್ನ ನಡೆದಿದೆ ಎಂದು ಸಿಬ್ಬಂದಿ ಹೇಳಿಕೆ ನೀಡಿದ್ದಾರೆ. ಅಲ್ಲದೇ, ನನ್ನನ್ನು ಕೊಲ್ಲುವ ಬೆದರಿಕೆಯನ್ನೂ ಒಡ್ಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

0

Leave a Reply

Your email address will not be published. Required fields are marked *