ಕಲಬುರ್ಗಿ : ನಿಮಗೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬಾರದು ಎಂದು ಅನ್ನಿಸಿದರೆ ಹಾಗೆ ಮಾಡಿ. ಆದರೆ ಕಲಬುರ್ಗಿಗೆ ನಾನು ಏನಾದರೂ ಮಾಡಿದ್ದರೆ ನನ್ನ ಅಂತ್ಯ ಕ್ರಿಯೆಗಾದರೂ ಬನ್ನಿ…! ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಹೇಳಿದ ಮಾತಿದು.
ಅಫ್ಜಲಪುರದಲ್ಲಿ ಭಾಷಣ ಮಾಡುತ್ತಿದ್ದ ಅವರು ನೀವು ನಮಗೆ ಮತಹಾಕದಿದ್ದರೆ ನಿಮ್ಮ ಹೃದಯದಲ್ಲಿ ನನಗೆ ಜಾಗ ಇಲ್ಲ ಎಂದುಕೊಳ್ಳುತ್ತೇನೆ ಎಂದು ಅವರು ಹೇಳಿದರು.
ಕಲಬುರ್ಗಿಯಿಂದ ಎರಡು ಬಾರಿ ಗೆದ್ದು ಸಂಸತ್ತಿಗೆ ಹೋಗಿದ್ದ ಖರ್ಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತು ಹೋದರು. ನಂತರ ಅವರು ರಾಜ್ಯ ಸಭೆಗೆ ಆಯ್ಕೆಯಾದರು.
ನಾನು ನನ್ನ ಕೊನೆಯ ಉಸಿರಿನವರೆಗೆ ರಾಜಕೀಯದಲ್ಲಿ ಇರುತ್ತೇನೆ. ಬಿಜೆಪಿಯನ್ನು ಸೋಲಿಸಲು ಹೋರಾಟ ಮಾಡುತ್ತೇನೆ ಎಂದು ತಮ್ಮ ಕ್ಷೇತ್ರದ ಜನರಿಗೆ ಅವರು ಭರವಸೆ ನೀಡಿದರು.
ನಿವೃತ್ತಿ ಎನ್ನುವುದು ನಮ್ಮ ಕೆಲಸಕ್ಕೆ ವೃತ್ತಿಗೆ ಬರುವಂತಹುದು. ನಮ್ಮ ನಂಬಿಕೆ ಮತ್ತು ತತ್ವಾದರ್ಶಗಳೀಗೆ ನಿವೃತ್ತಿ ಇಲ್ಲ ಎಂದು ಖರ್ಗೆ ವಿವರಿಸಿದರು.







