Lokasabha Election 2024 : ಮತಗಟ್ಟೆಯತ್ತ ಮತದಾರರು, ಕರ್ನಾಟಕದಲ್ಲಿ ಪ್ರತಿಶತ 24 ರಷ್ಟು ಮತದಾನ, ಮಹಾರಾಷ್ಟ್ರದಲ್ಲಿ ನಿರುತ್ಸಾಹ

Lok Sabha Election Voting : ಬೆಳಗ್ಗೆ 7 ಗಂಟೆಯಿಂದ ಮತದಾನ ಶುರುವಾಗಿದ್ದು, ಮತದಾರರು ಉತ್ಸಾಹದಿಂದ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.

ನವದೆಹಲಿ: ಬೆಳಗ್ಗೆ 11 ಗಂಟೆ ವೇಳೆಗೆ ದೇಶದಲ್ಲಿ ಶೇ. 25.41ರಷ್ಟು ಕರ್ನಾಟಕದಲ್ಲಿ ಶೇ.24.48ರಷ್ಟು ಮತದಾನವಾಗಿದೆ. 2024ನೇ ಸಾಲಿನ ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಎರಡನೇ ಹಂತದ ಮತದಾನದ ಪ್ರಕ್ರಿಯೆ ನಡೆಯುತ್ತಿದೆ.

ಬೆಳಗ್ಗೆ 7 ಗಂಟೆಯಿಂದ ಮತದಾನ ಶುರುವಾಗಿದ್ದು, ಮತದಾರರು ಉತ್ಸಾಹದಿಂದ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ದೇಶದಲ್ಲಿ ಬೆಳಗ್ಗೆ 11 ಗಂಟೆಯವರೆಗೆ ದೇಶದಲ್ಲಿ ಶೇಕಡಾ 25.41ರಷ್ಟು ಮತ್ತು ಕರ್ನಾಟಕದಲ್ಲಿ ಶೇ. 24.48ರಷ್ಟು ಮತದಾನವಾಗಿದೆ.

ಲೋಕಸಭೆ ಚುನಾವಣೆಗೆ ದೇಶದಲ್ಲಿ ಮೂರುನೇ ಹಂತದ ಮತದಾನ ನಡೆಯುತ್ತಿದೆ. ಬೆಳಗ್ಗೆ 11 ಗಂಟೆವರೆಗೆ ಮಹಾರಾಷ್ಟ್ರದಲ್ಲಿ ಅತಿ ಕಡಿಮೆ ಮತದಾನವಾಗಿದೆ. ಇಲ್ಲಿವರೆಗೆ ಶೇ.18.18ರಷ್ಟು ಮಾತ್ರ ಮತದಾನ ನಡೆದಿದೆ. ಪ್ರಶ್ಚಿಮ ಬಂಗಾಳದಲ್ಲಿ ಶೇ.32.82ರಷ್ಟು ಮತದಾನವಾಗಿದೆ.

ಮಹಾರಾಷ್ಟ್ರದಲ್ಲಿ ಶೇ 18.18 ಗುಜರಾತ್​ನಲ್ಲಿ ಶೇ 24.35 ಉತ್ತರ ಪ್ರದೇಶದಲ್ಲಿ ಶೇ 26.12
ಅಸ್ಸಾಂನಲ್ಲಿ ಶೇ 27.34 ಬಿಹಾರದಲ್ಲಿ ಶೇ 24.41 ಛತ್ತೀಸ್‌ಗಢದಲ್ಲಿ ಶೇ 29.90 ಪಶ್ಚಿಮ ಬಂಗಾಳ ಶೇ 32.82 ಕರ್ನಾಟಕದಲ್ಲಿ ಶೇ 24.48% ಮಧ್ಯಪ್ರದೇಶದಲ್ಲಿ ಶೇ 30.21 ರಷ್ಟು ಮತದಾನವಾಗಿದೆ. ಪಶ್ಚಿಮ ಬಂಗಾಳದಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಮುರ್ಷಿದಾಬಾದ್‌ನ ಮತಗಟ್ಟೆಯೊಂದರ ಹೊರಗೆ ಹಿಂಸಾಚಾರ ನಡೆದಿದೆ. ಇಬ್ಬರು ಬಿಜೆಪಿ ಮತ್ತು ಟಿಎಂಸಿ ನಾಯಕರು ಜಗಳ ಮಾಡುತ್ತಿರುವ ದೃಶ್ಯ ಕಂಡುಬಂದಿದೆ.

ಘರ್ಷಣೆ ಮತ್ತಷ್ಟು ಉಲ್ಬಣಗೊಳ್ಳುವ ಮೊದಲು ಮತಗಟ್ಟೆಯ ಬಳಿ ಹಾಜರಿದ್ದ ಪೊಲೀಸರು ಇಬ್ಬರು ನಾಯಕರನ್ನು ಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿತು.

ಮುರ್ಷಿದಾಬಾದ್‌ನಲ್ಲಿ ಲೋಕಸಭೆ ಚುನಾವಣೆಯ 3ನೇ ಹಂತದ ಮತದಾನದ ವೇಳೆ ಟಿಎಂಸಿ ಮತ್ತು ಬಿಜೆಪಿ ನಾಯಕರು ಮತಗಟ್ಟೆಯ ಹೊರಗೆ ಘರ್ಷಣೆ ನಡೆಸಿದ್ದಾರೆ.

Author

error: