ಸಿಲಿಕಾನ್​ ಸಿಟಿಯಲ್ಲಿ ಭೂ ಮಾಫಿಯಾದ ಅಟ್ಟಹಾಸ

ಸಿಲಿಕಾನ್​ ಸಿಟಿಯಲ್ಲಿ ಭೂ ಮಾಫಿಯಾದ ಅಟ್ಟಹಾಸ ಮಿತಿಮೀರಿದೆ. ಇದೀಗ ಭೂಮಾಫಿಯಾದ ಕೆಂಗಣ್ಣು ಬೆಂಗಳೂರಿನ ಪ್ರಮುಖ ಕೆರೆಗಳಲ್ಲೊಂದಾದ ಉತ್ತರಹಳ್ಳಿಯ ಸುಬ್ರಹ್ಮಣ್ಯಪುರ ಕೆರೆಯತ್ತ ಬಿದ್ದಿದೆ. ಪರಿಣಾಮ ಕಿಡಿಗೇಡಿಗಳು ನಿನ್ನೆ ರಾತ್ರಿ ಕೆರೆಯ ಎಡದಂಡೆಯನ್ನು  ಸಂಪೂರ್ಣ ಡ್ಯಾಮೇಜ್​ ಮಾಡಿದ್ದಾರೆ.  ಕೆರೆ ಡ್ಯಾಮೇಜ್​ ಆದ ಸ್ಥಳದಿಂದ ನಿನ್ನೆ ರಾತ್ರಿಯಿಂದಲೂ ಎತ್ತೇಚ್ಚವಾದ ನೀರು ರಾಜಕಾಲುವೆ ಮೂಲಕ ಹೊರಹೋಗುತ್ತಿದೆ. ಈ ಮೂಲಕ ಸುಮಾರು ಆರು ಎಕರೆಯಷ್ಟು ಅಗಾಧವಾಗಿರುವ ಕೆರೆಯ ನೀರನ್ನು ಸಂಪೂರ್ಣವಾಗಿ ಹೊರಹಾಕಿ ಒತ್ತುವರಿ ಮಾಡಿಕೊಳ್ಳಲು ಪ್ಲಾನ್​ ಮಾಡಲಾಗ್ತಿದೆ. ಈಗಾಗಲೇ ಕಾಲು ಭಾಗದಷ್ಟು ಕೆರೆ ಭೂಮಾಫಿಯಾಕ್ಕೆ ಬಲಿಯಾಗಿದ್ದು, ಸಂಬಂಧಪಟ್ಟ ಇಲಾಖೆಗಳು ಇನ್ನೂ ಕೂಡ ಕಣ್ಮುಚ್ಚಿಕುಳಿತಿವೆ.

0

Leave a Reply

Your email address will not be published. Required fields are marked *