ಕೊಡಗಿನಲ್ಲಿ ಭಾರೀ ಮಳೆ, ಪ್ರವಾಹ, ಭೂಕುಸಿತ ಹಿನ್ನೆಲೆ

ಕೊಡಗಿನಲ್ಲಿ ಭಾರೀ ಮಳೆ, ಪ್ರವಾಹ, ಭೂಕುಸಿತ ಹಿನ್ನೆಲೆ, ಅಪಾಯದಲ್ಲಿ ಸಿಲುಕಿದ ಸಾವಿರಾರು ಜನ. ಸಂತ್ರಸ್ಥರ ರಕ್ಷಣೆಗೆ ಹರಸಾಹಸ, 70 ಯೋಧರು ರಕ್ಷಣಾ ಕಾರ್ಯದಲ್ಲಿ ನಿರತ, ಮಡಿಕೇರಿಯಲ್ಲಿ ಸಚಿವ ಆರ್.ವಿ ದೇಶಪಾಂಡೆ ಹೇಳಿಕೆ. ಮಂಗಳೂರಿನಿಂದ 80 ಯೋಧರು ಆಗಮಿಸುತ್ತಿದ್ದಾರೆ, ಮೈಸೂರು, ಹಾಸನದಿಂದ ಕಂದಾಯ, ಆರೋಗ್ಯ ಇಲಾಖೆಯ ಸಿಬ್ಬಂದಿಗಳ ನಿಯೋಜನೆ, ರಾಜ್ಯದ ವಿವಿಧೆಡೆಯಿಂದ ವೈದ್ಯಕೀಯ ತಂಡಗಳ ಆಗಮಿಸುತ್ತಿದೆ.  ಜಿಲ್ಲೆಯಾದ್ಯಂತ ವಿದ್ಯುತ್ ಸಂಪರ್ಕ ಕಡಿತ ಹಿನ್ನೆಲೆ, ಮೈಸೂರಿನಿಂದ ಸೀಮೆಎಣ್ಣೆ ಪೂರೈಕೆಗೆ ಸೂಚನೆ, ಅಗತ್ಯವಿರುವ ಎಲ್ಲೆಡೆ ಗಂಜಿಕೇಂದ್ರಗಳನ್ನ ತೆರೆಯಲು ಸೂಚನೆ. ಜಿಲ್ಲೆಯಲ್ಲಿರುವ ಎಲ್ಲಾ ಜೆಸಿಬಿಗಳ ವಶಕ್ಕೆ ಪಡೆದುಕೊಳ್ಳುವಂತೆ ಎಸ್ಪಿಗೆ ಸೂಚನೆ, ತ್ವರಿತವಾಗಿ ರಸ್ತೆಗಳ ತೆರವು ಕಾರ್ಯವನ್ನ ಮಾಡಲು ಸೂಚನೆ. ಹೆಲಿಕಾಪ್ಟರ್ ನಿಂದ ರಕ್ಷಣೆಗೆ ಹಾವಾಮಾನ ಅಡ್ಡಿ, ವಾತಾವರಣ ತಿಳಿಯಾದರಷ್ಟೇ ಸಂತ್ರಸ್ಥರ ಸ್ಥಳಕ್ಕೆ ಹೋಗಲು ಸಾಧ್ಯವೆಂದ ಸಚಿವರು.

ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು, ಕಾಲೂರು , ಗಾಳಿಬೀಡು, ಮುಟ್ಲು, ಹಮ್ಮಿಯಾಲಗಳಲ್ಲಿ ಬೆಟ್ಟಗಳು ನೋಡುತ್ತಿದ್ದಂತೆ ಕುಸಿಯುತ್ತಿದ್ದು, ನೂರಾರು ಕುಟುಂಬಗಳು ಸಿಲುಕಿಕೊಂಡಿದ್ದು ಜೀವ ಉಳಿಸುವಂತೆ ಮೊರೆ ಇಡುತ್ತಿದ್ದಾರೆ. ಪ್ರವಾಸಿತಾಣ ಮಾಂದಲ್ ಪಟ್ಟಿ ಹಾಗೂ ಕೋಟೆ ಬೆಟ್ಟ ಕೂಡ ಕುಸಿಯಲು ಆರಂಭಿಸಿದ್ದು ಜನರು ಭಯಭೀತರಾಗಿದ್ದಾರೆ. ಮಡಿಕೇರಿ ಸೇರಿದಂತೆ ಜಿಲ್ಲೆಯ ವಿವಿದೆಡೆ ಗಂಜಿಕೇಂದ್ರವನ್ನು ಪ್ರಾರಂಭಿಸಲಾಗಿದೆ. ಮಡಿಕೇರಿಯಲ್ಲಿ ನೂರಾರು ಜನರು ಗಂಜಿಕೇಂದ್ರದಲ್ಲಿ ಬೀಡುಬಿಟ್ಟಿದ್ದಾರೆ. ಇಂದು ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆಆಗಮಿಸಿದ ಪರಿಶೀಲನೆ ನಡೆಸಿದ್ದಾರೆ. ಆದರೆ ಇದುವರೆಗೂ ಸೇನಾ ಹೆಲಿಕಾಪ್ಟರ್ ಜಿಲ್ಲೆಗೆ ಆಗಮಿಸಿಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಎಂದೂ ಕಂಡು ಕೇಳರಿಯದಷ್ಟು ಜಲಪ್ರಳಯ ಉಂಟಾಗಿದೆ.

0

Leave a Reply

Your email address will not be published. Required fields are marked *