ಕೊಡಗಿನಲ್ಲಿ ಮಹಾಮಳೆಯ ಆರ್ಭಟ: ಹಲವು ಗ್ರಾಮಗಳು ಕಣ್ಮರೆಯಾಗುವ ಆತಂಕ

ಕೊಡಗಿನಲ್ಲಿ ಮುಂದುವರಿದ ಮಹಾಮಳೆಯ ಆರ್ಭಟ, ಕಣ್ಮರೆಯಾಗುವ ಸ್ಥಿತಿಯಲ್ಲಿ ಮಕ್ಕಂದೂರು, ಮುಕ್ಕೋಡ್ಲು, ಕಾಲೂರು ಗ್ರಾಮಗಳು. ಕುಸಿಯುತ್ತಲೇ ಇರುವ ಬೃಹತ್ ಗುಡ್ಡಗಳು, ಆತಂಕದಿಂದ ಮನೆ ತೊರೆದ ನೂರಾರು ಕುಟುಂಬಗಳು. ಈವರೆಗೆ ಸುಮಾರು 837 ಮಂದಿಯ ರಕ್ಷಣೆ, 1 ಸಾವಿರಕ್ಕೂ ಅಧಿಕ ಜನರಿಗೆ ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ. ಅಧಿಕೃತವಾಗಿ 6 ಮಂದಿ ಸಾವು, ಇನ್ನೂ ಹಲವರು ಮೃತಪಟ್ಟಿರುವ ಶಂಕೆ, ಕೊಡಗಿಗೆ ಧಾವಿಸಿರುವ ಡೋಗ್ರಾ ರೆಜ್‌ಮೆಂಟ್‌ನ 60 ಸೈನಿಕರು. ಭಾರತೀಯ ಸೇನಾ ಪಡೆಯ ತಾಂತ್ರಿಕ ವಿಭಾಗದ 73 ಸೈನಿಕರು,12 ಜನ ಪರಿಣಿತ ಮುಳುಗು ತಜ್ಞರು, 200 ಅಗ್ನಿಶಾಮಕ ದಳ ಸಿಬ್ಬಂದಿ, ನಾಗರಿಕ ರಕ್ಷಣಾ ಪಡೆಯಿಂದ ನನಡೆಯುತ್ತಿರುವ ರಕ್ಷಣಾಕಾರ್ಯ.

400 ಜನ ಸಂತ್ರಸ್ಥರ ರಕ್ಷಣಾ ಪಡೆಗಳಿಂದ ರಕ್ಷಣೆ, ಚೇರಂಬಾಣೆಯಲ್ಲಿ ಭಾರಿ ಮಳೆ, ಭೂಕುಸಿತದಿಂದ ಬೆಟ್ಟ ಹತ್ತಿ ಕುಳಿತಿದ್ದ 400 ಜನ, ಕಳೆದ 2 ದಿನಗಳಿಂದ ಗುಡ್ಡ ಹತ್ತಿ ಕುಳಿತಿದ್ದ ಗ್ರಾಮಸ್ಥರ ರಕ್ಷಣೆ. ಕೊಡಗಿಗೆ ಆಗಮಿಸಿದ ಸೇನಾ ಹೆಲಿಕ್ಯಾಪ್ಟರ್, ಹಾರಂಗಿ ಜಲಾಶಯ ಬಳಿಯ ಹೆಲಿಪ್ಯಾಡ್ ಗೆ ಆಗಮಿಸಿದ ಸೇನಾ ಹೆಲಿಕ್ಯಾಪ್ಟರ್, ಹವಾಮಾನ ವೈಪರೀತ್ಯದಿಂದ ಕಾರ್ಯಾಚರಣೆಗೆ ಅಡ್ಡಿ. ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್, ಸೇನಾ ಸಿಬ್ಬಂದಿ, ಪೊಲೀಸ್ ಇಲಾಖೆ, ಅಗ್ನಿಶಾಮಕದಳದಿಂದ ಮುಂದುವರಿದ ಕಾರ್ಯಾಚರಣೆ. ಹವಮಾನ ವೈಪರಿತ್ಯದಿಂದ ಸೇನಾ ಹೆಲಿಕಾಪ್ಟರ್ ಕಾರ್ಯಾಚರಣೆಗೂ ಅಡ್ಡಿ, ಮುಂದುವರಿದಿರುವ ಗುಡ್ಡ ಕುಸಿತ, ಸುರಕ್ಷಿತ ಪ್ರದೇಶಗಳಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರು.

0

Leave a Reply

Your email address will not be published. Required fields are marked *