ಕೇಂದ್ರದ ಅಧಿಸೂಚನೆಗೆ ತಡೆ ನೀಡುವುದಿಲ್ಲ ಎಂದ ಕೇರಳ ಹೈಕೋರ್ಟ್

ತಿರುವನಂತಪುರ: ದನಕರುಗಳ ಮಾರಾಟ, ಸಾಕಣೆ ಮತ್ತು ಹತ್ಯೆ ಕುರಿತು ಕೇಂದ್ರ ಸರ್ಕಾರ ಹೊರಡಿಸಿರುವ ನೂತನ ಅಧಿಸೂಚನೆಯನ್ನು ರದ್ದುಗೊಳಿಸಬೇಕು ಎಂಬ ಮನವಿಯನ್ನು ಕೇರಳ ಹೈಕೋರ್ಟ್​ ವಜಾಗೊಳಿಸಿದೆ. ಅಲ್ಲದೇ, ಅರ್ಜಿಯ ವಿಚಾರಣೆಯನ್ನು ಜೂನ್ 28ಕ್ಕೆ ಮುಂದೂಡಿದೆ. ಈ ಹಿಂದೆ ಕೇರಳ ಹೈಕೋರ್ಟ್, ಕೇಂದ್ರ ಸರ್ಕಾರದ ನೂತನ ಅಧಿಸೂಚನೆಯಲ್ಲಿ ಗೋಹತ್ಯೆಯನ್ನು ನಿಷೇಧಿಸಿಲ್ಲ ಎಂದು ಅಭಿಪ್ರಾಯಪಟ್ಟಿತ್ತು.

ಅಲ್ಲದೇ, ಬೃಹತ್ ಪ್ರಮಾಣದಲ್ಲಿ ಹಸುಗಳ ಮಾರಾಟವನ್ನು ನಿಯಂತ್ರಿಸುತ್ತದೆ ಎಂದಿತ್ತು. ಕೇರಳ ರಾಜ್ಯ ಕಾಂಗ್ರೆಸ್​​ ಕಾರ್ಯದರ್ಶಿ ಟಿ ಎಸ್ ಸಾಜಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ, ನೂತನ ಅಧಿಸೂಚನೆಯ ಪ್ರಕಾರ, ದೇಶದ ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆಯೇ ಅಥವಾ ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸುತ್ತದೆಯೇ ಎಂದು ಕೂಡ ಪ್ರಶ್ನಿಸಿದೆ. ಕೇಂದ್ರದ ನಿರ್ಧಾರವನ್ನು ವಿರೋಧಿಸಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್, ಗೋ ಹತ್ಯೆ ವಿಷಯದಲ್ಲಿ ಕೇಂದ್ರ ನಿರ್ಧಾರ ಕೈಗೊಳ್ಳುವ ಹಕ್ಕು ಕೇಂದ್ರ ಸರ್ಕಾರಕ್ಕೆ ಇಲ್ಲ ಎಂದಿದ್ದರು.

0

Leave a Reply

Your email address will not be published. Required fields are marked *