ಸೇನಾ ಜೀಪ್​ಗೆ ಮಾನವ ಗುರಾಣಿ ಬಳಕೆ: ರಕ್ಷಣಾ ಸಚಿವಾಲಯಕ್ಕೆ ಎನ್​​ಎಚ್​​ಆರ್​ಸಿ ನೊಟೀಸ್

ನವದೆಹಲಿ: ಕಾಶ್ಮೀರದಲ್ಲಿ ಕಲ್ಲೆಸೆತದ ವಿರುದ್ಧ ಮಾನವ ಗುರಾಣಿ ಬಳಸಿದ್ದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ರಕ್ಷಣಾ ಸಚಿವಾಲಯಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನೊಟೀಸ್ ನೀಡಿದೆ. ಅಲ್ಲದೇ, ಈ ಪ್ರಕರಣದ ಕುರಿತು ತೆಗೆದುಕೊಂಡಿರುವ ಕ್ರಮಗಳ ಕುರಿತು 4 ವಾರಗಳ ಒಳಗೆ ಮಾಹಿತಿ ನೀಡುವಂತೆ ಸೂಚಿಸಿದೆ.

ಕಳೆದ ಏಪ್ರಿಲ್ 8ರಂದು ಕಲ್ಲೆಸೆಯುವವರ ವಿರುದ್ಧ, ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ, ಫಾರೂಖ್ ಅಹಮದ್ ದಾರ್ ಎಂಬ ಯುವಕನನ್ನು ಸೇನೆಯ ಜೀಪ್​ಗೆ ಕಟ್ಟಿ ಕಲ್ಲೆಸೆಯುವವರ ವಿರುದ್ಧ ಮಾನವ ಗುರಾಣಿಯನ್ನಾಗಿ ಬಳಸಲಾಗಿತ್ತು. ಈ ಪ್ರಕರಣದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಭುವನೇಶ್ವರ ಮೂಲದ ಸಾಮಾಜಿಕ ಕಾರ್ಯಕರ್ತರೊಬ್ಬರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಾನವ ಹಕ್ಕುಗಳ ಆಯೋಗ ರಕ್ಷಣಾ ಸಚಿವಾಲಯಕ್ಕೆ ನೊಟೀಸ್ ನೀಡಿದೆ.

0

Leave a Reply

Your email address will not be published. Required fields are marked *