ಮುಂಬೈಗೆ ಕಾರ್ತಿ ಚಿದಂಬರಂ ಕರೆ ತಂದ ಸಿಬಿಐ: ಮುಖರ್ಜಿ ದಂಪತಿಯೊಂದಿಗೆ ವಿಚಾರಣೆ

ದೆಹಲಿ/ಮುಂಬೈ: ಕಾರ್ತಿ ಚಿದಂಬರಂ ಅವರನ್ನು ಹೆಚ್ಚಿನ ವಿಚಾರಣೆಗೆ ಮುಂಬೈಗೆ ಕರೆ ತರಲಾಗಿದೆ. ಇಂದ್ರಾಣಿ ಮುಖರ್ಜಿ ಮತ್ತು ಪೀಟರ್ ಮುಖರ್ಜಿ ದಂಪತಿಯೊಂದಿಗೆ ಕಾರ್ತಿ ವಿಚಾರಣೆಯನ್ನು ಸಿಬಿಐ ನಡೆಸಲಿದೆ. ಸದ್ಯಕ್ಕೆ ಈ ದಂಪತಿ ಬೈಕುಲಾ ಸೆರೆಮನೆಯಲ್ಲಿರುವ ಕಾರಣದಿಂದಾಗಿ ಕಾರ್ತಿಯವರನ್ನು ಕೂಡ ಇದೇ ಸೆರೆಮನೆಗೆ ಕರೆದೊಯ್ದು, ಸಿಬಿಐ ವಿಚಾರಣೆ ನಡೆಸಲು ಮುಂದಾಗಿದೆ. ಐಎನ್​ಎಕ್ಸ್ ಮೀಡಿಯಾ ಅವ್ಯವಹಾರ ಪ್ರಕರಣ ಸಂಬಂಧ ಚೆನ್ನೈನಲ್ಲಿ ಬಂಧನಕ್ಕೊಳಗಾಗಿ ವಿಚಾರಣೆ ಎದರುಸಿಸುತ್ತಿರುವ ಅವರನ್ನು ಸಿಬಿಐ ವಶಕ್ಕೆ ಕೋರ್ಟ್ ಒಪ್ಪಿಸಿತ್ತು.

ಈ ಹಿನ್ನೆಲೆಯಲ್ಲಿ ಅಕ್ರಮ ಹಣ ವರ್ಗಾವಣೆ ಮತ್ತು ಸ್ವಜನ ಪಕ್ಷಪಾತ ಸೇರಿದಂತೆ ವಿವಿಧ ಆಯಾಗಳಲ್ಲಿ ಸಿಬಿಐ ವಿಚಾರಣೆ ನಡೆಸುತ್ತಿದೆ. ಯುಪಿಎಯ 2007-08ರ ಅಧಿಕಾರಾವಧಿಯಲ್ಲಿ ಅಂದಿನ ಹಣಕಾಸು ಸಚಿವ ಪಿ ಚಿದಂಬರಂ ಪುತ್ರ ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದ 3 ವರ್ಷಗಳ ನಂತರ 2017ರಲ್ಲಿ ಈ ಕುರಿತು ತನಿಖೆ ಚುರುಕುಪಡೆದುಕೊಂಡಿತ್ತು. ಅಧಿಕಾರಕ್ಕೆ ಬಂದ 3 ವರ್ಷಗಳವರೆಗೆ ಈ ಪ್ರಕರಣವನ್ನು ಕೇಂದ್ರ ಸರ್ಕಾರ ಮತ್ತು ತನಿಖಾ ಸಂಸ್ಥೆಗಳು ಯಾಕೆ ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂಬ ಪ್ರಶ್ನೆ ಸದ್ಯಕ್ಕೆ ಉದ್ಭವವಾಗಿದೆ. ತನಿಖೆ ಕುರಿತು ಪ್ರತಿಕ್ರಿಯಿಸಿದ್ದ ಕಾಂಗ್ರೆಸ್, ತನಿಖೆಯನ್ನು ಸ್ವಾಗತಿಸಿದ್ದು, ಸತ್ಯ ಹೊರಬರಲಿ ಎಂದಿದೆ.

0

Leave a Reply

Your email address will not be published. Required fields are marked *