ಅಕ್ಷಯ ತೃತೀಯದಂದು ನಾಮಪತ್ರ ಸಲ್ಲಿಸಲು ರೆಡಿಯಾದ್ರು ಅಭ್ಯರ್ಥಿಗಳು…

ಮಂತ್ರಕ್ಕೆ ಮಾವಿನಕಾಯಿ ಉದುರುತ್ತಾ, ಎಲೆಕ್ಷನ್​ ಟೈಮ್​ನಲ್ಲಿ ಜ್ಯೋತಿಷ್ಯ, ಟೆಂಪಲ್​ ರನ್​ ಅಂತಾ ಗಿರಕಿ ಹೊಡೆದ್ರೆ ಚುನಾವಣೆಯಲ್ಲಿ ಗೆಲುವು ಸಿಗುತ್ತಾ.. ನಮ್ಮ ಜನಪ್ರತಿನಿಧಿಗಳ ನಡೆ ನೋಡಿದ್ರೆ ಹೌದು ಅನ್ನೀಸುತ್ತೆ.. ಈ ಬಾರಿ ಎಲೆಕ್ಷನ್​ನಲ್ಲಿ ಏನಾದ್ರು ಮಾಡಿ ಗೆಲುವು ಸಾಧಿಸ್ಲೇ ಬೇಕು ಅನ್ನೋ ಹಠಕ್ಕೆ ಬಿದ್ದಿರೋ ಜನಪ್ರತಿನಿಧಿಗಳು ಜ್ಯೋತಿಷಿಗಳ ಮಾರ್ಗದರ್ಶನದಲ್ಲಿ ಇದೀಗ ಹೊಸದೊಂದು ಮಾರ್ಗದ ಮೂಲಕ ಗೆಲುವಿನ ಕನಸ್ಸು ಕಾಣುತ್ತಿದ್ದಾರೆ.ಎಲೆಕ್ಷನ್​… ಎಲೆಕ್ಷನ್… ​ ಎಲೆಕ್ಷನ್… ​ ಈಗ ಎಲ್ಲರ ಬಾಯಲ್ಲೂ ಚುನಾವಣೆಯದ್ದೇ ಮಾತು. ಈ ಸರಿ ನಮ್​ ಅಣ್ಣಾನೇ ಗೆಲ್ಲೋದು, ಹೇ ಈ ಸರಿ ನಮ್ಮ ಬಾಸೇ ಪಕ್ಕಾ ಗೆಲ್ಲೋದು, ಅನ್ನೋ ಮಾತುಗಳು ಜನಪ್ರತಿನಿಧಿಗಳ ಬೆಂಬಲಿಗರ ಬಾಯಲ್ಲಿ ಕೇಳಿ ಬರ್ತಾ ಇವೆ. ಇವಿಷ್ಟು ಒಂದ್​ ಕಡೆಯಾದ್ರೆ, ಏನಾದ್ರು ಮಾಡಿ ಈ ಸರಿ ಟಿಕೆಟ್​ ಪಡಿಲೇ ಬೇಕು ಅಂತಾ ಹಠಕ್ಕೆ ಬಿದ್ದು ದಿಗ್ಗಜ ನಾಯಕರ ಮನೆ ಸುತ್ತುತ್ತಾ ಇದ್ದಾರೆ ಕೆಲ ಟಿಕೆಟ್​ ಆಕಾಂಕ್ಷಿ ನಾಯಕರು. ಟಿಕೆಟ್​ ಪಕ್ಕಾ ಆಗಿರೋರು ಗೆಲುವಿಗಾಗಿ ನಾನಾ ಕಸರತ್ತು ಆರಂಭಿಸಿದ್ದಾರೆ. ಇದೀಗ ಹರಿದಾಡ್ತಾ ಇರೋ ವಿಷ್ಯ ಏನಪ್ಪ ಅಂದ್ರೆ, ಅಭ್ಯರ್ಥಿಗಳು ಪರ್ಟಿಕ್ಯುಲರ್​ ಆ ದಿನದಂದೇ ನಾಮಪತ್ರ ಸಲ್ಲಿಸಿದ್ರೆ ಗೆಲುವು ಪಕ್ಕಾ ಅಂತಾ ಜ್ಯೋತಿಷ್ಯಗಳು ಹೇಳ್ತಾ ಇದ್ದಾರೆ .. ಆ ದಿನ ಬೇರಾವುದು ಅಲ್ಲಾ ಅಕ್ಷಯ ತೃತೀಯ.. ನಾಳೆ ಅಕ್ಷಯ ತೃತೀಯ ದಿನವಾದ್ದರಿಂದ ನಾಳೆ ನಾಮಪತ್ರ ಸಲ್ಲಿಸಲು ಹಲವಾರು ಜನಪ್ರತಿನಿಧಿಗಳು ರೆಡಿಯಾಗಿದ್ದಾರೆ. ಅವ್ರಿಗೆ ಸಜೆಸ್ಟ್ ಮಾಡ್ತಾ ಇರೋದು ಜ್ಯೋತಿಷಿಗಳು..

ಅಕ್ಷಯ ತೃತೀಯಾ ದಿನದಂದು ನಾಮ ಪತ್ರ ಸಲ್ಲಿಸಿದ್ರೆ ಗೆಲುವು ಪಕ್ಕಾ ಅಂತೇ.. ಈ ದಿನದಂದು ಚಿನ್ನ ಖರೀದಿ ಮಾಡಿದ್ರೆ ಒಳಿತಾಗುತ್ತೆ ಅನ್ನೋ ನಂಬಿಕೆ ನಮ್ಮ ಮಹಿಳೆಯರಿಗಿದೆ.. ಆದ್ರೆ ಅವತ್ತೇ ನಾಮ ಪತ್ರ ಸಲ್ಲಿಸಿದ್ರೆ ಗೆದ್ದೆ ಗೆಲ್ತೀವಿ ಅನ್ನೋ ವಿಶ್ವಾಸ ಅಭ್ಯರ್ಥಿಗಳಿಗೆ ಬಂದಿರೋದು ಕಾಕತಳೀಯ ಅನ್ನೋದಕ್ಕಿಂತ ಇದೆಲ್ಲಾ ಜ್ಯೋತಿಷಿಗಳ ಪ್ರಭಾವ ಅಂದ್ರು ತಪ್ಪಿಲ್ಲಾ, ಇನ್ನೂ ಇದನ್ನಾ ನಂಬಿ ಈಗಾಗಲೇ ಅದೆಷ್ಟೋ ನಾಯಕರು ನಾಮಿನೇಷನ್​ ಫೈನ್​ನ ರೆಡಿ ಮಾಡ್ಕೋಂಡು 18 ನೇ ತಾರೀಖಿಗಾಗಿ ಕಾಯ್ತಾ ಇದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಾ ಇವೆ. ಇನ್ನು ಈ ಕುರಿತು ಜನಪ್ರತಿನಿಧಿಗಳನ್ನು ಮಾತನಾಡಿಸಿದ್ರೆ ಅಕ್ಷಯ ತೃತೀಯದಂದು ನಾಮಪತ್ರ ಸಲ್ಲಿಸಲು ರೆಡಿಯಾಗಿರೋದು ಹೌದು.. ಆದ್ರೆ ಕ್ಯಾಮೆರಾ ಮುಂದೆ ಮಾತ್ರ ಮಾತನಾಡಲ್ಲ ಅಂತಿದ್ದಾರೆ.ಅಕ್ಷಯ ತೃತೀಯಕ್ಕೆ ಒಂದು ದಿನ ಮುನ್ನಾ ನಾಮಪತ್ರ ಸಲ್ಲಿಕೆ ಶುರುಮಾಡಿರೋ ಚುನಾವಣಾ ಆಯೋಗಕ್ಕೆ ಬಹುಷ: ಜ್ಯೋತಿಷಿಗಳು ಮನಸ್ಸಲ್ಲೇ ಧನ್ಯವಾದ ಹೇಳ್ತಾ ಇದ್ದಾರೆ ಬಿಡಿ. ಇನ್ನು ಅವತ್ತೇ ನಾಮಪತ್ರ ಸಲ್ಲಿಸಿ ಈ ಸಲ ಚುನಾವಣೆಯಲ್ಲಿ ಗೆಲುವು ನಮ್ದೆ ಅಂತಾ, ಆರ್​ಸಿಬಿ ಅಭಿಮಾನಿಗಳು ಕಪ್​ ನಮ್ದೇ ಅಂತಾ ಹೇಳೋ ತರಾ ಹೇಳ್ತಾ ಇದ್ದಾರೆ. ಒಟ್ಟಾರೆ ಇದಕ್ಕೆ ಉತ್ತರ ಸಿಗೋದು ಮಾತ್ರ ಮೇ 15 ಕ್ಕೆ ಮತದಾರ ಪ್ರಭು ಬರೆದಿರೋ ಜ್ಯೋತಿಶ್ಯ ಹೊರಬರುತ್ತಲ್ಲ ಅವಾಗ.

ಸುಬ್ರಹ್ಮಣ್ಯ ಎಸ್ ಹಂಡಿಗೆ ಸುದ್ದಿ ಟಿವಿ ಬೆಂಗಳೂರು

0

Leave a Reply

Your email address will not be published. Required fields are marked *