ಅಂತೂ ಇಂತು ಕಾಂಗ್ರೆಸ್ ಪಟ್ಟಿ ರಿಲೀಸ್…

ಒಂದು ವಾರದಿಂದ ಕೇಳಿಬರುತ್ತಿದ್ದ ಊಹಾಪೋಹಗಳಿಗೆ ಕಾಂಗ್ರೆಸ್ ಪಕ್ಷ ಪಟ್ಟಿಬಿಡುಗಡೆ ಮಾಡುವ ಮೂಲಕ ಆತಂಕಕ್ಕೆ ತೆರೆಎಳೆದಿದೆ. ಅಳೆದು ತೂಗಿ 2018 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಎಐಸಿಸಿ ಕೊನೆಗೂ ಪ್ರಕಟಿಸಿದೆ. ಕೆಲವರಿಗೆ ಖುಷಿಯಾಗಿದ್ದರೆ, ಮತ್ತೆ ಕೆಲವರಿಗೆ ಅಸಮಾದಾನವಾಗಿದೆ. ಇಂದು ಉಳಿದ 6 ಕ್ಷೇತ್ರಗಳ ಪಟ್ಟಿಯನ್ನು ರಿಲೀಸ್ ಮಾಡಲಿದ್ದಾರೆ.ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ, ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಪಟ್ಟಿಬಿಡುಗಡೆ ರಿಲೀಸ್ ಆಗುತ್ತಿವೆ. ಹಾಗೇ ನಿನ್ನೆ ರಾತ್ರಿ 218 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಎಐಸಿಸಿ ಕೊನೆಗೂ ಪ್ರಕಟಿಸಿದೆ. ಒಟ್ಟು 5 ಪುಟಗಳ ಪಟ್ಟಿ ಇದಾಗಿದೆ. ಎಲ್ಲಾ ಅಭ್ಯರ್ಥಿಗಳ ಹೆಸರನ್ನೂ ಏಕಕಾಲಕ್ಕೆ ಪ್ರಕಟಿಸುವ ಮೂಲಕ ಉಳಿದ ಪಕ್ಷಗಳ ಮೇಲೆ ಸಾಕಷ್ಟು ಒತ್ತಡ ಹೇರುವಲ್ಲಿ ಸಫಲವಾಗಿದ್ದಾರೆ.

ಸಿಎಂ ಸಿದ್ದರಾಮಯ್ಯ ಬದಾಮಿಯಿಂದ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಆದರೆ ಅಲ್ಲಿಂದ ಸ್ಪರ್ಧಿಸುತ್ತಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಿಂದ ಮಾತ್ರ ಸ್ಪರ್ದೆಗಿಳಿದಿದ್ದಾರೆ. ಎ.ಬಿ. ಮಾಲಕರೆಡ್ಡಿ, ಕಾಗೋಡು ತಿಮ್ಮಪ್ಪ, ಬಾಬೂರಾವ್ ಚಿಂಚನಸೂರು, ಖಮರುಲ್ ಇಸ್ಲಾಂ ಪತ್ನಿ ಕೆ. ಫಾತಿಮಾ, ಅಶೋಕ್ ಖೇಣಿ, ಮೋಟಮ್ಮ, ಬಿ.ಎಲ್. ಶಂಕರ್, ಡಾ. ಜಿ. ಪರಮೇಶ್ವರ್ ಸೇರಿದಂತೆ ಹಲವು ನಾಯಕರಿಗೆ ಟಿಕೆಟ್ ಪಕ್ಕಾ ಆಗಿದೆ.ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಂಡಿದೆ. ಒಟ್ಟು 224 ಅಭ್ಯರ್ಥಿಗಳ ಪಟ್ಟಿಯಲ್ಲಿ 218 ಪ್ರಕಟಮಾಡಿದೆ. ಬಾಕಿ ಉಳಿದ 6 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಇಂದು ಪ್ರಕಟಿಸಲಿದೆ. ಇನ್ನು ಸಿಎಂ ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹಗಳಿಗೆ ತೆರೆ ಬಿದ್ದಿದ್ದು,

ಚಾಮುಂಡೇಶ್ವರಿ ಕ್ಷೇತ್ರದಿಂದ ಸಿಎಂ ಸಿದ್ದರಾಮಯ್ಯ ಸ್ಪರ್ಧೆಗೆ ಸ್ಪಷ್ಟನೆ ನೀಡಿದ ಎಚ್.ಎಂ. ರೇವಣ್ಣ, ಹೈಕಮಾಂಡ್ ಮುಖ್ಯಮಂತ್ರಿಯವರಿಗೆ 2 ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ತಿಳಿಸಿದ್ರು, ಆದ್ರೆ, ಸಿಎಂ ಅವರು ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ರು ಅಂತ ಸ್ಪಷ್ಟನೆ ನೀಡಿದ್ರು.ಮಂಡ್ಯದಿಂದ ಅಂಬರೀಶ್ ಅವರಿಗೆ ಟಿಕೆಟ್ ನೀಡಲಾಗಿದೆ. ಜಯನಗರದಿಂದ ಸಚಿವ ರಾಮಲಿಂಗರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಸ್ಪರ್ಧಿಸುತ್ತಿದ್ದಾರೆ. ವರುಣಾದಿಂದ ಸಿಎಂ ಪುತ್ರ ಡಾ. ಯತೀಂದ್ರ ಸ್ಪರ್ಧಿಸಲಿದ್ದಾರೆ. ಕೊರಟಗೆರೆಯಿಂದ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ, ಬಾದಾಮಿಯಿಂದ ದೇವರಾಜ್ ಪಾಟೀಲ್, ಬಬಲೇಶ್ವರದಲ್ಲಿ ಎಂಬಿ ಪಾಟೀಲ್, ಜೇವರ್ಗಿಯಿಂದ ಅಜಯ್ ಸಿಂಗ್, ಗಂಗಾವತಿಯಿಂದ ಇಕ್ಬಾಲ್ ಅನ್ಸಾರಿ, ಧಾರವಾಡದಲ್ಲಿ ವಿನಯ್ ಕುಲಕರ್ಣಿ, ಹಳಿಯಾಳದಿಂದ ಆರ್ ವಿ ದೇಶಪಾಂಡೆ, ಕಾರವಾರದಲ್ಲಿ ಸತೀಶ್ ಸೈಲ್, ಹಿರೇಕೆರೂರು ನಲ್ಲಿ ಬಿಸಿ ಪಾಟೀಲ್, ಹಡಗಲಿಯಿಂದ ಪಿಟಿ ಪರಮೇಶ್ವರ್ ನಾಯ್ಕ್ ಟಿಕೆಟ್ ಪಡೆದಿದ್ದಾರೆ.

ಅಂತೆಯೇ ಬಳ್ಳಾರಿಯಿಂದ ಅನಿಲ್ ಲಾಡ್ಸ, ಹೊಳಲ್ಕರೆಯಿಂದ ಹೆಚ್ ಆಂಜನೇಯ, ದಾವಣಗೆರೆ ಉತ್ತರ ಕ್ಷೇತ್ರದಿಂದ ಹೆಚ್ ಹೆಚ್ ಮಲ್ಲಿಕಾರ್ಜುನ್, ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಶ್ಯಾಮನೂರು ಶಿವಶಂಕರಪ್ಪ, ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ, ಬ್ಯಾಟರಾಯನಪುರ ಕ್ಷೇತ್ರದಿಂದ ಕೃಷ್ಣ ಬೈರೇಗೌಡ, ಆರ್ ಆರ್ ನಗರದಲ್ಲಿ ಮುನಿರತ್ನ, ಕೋಲಾರದಲ್ಲಿ ಸೈಯ್ಯದ್ ಜಮೀರ್ ಪಾಷಾ ಅವರಿಗೆ ಟಿಕೆಟ್ ನೀಡಲಾಗಿದೆ.ಒಟ್ಟಿನಲ್ಲಿ ವಾರದ ಕುತೂಹಲಕ್ಕೆ ಕಾರಣವಾದ ಕಾಂಗ್ರೆಸ್ ಪಟ್ಟಿ ರಿಲೀಸ್ ಆಗಿದ್ದು, ಅಭ್ಯರ್ಥಿಗಳು ನಿಟ್ಟಿಸಿರು ಬಿಟ್ಟಿದ್ದಾರೆ.

ಬ್ಯೂರೂ ರಿಪೋರ್ಟ್ ಸುದ್ದಿಟಿವಿ

0

Leave a Reply

Your email address will not be published. Required fields are marked *