ಮೋದಿ ದೃಷ್ಟಿಕೋನಕ್ಕೆ ತಕ್ಕಂತೆ ರಾವತ್ ವರ್ತನೆ: ಪ್ರಕಾಶ್ ಕಾರಟ್

ನವದೆಹಲಿ: ಜನರಲ್ ಬಿಪಿನ್ ರಾವತ್ ಕಾಶ್ಮೀರದಲ್ಲಿ ಪ್ರತಿಭಟನೆ ನಡೆಸುತ್ತಿರುವವರನ್ನು ನಿರ್ವಹಿಸುತ್ತಿರುವ ಕ್ರಮದ ಕುರಿತು ಸಿಪಿಐನ ಪ್ರಕಾಶ್ ಕಾರಟ್ ದಾಳಿ ನಡೆಸಿದ್ದಾರೆ. ಜನರಲ್ ರಾವತ್ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ರಾಜಕೀಯ ಪ್ರತಿಭಟನೆಗಳನ್ನು ಹತ್ತಿಕ್ಕಲು ಸೇನಾಪಡೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಬಿಪಿನ್ ರಾವತ್ ಅವರು, ಕಾಶ್ಮೀರಿಗರು ಸೇನೆಯ ಮೇಲೆ ಕಲ್ಲೆಸೆಯುವುದರ ಬದಲು ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಿದರೆ, ನನಗೆ ಉತ್ತಮ ಆಯ್ಕೆಯ ಅವಕಾಶ ಲಭಿಸುತ್ತದೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ಪ್ರಕಾಶ್ ಕಾರಟ್ ಬಿಪಿನ್ ರಾವತ್ ವಿರುದ್ಧ ಕಿಡಿಕಾರಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ, ಪ್ರಕಾಶ್ ಕಾರಟ್ ಅವರಿಂದ ಸೇನೆಗೆ ಅವಮಾನವಾಗಿದೆ ಎಂದು ಕಾರಟ್ ಹೇಳಿಕೆಯನ್ನು ಖಂಡಿಸಿದೆ.

0

Leave a Reply

Your email address will not be published. Required fields are marked *