ರೇಷನ್​ ಕಾರ್ಡ್​ನಲ್ಲಿ ಕಾಜಲ್​ ಅಗರ್​ವಾಲ್​ ಫೋಟೋ..!

ಚೆನ್ನೈನಲ್ಲಿ ಅಧಿಕಾರಿಗಳ ಯಡವಟ್ಟಿನಿಂದ ಮಹಿಳೆಯೊಬ್ಬರ ರೇಷನ್‌ ಕಾರ್ಡ್‌ನಲ್ಲಿ ನಟಿ ಕಾಜಲ್ ಅಗರವಾಲ್ ಫೋಟೋ ಮುದ್ರಣವಾಗಿದೆ.ರೇಷನ್ ಕಾರ್ಡ್ ನೋಡಿ ಅಚ್ಚರಿಗೊಂಡ ಮಹಿಳೆ ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಪ್ರಿಂಟಿಂಗ್ ತಪ್ಪಿನಿಂದ ಈ ಯಡವಟ್ಟಾಗಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ. ಕಾಜಲ್ ಫೋಟೋ ಇರುವ ರೇಷನ್ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಧಿಕಾರಿಗಳ ಅವಾಂತರಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

0

Leave a Reply

Your email address will not be published. Required fields are marked *