ಕೋಮುವಾದದಿಂದ ದೇಶಕ್ಕೆ ಗಂಡಾತರ ಬರಲಿದೆ: ಕಾಗೋಡು ತಿಮ್ಮಪ್ಪ

ಬೆಂಗಳೂರು: ರಾಜ್ಯದಲ್ಲಿ ಕೋಮಭಾವನೆ ಕೆರಳಿಸುತ್ತಿರುವ ಗುಂಪುಗಳಿಗೆ, ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕೆಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸಲಹೆ ನೀಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಕಾಗೋಡು ತಿಮ್ಮಪ್ಪ, ಕೋಮುವಾದದಿಂದ ದೇಶಕ್ಕೆ ಗಂಡಾತರ ಬರಲಿದ್ದು, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವಂತೆಯೂ ಕೋಮು ಶಕ್ತಿಗಳಿಗೆ ಕರೆಕೊಟ್ಟರು. ಇನ್ನು ಸರ್ಕಾರ ಮತ್ತು ಪಕ್ಷದಲ್ಲಿ ಸಂಘರ್ಷ ಇದೆ ಅನ್ನೋದು ಅಪ್ರಬುದ್ಧತೆಯ ಮಾತು ಎಂದ ಕಾಗೋಡು ತಿಮ್ಮಪ್ಪ ಮುಖ್ಯಮಂತ್ರಿಗಳ ನೇತೃತ್ವದಲ್ಲೇ ಚುನಾವಣೆ ಎದುರಿಸಬೇಕು. ಪಕ್ಷದ ಅಧ್ಯಕ್ಷರದ್ದೂ ಚುನಾವಣೆಯಲ್ಲಿ ಜವಾಬ್ದಾರಿ ಇದೆ ಎಂದು ಹೇಳಿದರು. ಇನ್ನು ಕಾಂಗ್ರೆಸ್​ ಉಸ್ತುವಾರಿ ಸಚಿವ ವೇಣುಗೋಪಾಲ್ ವಿರುದ್ಧ ಬಿಜೆಪಿ ಆರೋಪ ಬಾಲಿಶ ತನದ್ದು. ಹೈಕಮಾಂಡ್ ಅಧ್ಯಕ್ಷರ ಆದೇಶದಂತೆ ವೇಣುಗೋಪಾಲ್ ನಮಗೆಲ್ಲ ಮಾರ್ಗದರ್ಶನ ನೀಡ್ತಾರೆ. ಈ ಬಗ್ಗೆ ಬಿಜೆಪಿ ಯಾಕೆ ಮಾತನಾಡಬೇಕು ಎಂದು ಕಾಗೋಡು ತಿಮ್ಮಪ್ಪ ಪ್ರಶ್ನಿಸಿದರು.

ಇದೇ ವೇಳೆ ಮಾತನಾಡಿದ ಅವರು ವಾಸಿಸುವವನೇ ಮನೆಯೊಡೆಯ ಕಾಯ್ದೆಯಡಿ 2012ಕ್ಕಿಂತ ಮುಂಚೆ ಮನೆ ಕಟ್ಟಿಕೊಂಡಿರಬೇಕೆಂಬ ನಿಯಮವನ್ನು 2015ಕ್ಕೆ ವಿಸ್ತರಿಸಲಾಗಿದೆ. 2012 ರ ಬದಲು 2015ಕ್ಕೆ ಮುಂಚೆ ಮನೆ ಕಟ್ಟಿಕೊಂಡಿದ್ದವರಿಗೆ ಕಾಯ್ದೆಯಡಿ ಅದೇ ಜಾಗ ಸ್ವಂತವಾಗಲಿದೆ ಅಂದರು. ವಾಸಿಸುವವನೇ ಮನೆಯೊಡೆಯ ಕಾಯ್ದೆಯಡಿ ಖಾಸಗಿ ಪ್ರದೇಶಗಳಲ್ಲಿ ದಶಕಗಳಿಂದ ವಾಸಿಸುತ್ತಿರುವ ತಾಂಡಾ, ಕ್ಯಾಂಪ್, ಹಟ್ಟಿ, ವಡ್ಡರ ಹಟ್ಟಿ ಸಮುದಾಯವವರಿಗೆ ಅದೇ ಜಾಗ ನೀಡಲು ಅವಕಾಶ ಇದೆ. ಈಗಾಗಲೇ ಕಾಯ್ದೆಯಡಿ 6 ರಿಂದ 7 ಲಕ್ಷ ಅರ್ಜಿಗಳು ಬಂದಿವೆ ಎಂದು ತಿಳಿಸಿದರು.

0

Leave a Reply

Your email address will not be published. Required fields are marked *