ಪ್ರಜಾಪ್ರಭುತ್ವದಲ್ಲಿ ಪ್ರಧಾನಿ ಖಂಡನೆ ಸಮರ್ಥನೀಯ: ಆನಂದ್ ಶರ್ಮ

ನವದೆಹಲಿ: ಪ್ರಧಾನಿ ಮೋದಿಯವರ ಕುರಿತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ವಿಮರ್ಶೆಯನ್ನು ಕಾಂಗ್ರೆಸ್ ಪಕ್ಷ ಸಮರ್ಥಿಸಿಕೊಂಡಿದೆ. ಪ್ರಜಾಪ್ರಭುತ್ವದಲ್ಲಿ ಪ್ರಧಾನಿಯ ನಡೆಯನ್ನು ಖಂಡಿಸುವುದು ಸಮರ್ಥನೀಯ ಮತ್ತು ಅವರು ಈಗಿನಿಂದಲೇ ಇದಕ್ಕೆ ಸಿದ್ಧರಾಗಬೇಕು ಎಂದು ಪಕ್ಷ ಹೇಳಿದೆ.

ನವದೆಹಲಿಯಲ್ಲಿ ಸುದ್ದಿ ಗೋಷ್ಠಿ ನಡೆಸಿದ ಕಾಂಗ್ರೆಸ್ ರಾಜ್ಯಸಭೆ ಸದಸ್ಯ ಆನಂದ್ ಶರ್ಮ, ಅಮೆರಿಕದ ಬರ್ಕ್​​ಲಿ ಯ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಲ್ಲಿ ರಾಹುಲ್ ಗಾಂಧಿಯವರು ಪ್ರಧಾನಿ ವಿರುದ್ಧ ಆಡಿದ ಮಾತುಗಳು ಕ್ಷುಲ್ಲಕವಲ್ಲ ಎಂದರು. ರಾಹುಲ್ ಅವರು, ಮೋದಿಯವರನ್ನು ದೇಶದ ಪ್ರಧಾನಿ ಎಂದೇ ಕರೆದಿದ್ದಾರೆ. ಆದರೆ, ಪ್ರಜಾಪ್ರಭುತ್ವದಲ್ಲಿ ಪ್ರಧಾನಿಯನ್ನೂ ಖಂಡಿಸುವುದಕ್ಕೆ ಅವಕಾಶವಿದೆ ಎಂದರು. ಅಲ್ಲದೇ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಆಡಳಿತಾರೂಡ ಸರ್ಕಾರ ಬಲವಂತವಾಗಿ ತನ್ನ ಸಿದ್ಧಾಂತವನ್ನು ಜನರ ಮೇಲೆ ಹೇರುತ್ತಿದೆ ಎಂದು ಆರೋಪಿಸಿದರು.

0

Leave a Reply

Your email address will not be published. Required fields are marked *