ಜೋಧ್​​ಪುರದಲ್ಲಿ ಪೊಲೀಸ್ ಪೇದೆಯಾದ ತೃತೀಯ ಲಿಂಗಿ

ಜೋಧ್​ಪುರ: ರಾಜಸ್ಥಾನದ ಜೋಧ್​ಪುರದಲ್ಲಿ ತೃತೀಯ ಲಿಂಗಿ ಗಂಗಾ ಕುಮಾರಿ ಪೊಲೀಸ್ ಪೇದೆಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಹೈಕೋರ್ಟ್ ನಿರ್ದೇಶದನ್ವಯ ಈ ನೇಮಕಕ್ಕೆ ರಾಜ್ಯ ಸರ್ಕಾರ ಅಸ್ತು ಎಂದಿದೆ. ಜಲೋರ್​​ನ ಗಂಗಾ ಕುಮಾರಿ ಜಲೋರ್​​​ನ ಪೊಲೀಸ್ ಅಧೀಕ್ಷಕರು ಎಲ್ಲ ಅರ್ಹತೆಗಳನ್ನು ಹೊಂದಿದ್ದರೂ ಉದ್ಯೋಗ ನೀಡಿಲ್ಲ ಎಂದು ದೂರು ಸಲ್ಲಿಸಿದ್ದರು. ನ್ಯಾ. ದಿನೇಶ್ ಮೆಹ್ತಾ ಈ ಸಂಬಂಧ ಆದೇಶವನ್ನು ಹೊರಡಿಸಿದ್ದರು. ರಾಜಸ್ಥಾನದಲ್ಲಿ ಇದೇ ಮೊದಲ ಬಾರಿ ಮತ್ತು ದೇಶದಲ್ಲಿ ಮೂರನೇ ತೃತೀಯ ಲಿಂಗಿ ಪೊಲೀಸ್ ಹುದ್ದೆಗೆ ಸೇರಿದಂತಾಗಿದೆ.

0

Leave a Reply

Your email address will not be published. Required fields are marked *